ಬೆಂಗಳೂರು: ಮೆಕ್ಡೊನಾಲ್ಡ್ಸ್ನಲ್ಲಿ ಅಗ್ನಿ ಅವಘಡ; ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವ
Bengaluru: ಅಗ್ನಿಶಾಮಕ ವಾಹನ ದೌಡಾಯಿಸಿದೆ. ಬಿಟಿಎಂ ಲೇಔಟ್ 16 ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಸಾಗಿದೆ.
ಬೆಂಗಳೂರು: ನಗರದ ಬಿಟಿಎಂ ಲೇಔಟ್ 16ನೇ ಮುಖ್ಯರಸ್ತೆಯಲ್ಲಿ ಇರುವ ಮೆಕ್ಡೊನಾಲ್ಡ್ಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬಿಟಿಎಂ ಲೇಔಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಈ ಅಗ್ನಿ ಆಕಸ್ಮಿಕ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಉಡುಪಿ ಗಾರ್ಡನ್ ಹೋಟೆಲ್ ಬಳಿ ಇರುವ ಮೆಕ್ಡೋನಾಲ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಅಗ್ನಿ ಅಪಘಾತ ಸಂಭವಿಸಿದೆ.
ಮೈಕೋ ಲೇಔಟ್ನಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ಸಿಬ್ಬಂದಿ ಹಾಗೂ ಸ್ಥಳೀಯರು ಹೊಗೆ ಬರ್ತಿದೆ ಎಂದು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ, ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ದೌಡಾಯಿಸಿದೆ. ಬಿಟಿಎಂ ಲೇಔಟ್ 16 ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಸಾಗಿದೆ.
ಒಂದು ರೂಮ್ನಲ್ಲಿ ಚಿಕ್ಕದಾಗಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಇಡೀ ಬೆಲ್ಡಿಂಗ್ಗೆ ಹೊಗೆ ಆವರಿಸಿಕೊಂಡಿತ್ತು. ಮೆಕ್ಡೋನಾಲ್ಡ್ ನಲ್ಲಿ ಇರುವ ಆಹಾರ ಪದಾರ್ಥಗಳೆಲ್ಲ ಹಾಳಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೋಲಿಸರು ಕೂಡ ಭೇಟಿ ನೀಡಿದ್ದಾರೆ. ಸದ್ಯ ಬೆಂಕಿ ಆರಿಸಿದ್ದು, ಎಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನುವುದನ್ನು ಸ್ಥಳೀಯ ಪೋಲಿಸರು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರು ನಗರದ ಕೆಲವು ಕಡೆಗಳಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ವರದಿ ಆಗುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ತಾಯಿ, ಮಗಳು ಮೃತಪಟ್ಟಿದ್ದರು. ಕಟ್ಟಡ ಕುಸಿತ ಪ್ರಕರಣಗಳು ಕೂಡ ಕಳೆದ ಎರಡು ದಿನಗಳಲ್ಲಿ ವರದಿ ಆಗಿವೆ. ಮೂರು ಅಂತಸ್ತಿನ ಎರಡು ಕಟ್ಟಡಗಳು ಕುಸಿದು ಬಿದ್ದಿವೆ. ಇಂತಹ ಘಟನೆಗಳು ಆದಷ್ಟು ಕಡಿಮೆ ಆಗುವಂತೆ ಎಚ್ಚರಿಕೆ ವಹಿಸಬೇಕಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ! ಮಗುವನ್ನು ರಕ್ಷಿಸುವುದಕ್ಕೆ ಕೆಳಗೆ ಎಸೆದ ಪೋಷಕರು
ಇದನ್ನೂ ಓದಿ: ಬೆಂಗಳೂರು ಅಗ್ನಿ ಅವಘಡ: ತಾಯಿ- ಮಗಳು ಸಜೀವ ದಹನ; ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು ಕುಟುಂಬಸ್ಥರು
Published On - 2:45 pm, Thu, 30 September 21