ದೆಹಲಿ ಕರ್ನಾಟಕ ಭವನ ಐಎಎಸ್​ ಅಧಿಕಾರಿಗಳಿಗೆ ಸ್ವರ್ಗವೋ ಸ್ವರ್ಗ! ನಾಲ್ವರು ಅಧಿಕಾರಿಗಳನ್ನು ನೇಮಿಸಿರುವ ಸರಕಾರ

Delhi Karnataka Bhvan: ಸುಖಮಯ ಜೀವನ ಆಸ್ವಾದಿಸಲು ಕರ್ನಾಟಕ ಭವನಕ್ಕೆ ಅಧಿಕಾರಿಗಳಾಗಿ ಬರುತ್ತಾರೆ ಎಂಬ ಆರೋಪವಿದೆ. ಕೇಂದ್ರದ ಸಚಿವಾಲಯಗಳನ್ನು ಸಂಪರ್ಕಿಸಿ ರಾಜ್ಯದ ಯೋಜನೆಗಳಿಗೆ ಏನಾದ್ರೂ ಒತ್ತಾಯಿಸಿದ್ದಾರಾ..? ರಾಜ್ಯಕ್ಕೆ ಸಂಬಂಧಿಸಿದ ಫೈಲ್ ಗಳ ಬಗ್ಗೆ ಗಮನಹರಿಸುತ್ತಿದ್ದಾರಾ..? ಎಂಬುದೂ ಗೊತ್ತಿಲ್ಲ. ಹಾಗೆ ನೋಡಿದರೆ ರಾಜ್ಯದ ಎಷ್ಟೋ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ದೆಹಲಿ ಕರ್ನಾಟಕ ಭವನ ಐಎಎಸ್​ ಅಧಿಕಾರಿಗಳಿಗೆ ಸ್ವರ್ಗವೋ ಸ್ವರ್ಗ! ನಾಲ್ವರು ಅಧಿಕಾರಿಗಳನ್ನು ನೇಮಿಸಿರುವ ಸರಕಾರ
ದೆಹಲಿ ಕರ್ನಾಟಕ ಭವನ ಐಎಎಸ್​ ಅಧಿಕಾರಿಗಳಿಗೆ ಸ್ವರ್ಗವೋ ಸ್ವರ್ಗ! ನಾಲ್ವರು ಅಧಿಕಾರಿಗಳನ್ನು ನೇಮಿಸಿದ ಸರಕಾರ
Follow us
| Updated By: ಸಾಧು ಶ್ರೀನಾಥ್​

Updated on: Jul 12, 2021 | 1:34 PM

ದೆಹಲಿ ಕರ್ನಾಟಕ ಭವನದಲ್ಲಿ ಇರುವುದು ಕೇವಲ 80 ಸಿಬ್ಬಂದಿ. ದೆಹಲಿಯಲ್ಲಿರುವ ಮೂರು ಕರ್ನಾಟಕ ಭವನಗಳ ಪೈಕಿ ಒಂದನ್ನು ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡಲಾಗಿದೆ. ಇನ್ನುಳಿದ ಎರಡರಲ್ಲಿ ಒಂದನ್ನು ಕೊರೊನಾ ಕಾರಣಗಳಿಗೆ ಬಂದ್ ಮಾಡಲಾಗಿದೆ. ಇರುವ ಒಂದು ಭವನಕ್ಕಾಗಿ 80 ಸಿಬ್ಬಂದಿಯಿದ್ದಾರೆ. ಆ 80 ಸಿಬ್ಬಂದಿಗಳನ್ನು ನೋಡಿಕೊಳ್ಳಲು 3 ಐಎಎಸ್ ಅಧಿಕಾರಿಗಳು, ಓರ್ವ ಐಎಫ್ ಎಸ್ ಅಧಿಕಾರಿಯನ್ನು ಸರಕಾರ ನೇಮಿಸಿದೆ.

