ವಿಶ್ವ ಹಿರಿಯ ನಾಗರಿಕರ ದಿನದಂದು 7 ಹಿರಿಯ ನಾಗರಿಕರಿಗೆ ಸನ್ಮಾನ: ಸಚಿವ ಹಾಲಪ್ಪ ಆಚಾರ್
World Senior Citizens Day: ಇದೇ ದಿನ ರಾಷ್ಟ್ರೀಯ ಹಿರಿಯ ನಾಗರೀಕರ ಸಹಾಯವಾಣಿ ಲೋಕಾರ್ಪಣೆಗೊಳ್ಳಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಡೀ ದೇಶಕ್ಕೆ ಸಹಾಯವಾಣಿ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಅಕ್ಟೋಬರ್ 1ರಂದು 7 ಹಿರಿಯ ನಾಗರಿಕರಿಗೆ ಸನ್ಮಾನ ಮಾಡುತ್ತೇವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನ ಮಾಡುತ್ತೇವೆ. 1 ಲಕ್ಷ ನಗದು ಪ್ರಶಸ್ತಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಸನ್ಮಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿದ್ದಾರೆ. ಇದೇ ದಿನ ರಾಷ್ಟ್ರೀಯ ಹಿರಿಯ ನಾಗರೀಕರ ಸಹಾಯವಾಣಿ ಲೋಕಾರ್ಪಣೆಗೊಳ್ಳಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಡೀ ದೇಶಕ್ಕೆ ಸಹಾಯವಾಣಿ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳಾ ಸಾಂತ್ವನ ಕೇಂದ್ರ, ಮಹಿಳಾ ಒನ್ ಸ್ಟಾಪ್ ಸೆಂಟರ್ ಎರಡೂ ಒಂದೇ ಕೆಲಸ ಮಾಡುತ್ತಿದ್ದವು. ತಾಲೂಕು ಮಟ್ಟದ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ. ಎರಡೂ ಒಂದೇ ಕಡೆ ಇದ್ದಲ್ಲಿ ಒನ್ ಸ್ಟಾಪ್ ಸೆಂಟರ್ ಆಗಿ ಕೆಲಸ ಮಾಡುತ್ತವೆ. ಮಹಿಳಾ ಒನ್ ಸ್ಟಾಪ್ ಸೆಂಟರ್ ಮುಂದುವರಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿದ್ದಾರೆ.
ಕೊವಿಡ್‌ನಿಂದ ತಂದೆ, ತಾಯಿ ಕಳೆದುಕೊಂಡ ಮಕ್ಕಳು 456 ಮಂದಿ ಇದ್ದಾರೆ. ಹೆತ್ತವರಲ್ಲಿ ಒಬ್ಬರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ 3,878 ಆಗಿದೆ. ಇಂಥ ಮಕ್ಕಳಿಗೆ 3500 ರೂಪಾಯಿ ಮಾಸಿಕ ಸಹಾಯಧನ ನೀಡ್ತಿದ್ದೇವೆ ಎಂದು ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ಹಾಗೂ ಅವರಿಗೆ ಸಹಾಯಧನ ನೀಡುತ್ತಿರುವ ಬಗ್ಗೆ ಸಚಿವ ಹಾಲಪ್ಪ ಆಚಾರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 45 ದಶಲಕ್ಷ ಟನ್ ನಮಗೆ ಮರಳು ಅವಶ್ಯಕತೆ ಇದ್ದರೆ ಕೇವಲ 35 ದಶ ಲಕ್ಷ ಟನ್ ಮಾತ್ರ ಪೂರೈಕೆ ಆಗ್ತಿದೆ. ರಾಜ್ಯದಲ್ಲಿ 10 ದಶಲಕ್ಷ ಟನ್ ಮರಳು ಕೊರತೆ ಇದೆ. ಹೀಗಾಗಿ ಎಂ ಸ್ಯಾಂಡ್ ಆದ್ರೂ ಹೆಚ್ಚಳ ಮಾಡಬೇಕು. ಬೇರೆ ಏನಾದ್ರೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹೊಸ ಮರಳು ನೀತಿ ಇನ್ನೂ ಅನುಮೋದನೆಯಾಗಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿಲ್ಲ. ಉಚಿತವಾಗಿ ಮರಳು ನೀಡುವ ಪ್ರಸ್ತಾವವೂ ಇಲ್ಲ. ಹಿಂದಿನ ಸಚಿವರು ಏಕೆ ಹೀಗೆ ಹೇಳಿದ್ದರೆಂದು ಗೊತ್ತಿಲ್ಲ. ಮರಳು ನೀತಿ ಸರಳವಾಗಿರಬೇಕೆಂಬುದು ನನ್ನ ಉದ್ದೇಶ ಎಂದು ಬೆಂಗಳೂರಿನಲ್ಲಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಳ; ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಅಲ್ಲ: ಹಾಲಪ್ಪ ಆಚಾರ್
ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಅಕ್ರಮ ಮರಳು ಸಾಗಾಟ; ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