AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ ಕೊಡೋದಿಲ್ಲ; ಚರ್ಚೆಗೆ ಗ್ರಾಸವಾಯ್ತು ತಹಶೀಲ್ದಾರ್ ಆದೇಶ

ಪಡಿತರ ಪಡೆಯುವುದು ಪ್ರತಿಯೊಬ್ಬ ನಾಗರೀಕರ ಹಕ್ಕಾಗಿದ್ದು ನಿಲ್ಲಿಸಲು ಬರುವುದಿಲ್ಲ .ಏಕೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಉಚಿತ ಪಡಿತರ ವಿತರಣೆ ಆಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಆಹಾರವನ್ನು ನಿಲ್ಲಿಸಲು ಬರುವುದಿಲ್ಲ.

ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ ಕೊಡೋದಿಲ್ಲ; ಚರ್ಚೆಗೆ ಗ್ರಾಸವಾಯ್ತು ತಹಶೀಲ್ದಾರ್ ಆದೇಶ
ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ ಇಲ್ಲ!
TV9 Web
| Edited By: |

Updated on: Aug 27, 2021 | 12:21 PM

Share

ಚಿಕ್ಕಬಳ್ಳಾಪುರ : ಕೊರೊನಾ ಲಸಿಕೆ ತೆಗೆದುಕೊಳ್ಳದೇ ಇರುವವರಿಗೆ ಪಡಿತರ ನಿಲ್ಲಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಆದೇಶ ಮಾಡಿದ್ದಾರೆ. ಲಸಿಕೆ ಪಡೆಯದಿದ್ದರೆ ಪಡಿತರ ನಿಲ್ಲಿಸಿ ಎನ್ನುವ ಆದೇಶ ಇಡೀ ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದ್ದು, ತಹಶೀಲ್ದಾರ್ ಅವರ ಈ ಆದೇಶ ಪಡಿತರದಾರಿಗೆ ಗಾಬರಿಯನ್ನ ಉಂಟು ಮಾಡಿ, ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ.

ಪ್ರಜ್ಞಾವಂತರ ವಲಯದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದ್ದು ಸಾರ್ವಜನಿಕರ ಮನವೊಲಿಸಿ ಸ್ವಯಂಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ತಮ್ಮ ಲೋಪ ದೋಷಗಳನ್ನು ಮುಚ್ಚಿಕೊಳ್ಳಲು ಪಡಿತರ ನಿಲ್ಲಿಸುವ ಬೆದರಿಕೆಯೊಡ್ಡುವ ಮೂಲಕ ಲಸಿಕೆ ಮೊರೆ ಹೋಗಿರುವುದು ಸರಿಯಲ್ಲ ಎನ್ನುತ್ತಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಗುಂಪು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದರೂ ಹಾಕಿಕೊಳ್ಳದ ಜನಕ್ಕೆ ಈ ರೀತಿಯಲ್ಲದೆ ಬೇರೆ ಇನ್ಯಾವ ರೀತಿಯಲ್ಲಿ ತಿಳಿಹೇಳಲು ಸಾಧ್ಯ. ತಹಶೀಲ್ದಾರ್ ಸರಿಯಾಗಿಯೇ ಹೇಳಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ನಾಣ್ಣುಡಿಯಂತೆ ಗ್ರಾಮೀಣ ಪ್ರದೇಶದ ಜನ ಈಗಲಾದರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾದರೆ ಮೂರನೇ ಅಲೆಯಿಂದ ಜೀವ ಉಳಿಸಿಕೊಳ್ಳಲು ನೆರವಾಗುತ್ತದೆ ಎಂದು ವಾದಿಸಿದ್ದಾರೆ.

