ರಾಯಚೂರು: ಕೊವಿಡ್ ಲಸಿಕೆ ನಿರಾಕರಿಸಿದವರಿಗೆ ಪಡಿತರ ಕಟ್!
ಕೊವಿಡ್ ಲಸಿಕೆ ಪಡೆದಿರುವ ಬಗ್ಗೆ ದೃಢೀಕರಿಸಿದ ನಂತರವೇ, ಪಡಿತರ ವಿತರಿಸಬೇಕೆಂದು ತಹಶೀಲ್ದಾರರಾದ ಡಾ.ಹಂಪಣ್ಣ ಅವರು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಯಚೂರು: ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದವರಿಗೆ ಪಡಿತರ ನೀಡದಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ರಾಯಚೂರು ತಹಶೀಲ್ದಾರರು ಸೂಚನೆ ನೀಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕರು ಆಗಸ್ಟ್ ತಿಂಗಳ ಪಡಿತರ ವಿತರಣೆಗೆ ಮುನ್ನ ಪಡಿತರ ಚೀಟಿದಾರರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು, ಕೊವಿಡ್ ಲಸಿಕೆ ಪಡೆದಿರುವ ಬಗ್ಗೆ ದೃಢೀಕರಿಸಿದ ನಂತರವೇ, ಪಡಿತರ ವಿತರಿಸಬೇಕೆಂದು ತಹಶೀಲ್ದಾರರಾದ ಡಾ.ಹಂಪಣ್ಣ ಅವರು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಲಸಿಕೆ ಪಡೆಯಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕೆಲ ಅಪನಂಬಿಕೆ ಮತ್ತು ವದಂತಿಗಳು ಹೀಂದೇಟಿಗೆ ಕಾರಣವಾಗಿದೆ. ಕೊವಿಡ್ ಮೂರನೇ ಅಲೆ ಹರಡುವ ಮುನ್ನ ಪ್ರತಿಯೊಬ್ಬರು ಕಡ್ಡಾಯವಾಗಿ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ತಹಶೀಲ್ದಾರರಾದ ಡಾ.ಹಂಪಣ್ಣ ಈ ಆದೇಶ ಹೊರಡಿಸಿದ್ದಾರೆ.
ಕೊವಿಡ್ ಲಸಿಕೆ ಹಾಕಿಸಿಕೊಂಡರೆ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಬಹುದು. ಕೊವಿಡ್ ಮೂರನೇ ಅಲೆ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಪ್ರತಿಯೊಬ್ಬರು ಕೊವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿದ್ದರೂ ಸಹ ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವುದರಿಂದ ತಹಶೀಲ್ದಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪಡಿತರ ಧಾನ್ಯ ವಿತರಿಸಬೇಕೆಂದು ಆದೇಶಿರುವುದರಿಂದ ಇದುವರೆಗೂ ಒಂದು ಬಾರಿಯೂ ಲಸಿಕೆ ಹಾಕಿಸಿಕೊಳ್ಳದವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಇಲ್ಲದಿದ್ದರೆ ಪಡಿತರ ಪಡೆಯದಂತಾಗುತ್ತದೆ ಎನ್ನುವುದು ಮಾತ್ರ ಸತ್ಯ.
ಇದನ್ನೂ ಓದಿ:
ಕೊವಿಡ್ ನಡುವೆ ಲಕ್ಷಾಂತರ ಬಡವರಿಗೆ ಉಚಿತ ಪಡಿತರ ನೆರವಿಗೆ ಬಂದಿದೆ: ನರೇಂದ್ರ ಮೋದಿ
ಮೂರನೇ ಡೋಸ್ ಕೊರೊನಾ ಲಸಿಕೆ ನೀಡುವುದಕ್ಕೆ ಒಪ್ಪಿಗೆ ಸೂಚಿಸಿದ ಸಿಡಿಸಿ; ಆದ್ಯತೆ ಮೇರೆಗೆ ವಿತರಿಸಲು ಸೂಚನೆ
Published On - 12:36 pm, Mon, 16 August 21