ಕೊರೊನಾ ಹೊಡೆತಕ್ಕೆ ನಲುಗಿರುವ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯಿದೆ. ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಅಗತ್ಯ ಹಿಂದೆದಿಗಿಂತ ಹೆಚ್ಚಾದೆ. ಹೀಗಿರುವಾಗ ದೆಹಲಿ ಕರ್ನಾಟಕ ಭವನಕ್ಕೆ ಸರಕಾರ ಸಾಲು ಸಾಲು ಅಧಿಕಾರಿಗಳನ್ನು ನೇಮಿಸುತ್ತಿದೆ. ದೆಹಲಿಯಲ್ಲಿ ಕರ್ನಾಟಕ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಕಾವೇರಿ, ಶರಾವತಿ, ಭೀಮಾ ಮೂರು ಭವನಗಳಿವೆ.

ಮೂರು ಭವನಗಳ ಪೈಕಿ ಭೀಮಾ ಭವನವನ್ನು ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡಲಾಗಿದೆ. ಶರಾವತಿ ಭವನಕ್ಕೆ ಕೊರೊನಾ ಕಾಲದಲ್ಲಿ ಅತಿಥಿಗಳಿಗೆ ಅವಕಾಶ ನೀಡುತ್ತಿಲ್ಲ.‌ ಶರಾವತಿ ಭವನದಲ್ಲಿ ವಾಸ್ತವ್ಯ ಹೂಡಲು ತಾತ್ಕಾಲಿಕವಾಗಿ ಅತಿಥಿಗಳಿಗೆ ನಿರ್ಬಂಧವಿದೆ. ಇನ್ನು ಮುಖ್ಯ ಭವನ ಕಾವೇರಿ ಮಾತ್ರ ಅತಿಥಿಗಳಿಗೆ ಓಪನ್ ಇದೆ. ಕಾವೇರಿ ಭವನದಲ್ಲಿ ಕೇವಲ ಸಿಎಂ, ಮಂತ್ರಿಗಳು, ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು, ಮಾಜಿ ಮಂತ್ರಿಗಳು ಬಂದು ವಾಸ್ತವ್ಯ ಹೂಡಬಹುದಾಗಿದೆ‌.

ಕಾವೇರಿ ಭವನಕ್ಕೆ ಪ್ರಸ್ತುತ ದಿನಕ್ಕೆ ಒಬ್ಬರು ಅಥವಾ ಇಬ್ಬರು ಅತಿಥಿಗಳು ಬರುತ್ತಿದ್ದಾರೆ‌. ಒಟ್ಟು ಕರ್ನಾಟಕ ಭವನದಲ್ಲಿ ಅಡುಗೆ ಕೆಲಸದವರು ವಾಹನ ಚಾಲಕರು ಸೇರಿದಂತೆ ಸುಮಾರು 80 ಸಿಬ್ಬಂದಿಗಳಿದ್ದಾರೆ. 80 ಸಿಬ್ಬಂದಿಗಳನ್ನು ನೋಡಿಕೊಳ್ಳಲು 3 ಐಎಎಸ್, ಓರ್ವ ಐಎಫ್‌ಎಸ್‌ ಅಧಿಕಾರಿಯನ್ನು ಸರಕಾರ ನೇಮಿಸಿದೆ.

ಕರ್ನಾಟಕ ಭವನದಲ್ಲಿರುವ ಅಧಿಕಾರಿಗಳ ಪಟ್ಟಿ

ಇಮ್ಕೊಂಗ್ಲಾ ಜಮೀರ್ – ಐಎಎಸ್, ನಿವಾಸಿ ಆಯುಕ್ತರು ಗುರ್ನೀತ್ ತೇಜ್ – ಐಎಎಸ್, ಹೆಚ್ಚುವರಿ ನಿವಾಸಿ ಆಯುಕ್ತರು ವಿಜಯ್ ರಂಜನ್ -ಐಎಫ್ ಎಸ್, ವಿಶೇಷ ನಿವಾಸಿ ಆಯುಕ್ತರು ಖುಷ್ಬೂ ಚೌಧರಿ- ಐಎಎಸ್ , ಹೆಚ್ಚುವರಿ ನಿವಾಸಿ ಆಯುಕ್ತರು