ತಹಶೀಲ್ದಾರ್ ಹೊರಡಿಸಿದ ಆದೇಶದಲ್ಲಿ ಏನಿದೆ? ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೊವಿಡ್ ವ್ಯಾಕ್ಸಿನ್ ಪಡೆಯದವರಿಗೆ ಪಡಿತರ ವಿತರಣೆ ನಿಲ್ಲಿಸುವ ಬಗ್ಗೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ. 1. ಈ ಸಂಬಂಧ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಕೊರೊನಾ ಲಸಿಕೆ ಖಾತರಿ ಬಗ್ಗೆ ಡಂಗೂರ ಸಾರಿಸಿ ಪ್ರಚಾರ ಮಾಡಿಸಬೇಕು. 2. ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಪಡಿತರ ಪಡೆಯಬೇಕಾದರೆ ಮೊದಲ ಅಥವಾ ಸಮಯ ಆಗಿದ್ದರೆ ಎರಡನೇ ಡೋಸ್ ಪಡೆದ ಬಗ್ಗೆ ಪ್ರಮಾಣ ಪತ್ರ ತಂದು ತೋರಿಸಬೇಕು. 3. ಎರಡನೇ ಡೋಸ್ ಪಡೆಯಲು ಇನ್ನೂ ಕಾಲಾವಕಾಶವಿದೆಯೇ ಅಥವಾ ಇಲ್ಲವೆ? ಎಂಬ ಬಗ್ಗೆ ಪರಿಶೀಲಿಸಬೇಕು. ಅವಧಿ ಮೀರಿದ್ದಲ್ಲಿ ಲಸಿಕೆ ಪಡೆದ ನಂತರವಷ್ಟೇ ಪಡಿತರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು. 4. ವ್ಯಾಕ್ಸಿನ್ ಪಡೆದಿರುವ ಪ್ರಮಾಣ ಪತ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಡೆದು ತರಲು ತಿಳಿಸಬೇಕು. 5. 2 ನೇ ಡೋಸ್ ಲಸಿಕೆ ಪಡೆದ ಬಗ್ಗೆ ಮೊಬೈಲ್ ಸಂದೇಶ ಪರಿಶೀಲಿಸಿ ಪರಿಗಣಿಸುವುದು. 6. ಲಸಿಕೆ ಪಡೆಯದವರ ಮಾಹಿತಿಯನ್ನ ಆಶಾಕಾರ್ಯಕರ್ತೆಯರಿದಿಂದ ಪಡೆದುಕೊಳ್ಳುವುದು. 7. ಕೊರೊನಾ ಲಸಿಕೆ ಪಡೆಯದವರಿಗೆ ಪಡಿತರ ವಿತರಿಸುವುದಿಲ್ಲ ಎಂಬ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ತಿಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ತಹಶೀಲ್ದಾರ್ ಹನುಮಂತರಾಯಪ್ಪ, ನಾನು ಪಡಿತರ ನಿಲ್ಲಿಸಿ ಎಂದು ಹೇಳಿಲ್ಲ. ಮೊದಲ ಹಂತದ ಲಸಿಕೆ ಅಭಿಯಾನದಲ್ಲಿ ತಾಲ್ಲೂಕು ಮೊದಲ ಸ್ಥಾನದಲ್ಲಿತ್ತು. ಈ ಬಾರಿಯೂ ಕೂಡ ಅದೇ ಸ್ಥಾನ ಪಡೆಯುವ ಹಂಬಲದಲ್ಲಿ ಹೀಗೆ ಹೇಳಿದ್ದೇನೆ. ತಾಲೂಕಿನಲ್ಲಿ ಮೊದಲ ಡೋಸ್ ಲಸಿಕೆ ಪಡೆದವರು ಶೇ. 60 ರಷ್ಟಿದ್ದರೆ ಎರಡನೇ ಡೋಸ್ ಲಸಿಕೆ ಪಡೆದವರು ಶೇ 4೦ ರಷ್ಟಿದ್ದಾರೆ. ಕೊರೋನಾ ಸಂಪೂರ್ಣವಾಗಿ ದೂರವಾಗಿಲ್ಲದಿದ್ದರೂ ಜನತೆ ಮುಖಗವಸು ಧರಿಸದೆ, ದೈಹಿಕ ಅಂತರ ಕಾಪಾಡದೆ ಬೇಕಾಬಿಟ್ಟಿ ಓಡಾಡುತ್ತಾರೆ. ದಂಡವನ್ನು ವಿಧಿಸಿದರೂ ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿ ಅವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹೇಳಿದ್ದೇನೆ ವಿನಃ ಪಡಿತರವನ್ನ ಖಡಾಖಂಡಿತವಾಗಿ ನಿಲ್ಲಿಸಿಲ್ಲ, ವಿತರಣೆ ಮಾಡಲಾಗುತ್ತಿದೆ ಅಂತ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಆಹಾರ ಪೂರೈಕೆ ನಾಗರೀಕ ಸರಬರಾಜು ಇಲಾಖೆ ಉಪನಿದೇರ್ಶಕಿ ಸವಿತಾ, ಜನತೆ ಲಸಿಕೆ ಪಡೆಯಲಿ ಎನ್ನುವ ಒಳ್ಳೆಯ ಸದುದ್ದೇಶದಿಂದ ಈ ರೀತಿ ಜ್ಞಾಪನಾ ಪತ್ರ ಹೊರಡಿಸಿದೆ ವಿನಃ ದುರುದ್ದೇಶದಿಂದ ಆದೇಶ ಮಾಡಿಲ್ಲ ಎಂದಿದ್ದಾರೆ.

ಪಡಿತರ ಯಾಕೆ ನಿಲ್ಲಿಸಬಾರದು? ಪಡಿತರ ಪಡೆಯುವುದು ಪ್ರತಿಯೊಬ್ಬ ನಾಗರೀಕರ ಹಕ್ಕಾಗಿದ್ದು ನಿಲ್ಲಿಸಲು ಬರುವುದಿಲ್ಲ .ಏಕೆಂದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಉಚಿತ ಪಡಿತರ ವಿತರಣೆ ಆಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಆಹಾರವನ್ನು ನಿಲ್ಲಿಸಲು ಬರುವುದಿಲ್ಲ.

ಇದನ್ನೂ ಓದಿ: Covid-19: ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ 

ರಾಯಚೂರು: ಕೊವಿಡ್ ಲಸಿಕೆ ನಿರಾಕರಿಸಿದವರಿಗೆ ಪಡಿತರ ಕಟ್!

(Chikkaballapur Tahsildar orders to stop Ration for people who do not take corona Vaccine)

Follow Us
TV9 Web
TV9 Web

TV9 Kannada

Read More
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