ಸಿದ್ದರಾಮಯ್ಯ, ಶಿವಕುಮಾರ್ ನನಗೆ ಮೋಸ ಮಾಡಿದರು ಎಂದ ಎಂಡಿ ಲಕ್ಷ್ಮಿನಾರಾಯಣ್ ಮರಳಿ ಬಿಜೆಪಿಗೆ?
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೂರು ಬಾರಿ ನನಗೆ ಮಾತು ಕೊಟ್ಟು ದ್ರೋಹ ಮಾಡಿದ್ದರು. ಹೀಗಾಗಿ ನಮ್ಮ ಅಭಿಮಾನಿಗಳ ಜೊತೆ ಸಭೆ ಮಾಡಿ, ರಾಜಕೀಯ ತೀರ್ಮಾನ ಮಾಡಿದ್ದೇನೆ. -ಎಂಡಿ ಲಕ್ಷ್ಮಿನಾರಾಯಣ್
ಬೆಂಗಳೂರು: ಕಾಂಗ್ರೆಸ್ OBC ವಿಭಾಗದ ಅಧ್ಯಕ್ಷ ಎಂಡಿ ಲಕ್ಷ್ಮಿ ನಾರಾಯಣ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಶಾಸಕರ ಭವನದಲ್ಲಿ ಆಪ್ತರ ಜೊತೆ ಸಭೆ ನಡೆಸಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಒಂದು ಕಾಲದಲ್ಲಿ ಬಿಎಸ್ ಯಡಿಯೂರಪ್ಪಾರ ಅತ್ಯಾಪ್ತ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಎಂಡಿ ಲಕ್ಷ್ಮಿ ನಾರಾಯಣ್ ಇತ್ತೀಚೆಗೆ ಬಹಿರಂಗವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ವಿರುದ್ಧ ಗುಡುಗಿದ್ದರು. ಹಾಗೂ ಪರಿಷತ್ ಟಿಕೆಟ್ ಸಿಗದೇ ಇದ್ದಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸಧ್ಯ ಈಗ ಮತ್ತೆ ಮರಳಿ ಗೂಡು ಸೇರುವ ಬಗ್ಗೆ ನಿರ್ಧರಿಸಿದ್ದಾರೆ.
ಇನ್ನು ಶಾಸಕರ ಭವನದಲ್ಲಿ ಆಪ್ತರ ಜೊತೆ ಸಭೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ ಎಂಡಿ ಲಕ್ಷ್ಮಿ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೂರು ಬಾರಿ ನನಗೆ ಮಾತು ಕೊಟ್ಟು ದ್ರೋಹ ಮಾಡಿದ್ದರು. ಹೀಗಾಗಿ ನಮ್ಮ ಅಭಿಮಾನಿಗಳ ಜೊತೆ ಸಭೆ ಮಾಡಿ, ರಾಜಕೀಯ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ಪಕ್ಷವೂ ನನಗೆ ಆಹ್ವಾನ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:29 pm, Mon, 22 August 22