ನಮಗೆ ವಿಷ ಕೊಡಲಿ, ಇಲ್ಲಾ ಸರ್ಕಾರವೇ ವಿಷ ಕುಡಿದು ಸಾಯಲಿ: ಚಿಕ್ಕಮಗಳೂರಿನಲ್ಲಿ ಈರುಳ್ಳಿ ಬೆಳೆಗಾರರ ಆಕ್ರೋಶ
ಇವತ್ತಿನ ಬೆಲೆಯಲ್ಲಿ ಕೂಲಿ ಕೊಡಲು ಆಗುತ್ತಿಲ್ಲ. ಅವರಿಗೆ ಊಟವನ್ನೂ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ಚಿಕ್ಕಮಗಳೂರು: ಸರ್ಕಾರ ನಮಗೆ ಒಂದು ತೊಟ್ಟು ವಿಷ ಕೊಡಲಿ. ಕುಡಿದು ನೆಮ್ಮದಿಯಿಂದ ಸಾಯುತ್ತೇವೆ. ಇಲ್ಲ ಸರ್ಕಾರವೇ ವಿಷ ಕುಡಿದು ಸತ್ತರೆ ಬೇರೆ ಸರ್ಕಾವಾದರೂ ರಚನೆ ಆಗುತ್ತೆ ಎಂದು ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡೂರು ತಾಲೂಕಿನ ಗಿರಿಯಾಪುರ, ಹಿರೇನಲ್ಲೂರು, ಚೌಳಹಿರಿಯೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಅಜ್ಜಂಪುರ ತಾಲೂಕಿನಾದ್ಯಂತ ಸಾವಿರಾರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಆದರೆ, ಈರುಳ್ಳಿ ಬೆಳೆಗೆ ಸಮರ್ಪಕವಾದ ಬೆಲೆಯಿಲ್ಲ. 50 ಕೆಜಿಯ ಚೀಲಕ್ಕೆ 200-300 ರೂಪಾಯಿಗೆ ಕೇಳುತ್ತಾರೆ. ಕೂಲಿಯೂ ಬರೋದಿಲ್ಲ. ಹೀಗಾದರೆ ನಾವು ಬದುಕುವುದು ಹೇಗೆ ಅಂತ ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.
ಇವತ್ತಿನ ಬೆಲೆಯಲ್ಲಿ ಕೂಲಿ ಕೊಡಲು ಆಗುತ್ತಿಲ್ಲ. ಅವರಿಗೆ ಊಟವನ್ನೂ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ದೊಡ್ಡ ದೊಡ್ಡ ಮಂತ್ರಿಗಳಿಗೆ ಬೆಲೆ ಹೆಚ್ಚಿಸಿ ಅಂತಾ ಕೇಳುವುದಕ್ಕಿಂತ ಸ್ವಲ್ಪ ವಿಷ ಕೊಟ್ಟರೇ ಸಲೀಸಾಗಿ ಕುಡಿದು ಸಾಯುತ್ತೇವೆ. ಬೆಳೆಯಲ್ಲಿ ಸ್ವಲ್ಪವೂ ಆದಾಯವಿಲ್ಲ. ಕೂಲಿ ಆಳುಗಳಿಗೆ ಊಟ ನೀಡಲು ಸಾಧ್ಯವಾಗದೆ ಮಂಡಕ್ಕಿ ಕೊಡುತ್ತಿದ್ದೇವೆ ಅಂತ ರೈತರು ಕಣ್ಣೀರು ಹಾಕಿದ್ದಾರೆ.
ಚುನಾವಣೆ ಬಂದಾಗ ಕಾಲಿಗೆ ಬೀಳುತ್ತಾರೆ. ಈಗ ನಾವು ಅವರ ಕಾಲಿನ ಕಸವಾಗಿದ್ದೇವೆ. ಹಾಗಾಗಿ ನಮಗೆ ವಿಷ ಕೊಡಲಿ. ಇಲ್ಲಾ ಅವರೇ ವಿಷ ಕುಡಿದು ಸತ್ತರೇ ಬೇರೆ ಸರ್ಕಾರವಾದರೂ ರಚನೆಯಾಗುತ್ತೆ ಎಂದು ಸರ್ಕಾರದ ವಿರುದ್ಧ ರೈತರು ಹಿಡಿ ಶಾಪ ಹಾಕಿದ್ದಾರೆ.
ಇದನ್ನೂ ಓದಿ
10 ಕೋಟಿ ರೂ. ಖರ್ಚಿನಲ್ಲಿ ಆದ ಮದುವೆಯ ವ್ಯಾಲಿಡಿಟಿ 4 ವರ್ಷ ಮಾತ್ರವೇ? ಅ.6ಕ್ಕೆ ಸಮಂತಾ-ನಾಗ ಚೈತನ್ಯ ಭವಿಷ್ಯ ನಿರ್ಧಾರ
ಈ ಬ್ಯಾಂಕ್ ಎಟಿಎಂ ಕೇಂದ್ರಗಳ ಸೇವೆ ನಾಳೆ ಅಕ್ಟೋಬರ್ 1ರಿಂದ ಬಂದ್! ಕಾರಣವೇನು? ವಿವರ ಇಲ್ಲಿದೆ
Published On - 11:00 am, Thu, 30 September 21