ಕರ್ನಾಟಕದಲ್ಲಿ ಗೋಶಾಲೆಗಳ ಆತ್ಮನಿರ್ಭರತೆಗಾಗಿ ಸಚಿವ ಪ್ರಭು ಚೌಹಾಣ್ 3 ರಾಜ್ಯಗಳ ಪ್ರವಾಸ

| Updated By: ganapathi bhat

Updated on: Dec 25, 2021 | 8:18 PM

ಗೋ ಆಧಾರಿತ ಕೃಷಿ ಮತ್ತು ಗವ್ಯ ಉತ್ಪನ್ನಗಳ ಮಾರುಕಟ್ಟೆ ಹಾಗೂ ತಯಾರಿಕಾ ವಿಧಾನಗಳ ಬಗ್ಗೆ 3 ರಾಜ್ಯಗಳಲ್ಲಿ ಸಚಿವರು ಪ್ರವಾಸ ನಡೆಸಲಿದ್ದಾರೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ.

ಕರ್ನಾಟಕದಲ್ಲಿ ಗೋಶಾಲೆಗಳ ಆತ್ಮನಿರ್ಭರತೆಗಾಗಿ ಸಚಿವ ಪ್ರಭು ಚೌಹಾಣ್ 3 ರಾಜ್ಯಗಳ ಪ್ರವಾಸ
ಪ್ರಭು ಚೌಹಾಣ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಗೋಶಾಲೆಗಳ ಆತ್ಮನಿರ್ಭರತೆಗಾಗಿ ಸಚಿವರ ಪ್ರವಾಸ ನಡೆಸುವ ಬಗ್ಗೆ ತಿಳಿಸಲಾಗಿದೆ. ಡಿಸೆಂಬರ್ 27 ರಿಂದ 3 ರಾಜ್ಯಗಳಲ್ಲಿ ಸಚಿವ ಪ್ರಭು ಚೌಹಾಣ್ ಪ್ರವಾಸ ನಡೆಸಲಿದ್ದಾರೆ. ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ವಾರಣಾಸಿಯಲ್ಲಿ ಅತ್ಯಾಧುನಿಕ ಬಯೋಗ್ಯಾಸ್ ಘಟಕ ಹಾಗೂ ಗೋಶಾಲೆಗಳಿಗೆ ಪಶು ಸಂಗೋಪನಾ ಸಚಿವ ಭೇಟಿ ನೀಡಲಿದ್ದಾರೆ.

ಗೋ ಆಧಾರಿತ ಕೃಷಿ ಮತ್ತು ಗವ್ಯ ಉತ್ಪನ್ನಗಳ ಮಾರುಕಟ್ಟೆ ಹಾಗೂ ತಯಾರಿಕಾ ವಿಧಾನಗಳ ಬಗ್ಗೆ 3 ರಾಜ್ಯಗಳಲ್ಲಿ ಸಚಿವರು ಪ್ರವಾಸ ನಡೆಸಲಿದ್ದಾರೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ.

ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಗೋಶಾಲೆ ಆರಂಭಿಸಲಾಗುವುದು
ಕರ್ನಾಟಕ ರಾಜ್ಯದ 35,000 ದೇಗುಲಗಳಲ್ಲಿ ಗೋಪೂಜೆ ನೆರವೇರಿಸಲಾಗಿದೆ. ಪ್ರತಿ ವರ್ಷ ದೀಪಾವಳಿಯಂದು ಗೋಪೂಜೆ ಮಾಡಲಾಗುವುದು. ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಗೋಶಾಲೆ ಆರಂಭಿಸಲಾಗುವುದು. ಎ ಮತ್ತು ಬಿ ಗ್ರೇಡ್​ ದೇವಸ್ಥಾನಗಳಲ್ಲಿ ಗೋಶಾಲೆ ಆರಂಭಿಸುತ್ತೇವೆ. ಗೋಶಾಲೆ ಆರಂಭಿಸುವ ಸಂಬಂಧ 2 ಬಾರಿ ಸಭೆ ನಡೆಸಲಾಗಿದೆ ಎಂದು ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಹಜ್ ಮತ್ತು ವಕ್ಫ್​ ಖಾತೆ ಸಚಿವೆ ಶಶಿಕಲಾ ಜೊಲ್ಲೆ ನವೆಂಬರ್ 5 ರಂದು ಹೇಳಿಕೆ ನೀಡಿದ್ದರು.

ಗೋಶಾಲೆ ಆರಂಭಿಸುವ ವಿಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸ್ಪಂದಿಸಿದ್ದು ಆದಷ್ಟು ಬೇಗ ಜಾರಿಗೆ ತರಲಾಗುವುದು. ದೇವಸ್ಥಾನಗಳಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗುತ್ತಿದೆ ಎಂದು ಕಪಿಲೇಶ್ವರ ದೇವಸ್ಥಾನದಲ್ಲಿ ಗೋಪೂಜೆ ಸಲ್ಲಿಸಿದ ನಂತರ ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದರು. ಕಪಿಲೇಶ್ವರ ದೇವಸ್ಥಾನದಲ್ಲಿ ಗೋಮಾತೆಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ವಿಶೇಷ ಪೂಜೆ ನೆರವೇರಿಸಿದ್ದರು. ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ್​ ದೊಡ್ಡಗೌಡರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: PM Modi in Varanasi ಗೋವುಗಳ ಬಗ್ಗೆ ಗೇಲಿ ಮಾಡುವವರು ಕೋಟಿಗಟ್ಟಲೆ ಜನರ ಜೀವನೋಪಾಯವೇ ಅವು ಎಂಬುದನ್ನು ಮರೆಯುತ್ತಾರೆ: ಮೋದಿ

ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ದೇಗುಲಗಳಲ್ಲಿ ಗೋಶಾಲೆ ಆರಂಭಿಸಲಾಗುವುದು; ಗೋಪೂಜೆ ಬಳಿಕ ಶಶಿಕಲಾ ಜೊಲ್ಲೆ ಹೇಳಿಕೆ

Published On - 8:14 pm, Sat, 25 December 21