ವಯೋಸಹಜ ಕಾಯಿಲೆಯಿಂದ ಸಾಕು ನಾಯಿ ಸಾವು, ದುಃಖ ಹಂಚಿಕೊಂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರ ಮುದ್ದಿನ ನಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡುವ ಮೂಲಕ ದುಃಖವನ್ನು ಹಂಚಿಕೊಂಡಿದ್ದಾರೆ.

ವಯೋಸಹಜ ಕಾಯಿಲೆಯಿಂದ ಸಾಕು ನಾಯಿ ಸಾವು, ದುಃಖ ಹಂಚಿಕೊಂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ
Edited By:

Updated on: Jul 12, 2021 | 11:48 AM

ಬೆಂಗಳೂರು: ಸಾಕು ಪ್ರಾಣಿಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ನಾಯಿ- ಬೆಕ್ಕುಗಳನ್ನು ಸಾಕುವವರಿಗೆ ಆ ಪ್ರಾಣಿಗಳೇ ಸರ್ವಸ್ವವೂ ಆಗಿರುತ್ತವೆ. ಮಾಲೀಕ ಮತ್ತು ಸಾಕು ಪ್ರಾಣಿಯ ನಡುವೆ ಅವಿನಾಭಾವ ಸಂಬಂಧ ಬೆಳೆದಿರುತ್ತದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರ ಮುದ್ದಿನ ನಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡುವ ಮೂಲಕ ದುಃಖವನ್ನು ಹಂಚಿಕೊಂಡಿದ್ದಾರೆ. ಇಂದು ನಮ್ಮ ಮನೆಯ ಮುದ್ದಿನ ನಾಯಿ “ಸನ್ನಿ” ವಯೋಸಹಜದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: International Anti Drug Day 2021: ನಾಳೆ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗುವುದು: ಗೃಹ ಸಚಿವ ಬಸವರಾಜ್ ಬೊಮ್ಮಾಯಿ