ಇನ್ನು ಕರ್ನಾಟಕ ಭವನ ಉಪ ನಿವಾಸಿ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಪಿ. ಪ್ರಸನ್ನ ಕುಮಾರ್ ಒಂದು ವರ್ಷದ ಹಿಂದೆ ನೇಮಕವಾಗಿದ್ದಾರೆ. ಅವರು ಕರ್ನಾಟಕ ಭವನದಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಇವರ ಸುಧಾರಣೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ ಇನ್ನುಳಿದ ನಾಲ್ಕು ಅಧಿಕಾರಿಗಳ ನೇಮಕದ ಅಗತ್ಯತೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಒಂದು ಭವನ ನೋಡಿಕೊಳ್ಳಲು ಅಧಿಕಾರಿಗಳ ಸಂಪನ್ಮೂಲವನ್ನು ಸರಕಾರ ಅನಗತ್ಯವಾಗಿ ಬಳಸುತ್ತಿದೆ ಎಂಬ ಆರೋಪವಿದೆ.

ನಾಲ್ಕು ಅಧಿಕಾರಿಗಳಿಗೆ ಕಚೇರಿ ಹೊಂದಿಸುವುದಕ್ಕೆ‌ ಪರದಾಟ..!

ಈಗಿರುವ ಮುಖ್ಯ ಕರ್ನಾಟಕ ಭವನದಲ್ಲಿ ಕಾವೇರಿಯಲ್ಲಿ ರೂಂಗಳ ಕೊರತೆ ಎದುರಾಗಿದೆ. ಕಾವೇರಿ ಭವನದ ಹಳೆ ಕಟ್ಟಡವನ್ನು ನೆಲಸಮ ಮಾಡಿ ಇನ್ನೊಂದು ಕಟ್ಟದ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ. ಇರುವ ರೂಂಗಳಲ್ಲಿ ಸಾರಿಗೆ, ಸಿಬ್ಬಂದಿ ಆಡಳಿತ, ಕಾನೂನು, ಪ್ರೊಟೊಕಾಲ್, ವೈದ್ಯರು ಹೀಗೆ ಅನೇಕ ಕಚೇರಿಗಳಿಗೆ ಸ್ಥಳ ನೀಡಲಾಗಿದೆ.

ಅತಿಥಿಗಳು ವಾಸ್ತವ್ಯ ಹೂಡುವ ರೂಂಗಳನ್ನೇ ಕಚೇರಿಗಳನ್ನಾಗಿ ಪರಿವರ್ತಿಸಲಾಗಿದೆ. ಇನ್ನು ನಾಲ್ಕು ಅಧಿಕಾರಿಗಳಿಗೆ ಪ್ರತ್ಯೇಕ ಕಚೇರಿ, ಆಂಟಿ ಛೇಂಬರ್ ಗಳಿಗೆ ಅಂತಾ ಇನ್ನೂ ಹೆಚ್ಚಿನ ರೂಂಗಳನ್ನು ಪರಿವರ್ತನೆ ಮಾಡಬೇಕಾಗುತ್ತೆ. ಕರ್ನಾಟಕ ಭವನ 2 ಶರಾವತಿಯಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದ ಸಿಬ್ಬಂದಿಯನ್ನು ನೊಟೀಸ್ ನೀಡಿ ಬಲವಂತದಿಂದ ಸ್ಥಳಾಂತರ ಮಾಡುವಂತೆ ಸೂಚಿಸಲಾಗಿದೆ.

ದೆಹಲಿ ಕರ್ನಾಟಕ ಭವನ ಅಧಿಕಾರಿಗಳಿಗೆ ಸ್ವರ್ಗ …

ದೆಹಲಿ ಕರ್ನಾಟಕ ಭವನಕ್ಕೆ ಬರಲು ಅಧಿಕಾರಿಗಳು ಕ್ಯೂನಲ್ಲಿದ್ದಾರೆ. ನಾಲ್ಕು ಭಾರತೀಯ ಸೇವೆಯ ಅಧಿಕಾರಿಗಳು ಇದ್ದರು, ಕೊರೊನಾ ಸಂಕಷ್ಟದಲ್ಲಿ ಕನ್ನಡಿಗರಿಗೆ ನೆರವಾದ ಉದಾಹರಣೆ ಇಲ್ಲ. ಕೊರೊನಾ ಮೊದಲ ಅಲೆಯಲ್ಲಿ ದೆಹಲಿಯಲ್ಲಿರುವ ಕನ್ನಡಿಗರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿಸಿಕೊಟ್ಟಿದನ್ನು ಬಿಟ್ಟರೆ ಇನ್ಯಾವುದೇ ನೆರವು ನೀಡಿಲ್ಲ.

