ಈ ವರ್ಷ ಟೆಕ್ ಸಮಿಟ್ ಅನೇಕ ಹೊಸತನಗಳಿಗೆ ಸಾಕ್ಷಿಯಾಗಿದೆ, ನಮ್ಮಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿವೆ -ಸಚಿವ ಡಾ.ಅಶ್ವತ್ಥ ನಾರಾಯಣ್

TV9 Digital Desk

| Edited By: Ayesha Banu

Updated on: Nov 19, 2021 | 6:16 PM

ನಮ್ಮಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿದೆ. ನಮಗೆ ಅತಿಹೆಚ್ಚು ಸಂಖ್ಯೆಯಲ್ಲಿ ಮ್ಯಾನ್ ಪವರ್ ಬೇಕು ಅಂತ ವಿದೇಶಗಳ ಕಂಪನಿಗಳು ಒತ್ತಾಯ ಮಾಡಿದರು. ಕಳೆದ ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನ ಕೆಲಸ ಬದಲಾಯಿಸಿದ್ದಾರೆ. -ಸಚಿವ ಡಾ.ಅಶ್ವತ್ಥ ನಾರಾಯಣ್

ಈ ವರ್ಷ ಟೆಕ್ ಸಮಿಟ್ ಅನೇಕ ಹೊಸತನಗಳಿಗೆ ಸಾಕ್ಷಿಯಾಗಿದೆ, ನಮ್ಮಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿವೆ -ಸಚಿವ ಡಾ.ಅಶ್ವತ್ಥ ನಾರಾಯಣ್
ಡಾ. ಸಿ ಎನ್ ಅಶ್ವತ್ಥ ನಾರಾಯಣ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನವೆಂಬರ್ 17ರಂದು 24ನೇ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ಘಾಟಿಸಿದ್ದರು. ಸದ್ಯ ಟೆಕ್ ಸಮಿಟ್ ಸಂಬಂಧ ಸಚಿವ ಡಾ.ಅಶ್ವತ್ಥ ನಾರಾಯಣ್ ಸುದ್ದಿ ಗೋಷ್ಠಿ ನಡೆಸಿದ್ದಾರೆ.

ಬೆಂಗಳೂರು 24ನೇ ಟೆಕ್ ಸಮಿಟ್ ಯಶಸ್ವಿಯಾಗಿದೆ. ಈ ವರ್ಷ ಟೆಕ್ ಸಮಿಟ್ ಅನೇಕ ಹೊಸತನಗಳಿಗೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ, ಇಸ್ರೇಲ್ ಪ್ರಧಾನಿಗಳು, ಯುರೋಪ್ನ 27 ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 56 ಕಾಮನ್‌ವೆಲ್ತ್ ಸದಸ್ಯರು ಸಮಿಟ್ನಲ್ಲಿ ಭಾಗಿಯಾಗಿದ್ರು. ಈ ಕಾರ್ಯಕ್ರಮದಲ್ಲಿ 48 ದೇಶಗಳು ಭಾಗಿಯಾಗಿದ್ದವು. ದೊಡ್ಡ ಮಟ್ಟದಲ್ಲಿ ಸದಸ್ಯರ ಸಂಖ್ಯೆ ವಿಸ್ತರಣೆಯಾಗುತ್ತಿರುವುದು ಒಳ್ಳೆಯ ಸಂಕೇತ. ವಿಶ್ವ ಮಾನ್ಯತೆಯತ್ತ ಬೆಳೆಯುತ್ತಿರೋದು ಸಾಕಷ್ಟು ವಿಶ್ವಾಸ ಮೂಡಿಸಿದೆ. ಈ ದಿಕ್ಕಿನಲ್ಲಿ ಸಾಕಷ್ಟು ಪ್ರಯತ್ನ ಮಾಡಬೇಕು ಅಂತ ಬೆಂಗಳೂರು ಹೊರತುಪಡಿಸಿ ಅನೇಕ‌ ಕಾರ್ಯಕ್ರಮ ರೂಪಿಸಲಾಗಿದೆ. ಹುಬ್ಬಳ್ಳಿ, ಮೈಸೂರು, ಮಂಗಳೂರಿನಲ್ಲೂ ಕಾರ್ಯಕ್ರಮ ಮಾಡಲಾಗಿದೆ. ಈ ಮೂರು ನಗರಗಳಲ್ಲಿ ಮಿನಿ‌ ಟೆಕ್ ಸಮಿಟ್ ನಡೆದಿದೆ. ಬೆಂಗಳೂರಿನ ಮುಂದಿನ ನಾಯಕತ್ವದಡಿ ಸಮಾವೇಶ ನಡೆಸಲಾಯಿತು ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕೆಲಸ ನಮ್ಮಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿದೆ. ನಮಗೆ ಅತಿಹೆಚ್ಚು ಸಂಖ್ಯೆಯಲ್ಲಿ ಮ್ಯಾನ್ ಪವರ್ ಬೇಕು ಅಂತ ವಿದೇಶಗಳ ಕಂಪನಿಗಳು ಒತ್ತಾಯ ಮಾಡಿದರು. ಕಳೆದ ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನ ಕೆಲಸ ಬದಲಾಯಿಸಿದ್ದಾರೆ. ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕೆಲಸ ನೀಡುವುದಾಗಿ ಅನೇಕ ಕಂಪನಿಗಳು ಹೇಳಿವೆ. ಎನ್ ಇಪಿ ಮೂಲಕ ಹೊಸ ಶಿಕ್ಷಣದ ಅಡಿಯಲ್ಲಿ ವಿದ್ಯಾರ್ಥಿಗಳನ್ನು ನೀಡುವುದಾಗಿ ಹೇಳಿದ್ದೇವೆ. ಐಟಿ-ಬಿಟಿ‌ ಕ್ಷೇತ್ರದಲ್ಲಿ ಪ್ರತಿದಿನ ಪ್ರಾಡಕ್ಟ್ ಅಪ್ ಡೇಟ್ ಆಗುತ್ತಿರುತ್ತದೆ. ಅದೇ ರೀತಿಯಲ್ಲಿ ಕರ್ನಾಟಕ ಹೆಚ್ಚು ಕೆಲಸ ಮಾಡುವ ಭರವಸೆ ನೀಡಿದೆ. ಆವಿಷ್ಕಾರ ಮತ್ತು ಸ್ಟಾರ್ಟ್ ಅಪ್ ಗಳು ಭಾರತದ ಅರ್ಧದಷ್ಟು ಕರ್ನಾಟಕದಲ್ಲಿದೆ.

