ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಲಂಚ ಪಡೆದ ಆರೋಪ; ವೈದ್ಯನನ್ನು ವಜಾಗೊಳಿಸುವಂತೆ ಸಚಿವ ಕೆ ಸುಧಾಕರ್ ಸೂಚನೆ
ಹೆರಿಗೆ ಮಾಡಿಸಲು 14 ಸಾವಿರ ರೂ. ಲಂಚ ಪಡೆದ ಆರೋಪದಡಿ ಜಯನಗರದ ಜನರಲ್ ಆಸ್ಪತ್ರೆಯ ವೈದ್ಯ ಜೋಶಿ ದಾಸ್ರನ್ನು ಕೆಲಸದಿಂದ ವಜಾಗೊಳಿಸುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.
ಬೆಂಗಳೂರು: ಹೆರಿಗೆ ಮಾಡಿಸಲು 14 ಸಾವಿರ ರೂ. ಲಂಚ ಪಡೆದ ಆರೋಪದಡಿ ಜಯನಗರದ ಜನರಲ್ ಆಸ್ಪತ್ರೆಯ (Jayanagar Journal Hospital) ವೈದ್ಯ ಜೋಶಿ ದಾಸ್ರನ್ನು ಕೆಲಸದಿಂದ ವಜಾಗೊಳಿಸುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (K Sudhakar) ಸೂಚನೆ ನೀಡಿದ್ದಾರೆ. ಇಂದು (ಆ 22) ಸಚಿವ ಡಾ. ಸುಧಾಕರ್ ಜಯನಗರ ಆಸ್ಪತ್ರೆಗೆ ದಿಢೀರನೆ ಭೇಟಿ ನಿಡಿ, ಖಾಲಿ ಇರುವ ಬೆಡ್ಗಳ, ಸಿಬ್ಬಂದಿಗಳ ಕೊರತೆಯ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ವೈದ್ಯ ಜೋಶಿ ದಾಸ್ ಹೆರಿಗೆ ಮಾಡಿಸಲು 14 ಸಾವಿರ ರೂ. ಲಂಚ ಪಡೆಯುತ್ತಿದ್ದಾರೆಂದು ಶಾಸಕಿ ಸೌಮ್ಯಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಸಚಿವರು ಕೂಡಲೇ ವೈದ್ಯನನ್ನು ವಜಾ ಮಾಡುವಂತೆ ವೈದ್ಯಕೀಯ ಅಧೀಕ್ಷಕ ಡಾ.ರಾಮಕೃಷ್ಣಪ್ಪರಿಗೆ ಸೂಚನೆ ನೀಡಿದರು. ಬಳಿಕ ಸಚಿವ ಕೆ. ಸುಧಾಕರ್ ಅವರು ಅಧಿಕಾರಿಗಳ ಜೊತೆಗೆ ಊಟ ಮಾಡುತ್ತಲೇ ಆಸ್ಪತ್ರೆ ಕುರಿತು ಮಾಹಿತಿ ಪಡೆದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ: ವಿಶೇಷ ಚೇತನ ಸಹೋದರರ ಜಮೀನು ನಾಶ; ಪ್ರತಿಭಟನೆ ಹಾದಿ ಹಿಡಿದ ಸಹೋದರರು
ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಜಮೀನಿಗೆ ಹಾನಿಯಾಗಿದೆ ಎಂದು ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ವಿಶೇಷ ಚೇತನ ಸಹೋದರು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪಕ್ಕದಲ್ಲಿ ವಿಶೇಷ ಚೇತನ ಸಹೋದರರಾದ ವೇಣುಗೋಪಾಲ್ ಹಾಗೂ ನವೀನ್ ಕುಮಾರ್ ಎಂಬುವವರಿಗೆ ಸೇರಿದ ಜಮೀನು ಇದೆ.
ಈ ಜಮೀನಿಗೆ ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ನುಗ್ಗಿದೆ. ಇದರಿಂದ ಜಮೀನಿನಲ್ಲಿದ್ದ 50ಕ್ಕೂ ಹೆಚ್ಚು ತೆಂಗಿನಮರಗಳು ನಾಶವಾಗಿವೆ ಎಂದು ಸಹೋದರರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಡಿಬಿಎಲ್ ಕಂಪನಿಯ ಅಧಿಕಾರಿಗಳ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆಂದು ಆರೋಪ ಕೇಳಿ ಬಂದಿದೆ. ಹೀಗಾಗಿ ವಿಶೇಷ ಚೇತನ ಸಹೋದರರು ಇದೀಗ ಕೂಡಲೇ ಪರಿಹಾರ ನೀಡಿ ಅಥವಾ ಜಮೀನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Mon, 22 August 22