ಸುಖಮಯ ಜೀವನ ಆಸ್ವಾದಿಸಲು ಕರ್ನಾಟಕ ಭವನಕ್ಕೆ ಅಧಿಕಾರಿಗಳಾಗಿ ಬರುತ್ತಾರೆ ಎಂಬ ಆರೋಪವಿದೆ. ಕೇಂದ್ರದ ಸಚಿವಾಲಯಗಳನ್ನು ಸಂಪರ್ಕಿಸಿ ರಾಜ್ಯದ ಯೋಜನೆಗಳಿಗೆ ಏನಾದ್ರೂ ಒತ್ತಾಯಿಸಿದ್ದಾರಾ..? ರಾಜ್ಯಕ್ಕೆ ಸಂಬಂಧಿಸಿದ ಫೈಲ್ ಗಳ ಬಗ್ಗೆ ಗಮನಹರಿಸುತ್ತಿದ್ದಾರಾ..? ಎಂಬುದೂ ಗೊತ್ತಿಲ್ಲ. ಹಾಗೆ ನೋಡಿದರೆ ರಾಜ್ಯದ ಎಷ್ಟೋ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಕಳೆದ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭವನದ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದ್ದರು. ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಸಿಎಂಗೆ ಪತ್ರ ಬರೆದಿದ್ದರು. ನಳೀನ್ ಕುಮಾರ್ ಕಟೀಲ್‌ ಬರೆದ ಪತ್ರಕ್ಕೆ ಬಿಜೆಪಿ ಸಂಸದರು ಸಹಿ ಹಾಕಿದ್ರು. ಎಲ್ಲಾ ಗೊತ್ತಿದ್ದರೂ ಸರಕಾರ ಮಾತ್ರ ಒಬ್ಬರ ಮೇಲಂತೆ ಒಬ್ಬರನ್ನು ಭವನಕ್ಕೆ ಅಧಿಕಾರಿಗಳನ್ನು ನೇಮಿಸುತ್ತಲೇ ಬರುತ್ತಿದೆ. ಅದ್ಯಾವ ಐಎಎಸ್ ಲಾಬಿಗೆ ಸರಕಾರ ಮಣಿಯುತ್ತಿದೆಯೋ ದೇವರೆ ಬಲ್ಲ…!

(ಹರೀಶ್, ಟಿವಿ9 , ನವದೆಹಲಿ) (Delhi Karnataka Bhawan filled with IAS officers Happy stay for 4 officers and 80 staff)

 

ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?
ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?
ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಟಿಸಿ ಕೈಗೆ ಸಿಕ್ಕಿಬಿದ್ದರು
ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಟಿಸಿ ಕೈಗೆ ಸಿಕ್ಕಿಬಿದ್ದರು
ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್
ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್
ಅಭ್ಯರ್ಥಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕುಮಾರಸ್ವಾಮಿಗಿದೆ: ಆರ್ ಅಶೋಕ
ಅಭ್ಯರ್ಥಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕುಮಾರಸ್ವಾಮಿಗಿದೆ: ಆರ್ ಅಶೋಕ
ಕುಮಾರಸ್ವಾಮಿ ನಂತರ ಯೋಗೇಶ್ವರ್ ಚನ್ನಪಟ್ಟಣಕ್ಕೆ ಸೂಕ್ತ ಅಭ್ಯರ್ಥಿ: ಅಶ್ವಥ್
ಕುಮಾರಸ್ವಾಮಿ ನಂತರ ಯೋಗೇಶ್ವರ್ ಚನ್ನಪಟ್ಟಣಕ್ಕೆ ಸೂಕ್ತ ಅಭ್ಯರ್ಥಿ: ಅಶ್ವಥ್