AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಬಿತ್ತು; ಮಾಲ್​ ಗ್ರಾಹಕರನ್ನು ವಾಪಸ್​ ಕಳುಹಿಸುತ್ತಿರುವ ಮಾರ್ಷಲ್‌ಗಳು

ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಹಾಕಿದ ಕಾರಣ ಮಾಲ್‌ಗೆ ಬರುವವರನ್ನು BBMP ಮಾರ್ಷಲ್‌ಗಳು ಮತ್ತು ಮಾಲ್​ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆ.

ಕೊನೆಗೂ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಬಿತ್ತು; ಮಾಲ್​ ಗ್ರಾಹಕರನ್ನು ವಾಪಸ್​ ಕಳುಹಿಸುತ್ತಿರುವ ಮಾರ್ಷಲ್‌ಗಳು
ಮಂತ್ರಿ ಮಾಲ್‌
TV9 Web
| Edited By: |

Updated on:Sep 30, 2021 | 11:08 AM

Share

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟದ ಸತಾಯಿಸುತ್ತಿದ್ದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಇಂದು ಬೆಳಗ್ಗೆ ಬೀಗ ಹಾಕಲಾಗಿದೆ. ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಹಾಕಿದ ಕಾರಣ ಮಾಲ್‌ಗೆ ಬರುವವರನ್ನು BBMP ಮಾರ್ಷಲ್‌ಗಳು ಮತ್ತು ಮಾಲ್​ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಸ್ಕ್ವೇರ್​ ಮಾಲ್ ಮುಖ್ಯದ್ವಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಕೊನೆಗೂ ಬೀಗ ಹಾಕಿದ್ದಾರೆ. ಎಷ್ಟೇ ನೋಟೀಸ್ ನೀಡಿದ್ರು ತೆರಿಗೆ ಪಾವತಿ ಮಾಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಸುಮಾರು 20 ಕೋಟಿ ರೂಪಾಯಿ ತೆರಿಗೆ ವಸೂಲಿ ಆಗಬೇಕಿದೆ. ಹಾಗಾಗಿ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರಿಂದ ಇಂದು ಬೀಗ ಜಡಿಯುವ ಕಾರ್ಯ ನೆರವೇರಿದೆ.

ಚೆಕ್ ಬೌನ್ಸ್ ಆಗಿದೆ; ಡಿಡಿ ಮುಖಾಂತರ ತೆರಿಗೆ ಪಾವತಿ ಮಾಡಲೇಬೇಕು ಆಸ್ತಿ ತೆರಿಗೆ ಪಾವತಿಸುವವರೆಗೂ ಮಂತ್ರಿ ಮಾಲ್‌ಗೆ ಬೀಗ ಮುಂದುವರಿಯಲಿದೆ. ಈ ಮಧ್ಯೆ, ಆಸ್ತಿ ತೆರಿಗೆ ಪಾವತಿಸಲು ಮಂತ್ರಿ ಮಾಲ್‌ ನೀಡಿದ್ದ ಚೆಕ್ ಬೌನ್ಸ್ ಅಗಿದೆ. ಮಂತ್ರಿ ಮಾಲ್‌ನವರು ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಹಾಗಾಗಿ ಇವತ್ತು ಡಿಡಿ ಮುಖಾಂತರ ಪಾವತಿ ಮಾಡಬೇಕಾಗಿದೆ.

ಬಿಬಿಎಂಪಿ (BBMP) ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್​ ಮೊದಲ ಸ್ಥಾನದಲ್ಲಿದೆ. ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ (Mantri Square Mall ) ಬರೋಬ್ಬರಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ:

Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ

Published On - 10:59 am, Thu, 30 September 21