25ಕ್ಕೂ ಹೆಚ್ಚು ಯೂ‌ನಿಕಾರ್ನ್ ಸ್ಟಾರ್ಟ್ ಅಪ್‌ಗಳು ಒಂದೇ ವೇದಿಕೆಯಲ್ಲಿ ನಿಲ್ಲುವುದು ಸಾಕಷ್ಟು ಹೆಮ್ಮೆ ಮೂಡಿಸಿದೆ. ನಮ್ಮ ಬೆಂಗಳೂರಿಗೆ ಸೀಮಿತವಾಗದೇ ಬೇರೆ ಭಾಗದಲ್ಲೂ ವಿಸ್ತರಣೆ ಮಾಡಲು ಕಂಪನಿಗಳು ಒಪ್ಪಿವೆ. ಶಿಕ್ಷಣದಲ್ಲಿ ಭಾಗಿಯಾಗಿ ಉದ್ಯೋಗ ಹೆಚ್ಚಿಸಲು ಅನೇಕ‌ ಕಂಪನಿಗಳು ಮುಂದಾಗಿವೆ. ಕೇವಲ ತರಬೇತಿ‌ ನೀಡದೆ ನೀವೇಹೊಸ ಎಜ್ಯುಕೇಶನ್ ಸೆಕ್ಟರ್ ಆರಂಭ ಮಾಡಿ ಎಂದು ಹೇಳಿದ್ದೇವೆ. ಎಲೆಕ್ಟ್ರಾನಿಕ್ ಬ್ಯಾಟರಿಗಳನ್ನು ಚಾಮರಾಜನಗರ ಮತ್ತು ಹುಬ್ಬಳ್ಳಿಯಲ್ಲಿ ಆರಂಭ ಮಾಡಲು ಕಂಪನಿಗಳು ಮುಂದಾಗಿವೆ. ಫೈನಾನ್ಸಿಯಲ್ ಮಾರ್ಕೆಟ್‌ನಲ್ಲಿ ಕರ್ನಾಟಕ ದೊಡ್ಡ ಮಟ್ಟಿಗೆ ಬೆಳೆದಿದೆ. ಮಂಗಳೂರಿನಲ್ಲಿ ಫಿನ್‌ಟೆಕ್ ಸ್ಥಾಪನೆ ಮಾಡಲು ಹೇಳಿದ್ದೇವೆ. ಯುನೈಟೆಡ್ ಸ್ಟೇಟ್ಸ್‌ನ ಸ್ಟಾರ್ಟ್ ಅಪ್‌ಗಳಿಗೆ ಇಲ್ಲಿಂದ ಉದ್ಯೋಗ ನೀಡಲಾಗುತ್ತದೆ. ಸಿಲಿಕಾನ್ ವ್ಯಾಲಿಯಲ್ಲಿ ಇಲ್ಲಿನವರು ಉದ್ಯೋಗ ನಿರ್ವಹಿಸುತ್ತಾರೆ. ಮುಂದಿನ ವರ್ಷ ಇನ್ನಷ್ಟು ಹೆಚ್ಚು ಸಿದ್ದತೆ ಮಾಡಲಾಗುವುದು. ಆರೋಗ್ಯ, ಶಿಕ್ಷಣ, ಕಾಮರ್ಸ್, ಇಂಡಸ್ಟ್ರಿಯಲ್ಲಿ ಇನ್ನೂ ಅವಕಾಶ ಸೃಷ್ಟಿಯಾಗುವಂತೆ ಕಾರ್ಯ ನಿರ್ವಹಿಸುತ್ತೇವೆ. ಮುಂದಿನ ವರ್ಷ 2021- 22 ಸಾಲಿ‌ನಲ್ಲಿ ನವೆಂಬರ್ 16, 17, 18 ರಂದು ಟೆಕ್ ಸಮ್ಮಿಟ್ ನಡೆಸಲಾಗುತ್ತದೆ ಎಂದು ತಿಳಿಸಿದ್ರು.

ಇದನ್ನೂ ಓದಿ: ರಿಹಾನ್ನಾ, ಗ್ರೇಟಾ ಥನ್‌ಬರ್ಗ್‌, ಲಿಲ್ಲಿ ಸಿಂಗ್: ರೈತರ ಪ್ರತಿಭಟನೆ ಬೆಂಬಲಿಸಿದ ಅಂತರಾಷ್ಟ್ರೀಯ ಸೆಲೆಬ್ರಿಟಿಗಳಿವರು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada