Electric Bus: ಬೆಂಗಳೂರು ಜನರ ಬಹುದಿನದ ಕನಸು ಇಂದು ನನಸು; ರಾಜಾಧಾನಿಗೆ ಬಂದೇ ಬಿಡ್ತು ಎಲೆಕ್ಟ್ರಿಕ್ ಬಸ್

Bengaluru e-bus: ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತವೆ. ನವೆಂಬರ್​ನಲ್ಲಿ 90 ಎಲೆಕ್ಟ್ರಿಕ್ ಬಸ್​ಗಳು ಸಂಚರಿಸುತ್ತವೆ ಅಂತ ತಿಳಿಸಿದ್ದಾರೆ.

Electric Bus: ಬೆಂಗಳೂರು ಜನರ ಬಹುದಿನದ ಕನಸು ಇಂದು ನನಸು; ರಾಜಾಧಾನಿಗೆ ಬಂದೇ ಬಿಡ್ತು ಎಲೆಕ್ಟ್ರಿಕ್ ಬಸ್
ಎಲೆಕ್ಟ್ರಿಕ್ ಬಸ್​ನ ವೀಕ್ಷಿಸುತ್ತಿರುವ ಸಚಿವ ಬಿ.ಶ್ರೀರಾಮುಲು
Follow us
| Edited By: preethi shettigar

Updated on:Oct 01, 2021 | 8:39 AM

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಜನರ ಬಹುದಿನದ ಕನಸು ಇಂದು ಈಡೇರಿದೆ. ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್​ ಸಂಚಾರ ನಡೆಸಲಿದೆ. ಬಿಎಂಟಿಸಿಯ 37ನೇ ಘಟಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಲೆಕ್ಟ್ರಿಕ್  ಬಸ್​ನ ಸಾರಿಗೆ ಸಚಿವ ಬಿ.ಶ್ರೀರಾಮುಲು ಪರಿಶೀಲಿಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತವೆ. ನವೆಂಬರ್​ನಲ್ಲಿ 90 ಎಲೆಕ್ಟ್ರಿಕ್ ಬಸ್​ಗಳು ಸಂಚರಿಸುತ್ತವೆ ಅಂತ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಬಸ್ ಪರಿಶೀಲನೆ ಬಳಿಕ ಹೇಳಿಕೆ ನೀಡಿದ ಶ್ರೀರಾಮುಲು. ಪರಿಸರ ಸ್ನೇಹಿ ಆಗಬೇಕು ಎಂದು ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಕೇಂದ್ರ ಸರ್ಕಾರ ಹಲವು ಸುಧಾರಣೆ ಮಾಡುತ್ತಿದೆ. ಅದರಲ್ಲಿ ಎಲೆಕ್ಟ್ರಿಕ್ ಬಸ್ ಕೂಡ ಒಂದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಸ್‌ನಿಂದ ಶಬ್ದಮಾಲಿನ್ಯ, ವಾಯು ಮಾಲಿನ್ಯ ಆಗಲ್ಲ ಅಂತ ತಿಳಿಸಿದ್ದಾರೆ.

ನಾವು ಯಾವತ್ತೂ ಎಲೆಕ್ಟ್ರಿಕ್ ಬಸ್ ನೋಡಿರಲಿಲ್ಲ. ಮಾಲಿನ್ಯ ನಿಯಂತ್ರಣ ಮಾಡಲು ಎಲೆಕ್ಟ್ರಿಕ್ ಬಸ್ ಅವಶ್ಯಕತೆ ಇದೆ. ನವೆಂಬರ್​ನಲ್ಲಿ ಸಿಎಂ 10ಎಲೆಕ್ಟ್ರಿಕ್ ಬಸ್ ಉದ್ಘಾಟನೆ ಮಾಡಲಿದ್ದಾರೆ. 9 ಮೀಟರ್ ಉದ್ದವಿರುವ ಪರಿಸರ ಸ್ನೇಹಿ ಬಸ್ ಇದಾಗಿದೆ. ಇದರ ಹೊರತಾಗಿ 300 ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದದ ಬಸ್ ಓಡಾಟ ಮಾಡುತ್ತೆ. ಬಿಎಂಟಿಸಿ ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ. ಹೊಸ ಎಲೆಕ್ಟ್ರಿಕ್ ಬಸ್​ನ ದರ ಬೇರೆ ಬಸ್ ದರದಲ್ಲೇ ಇರಲಿದೆ ಎಂದು ಸಚಿವರು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್ ಬಸ್‌ಗಳಿಗೆ 50 ಕೋಟಿ ರೂ. ಅನುದಾನ ನೀಡಲಾಗಿದೆ. ಹೊಸ 300 ಬಸ್‌ಗಳಿಗೆ ಟೆಂಡರ್ ಕಾರ್ಯ ಮುಗಿದಿದೆ. ಆದಷ್ಟು ಬೇಗ 300 ಬಸ್‌ಗಳಿಗೆ ಚಾಲನೆ ಕೊಡುತ್ತೇವೆ ಎಂದು ಹೇಳಿದರು.

ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ ಇದೇ ವೇಳೆ ಕರ್ತವವ್ಯಕ್ಕೆ ಹಾಜರಾದ ಸಿಬ್ಬಂದಿ ಮತ್ತೆ ವಜಾ ವಿಚಾರಕ್ಕೆ ಸಚಿವರು ಪ್ರತಿಕ್ರಿಯಿಸಿದ್ದಾರೆ. ಕಾನೂನಾತ್ಮಕವಾಗಿ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕ ಇಲಾಖೆ ಮುಂದೆ ಸಮಸ್ಯೆ ತಂದು ಬಗೆಹರಿಸಲಾಗುವುದು. ಸಾರಿಗೆ ಇಲಾಖೆಯಲ್ಲಿ ಸಮಸ್ಯೆ ಇಲ್ಲ ಅಂತ ಏನಿಲ್ಲ. ಇಲಾಖೆಯನ್ನ ಲಾಭದಾಯಕವನ್ನಾಗಿ ಮಾಡುವ ಯತ್ನ ಮಾಡಲಾಗುವುದು. ಸಾರಿಗೆ ಇಲಾಖೆಗೆ ಸರ್ಕಾರ ಎರೂವರೆ ಸಾವಿರ ಕೋಟಿ ಅನುದಾನ ನೀಡಿದೆ.  ವೇತನ ಸರಿಯಾದ ಸಮಯಕ್ಕೆ ವೇತನ ಆಗದೆ ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ ಅಂತ ಸಾರಿಗೆ ನೌಕರರಿಗೆ ಮನವಿ ಮಾಡಿದರು.

ಇದನ್ನೂ ಓದಿ

ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಂಕ್​ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು

ನಮಗೆ ವಿಷ ಕೊಡಲಿ, ಇಲ್ಲಾ ಸರ್ಕಾರವೇ ವಿಷ ಕುಡಿದು ಸಾಯಲಿ: ಚಿಕ್ಕಮಗಳೂರಿನಲ್ಲಿ ಈರುಳ್ಳಿ ಬೆಳೆಗಾರರ ಆಕ್ರೋಶ

Published On - 11:44 am, Thu, 30 September 21

ತಾಜಾ ಸುದ್ದಿ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