AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ಅಧಿಕಾರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಆಗಸ್ಟ್ 22ರಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವೆ ಜೊಲ್ಲೆ ಅಧಿಕಾರಿಗಳಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ತಿಳಿಸಿದ್ದಾರೆ. ಬನಶಂಕರಿ ದೇವಸ್ಥಾನವು ದೈವ ಸಂಕಲ್ಪ ಯೋಜನೆಯ ಮೊದಲ ಹಂತದ ದೇವಾಲಯಗಳ ಪಟ್ಟಿಯಲ್ಲಿದೆ.

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ಅಧಿಕಾರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ
ಸಚಿವೆ ಶಶಿಕಲಾ ಜೊಲ್ಲೆ
TV9 Web
| Updated By: ಆಯೇಷಾ ಬಾನು|

Updated on:Aug 22, 2022 | 7:58 PM

Share

ಬೆಂಗಳೂರು: ಬೆಂಗಳೂರಿನ ಬನಶಂಕರಿ ದೇವಸ್ಥಾನದ(Banashankari Temple) ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ದೇವಾಲಯದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ಸೂಚನೆ ನೀಡಿದ್ದಾರೆ.

ಆಗಸ್ಟ್ 22ರಂದು ವಿಧಾನಸೌಧದಲ್ಲಿ ಕಂದಾಯ ಸಚಿವರು ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಆರ್‌ ಅಶೋಕ ಅವರ ಜೊತೆಯಲ್ಲಿ ನಡೆದಂತಹ ಸಭೆಯಲ್ಲಿ ಬನಶಂಕರಿ ದೇವಸ್ಥಾನದ ಸಮಗ್ರ ಅಭಿವೃದ್ದಿಗಾಗಿ ವಿಸ್ತ್ರುತವಾಗಿ ಚರ್ಚಿಸಲಾಯಿತು.  ಈ ವೇಳೆ ಆರ್ ಅಶೋಕ್ ದೇವಸ್ಥಾನದ ಸಮಗ್ರ ಅಭಿವೃದ್ದಿಯ ಬಗ್ಗೆ ಹಲವಾರು ಸಲಹೆಗಳನ್ನು ನೀಡಿದರು. ತುರ್ತಾಗಿ ನಡೆಯಬೇಕಾದಂತಹ ಕಾಮಗಾರಿಗಳ ಬಗ್ಗೆ ಹಾಗೂ ದೇವಸ್ಥಾನದಲ್ಲಿ ಅಳವಡಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ನಂತರ ಬನಶಂಕರಿ ದೇವಸ್ಥಾನಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳ ತಂಡದೊಂದಿಗೆ ಧೀಡೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ  ಸಚಿವೆ  ಶಶಿಕಲಾ ಜೊಲ್ಲೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 4.20 ಎಕರೆ ಪ್ರದೇಶದಲ್ಲಿರುವ ಬನಶಂಕರಿ ದೇವಸ್ಥಾನ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಈಗಾಗಲೇ ದೈವ ಸಂಕಲ್ಪ ಯೋಜನೆಯ ಮೊದಲ ಹಂತದ ದೇವಾಲಯಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಮಗ್ರವಾದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ದೇವಾಲಯದಲ್ಲಿ 48 ಕೋಟಿ ರೂಪಾಯಿಗಳ ಹಣವಿದ್ದು, ಈ ಹಣದ ಸದುಪಯೋಗದ ಮೂಲಕ ಭಕ್ತಸ್ನೇಹಿ ಪರಿಸರವನ್ನ ನಿರ್ಮಾಣ ಮಾಡುವತ್ತ ಹೆಚ್ಚಿನ ಗಮನ ನೀಡುವಂತಹ ಮಾಸ್ಟರ್‌ ಪ್ಲಾನ್‌ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶ್ರೀ ವರಪ್ರಸಾದ ಆಂಜನೇಯ ಸ್ವಾಮಿ ದೇವಾಲಯದ ಪುನರ್‌ ನಿರ್ಮಾಣ ಬನಶಂಕರಿ ದೇವಾಲಯ ಆವರಣದಲ್ಲಿರುವ ವರಪ್ರಸಾದ ಅಂಜನೇಯ ದೇವಾಲಯವು 1915ರಲ್ಲಿ ನಿರ್ಮಿಸಿದ್ದು, ಸುಮಾರು 100 ವರ್ಷಗಳಿಗೂ ಹಿಂದಿನ ದೇವಾಲಯವಾಗಿದ್ದು ತುಂಬಾ ಶಿಥೀಲಾವಸ್ಥೆಯಲ್ಲಿದೆ. ಇದರ ಜೀರ್ಣೋಧ್ದಾರಕ್ಕಾಗಿ ಮೂಲ ದೇವಾಲಯದ ಗರ್ಭಗುಡಿಯ ಹಿಂಬದಿ ಅಲಂಕಾರ ಮೂರ್ತಿಯಾಗಿ ಮತ್ತೊಂದು ಹೊಸ ಮೂರ್ತಿಯನ್ನು ಪ್ರತಿಸ್ಥಾಪಿಸಲು ಹಾಗೂ ಮೂಲ ದೇವಾಲಯದ ಗರ್ಭಗುಡಿ, ಪ್ರಾಂಗಣಗಳ ವಿಸ್ತೀರ್ಣವನ್ನು ವಿನ್ಯಾಸಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಕ್ಷೆಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅನ್ನದಾಸೋಹ ಭವನದ ಮುಂಭಾಗ ಶಾಶ್ವತ ಛಾವಣಿ ನಿರ್ಮಾಣ, ಅನ್ನಪ್ರಸಾದ ವಿತರಣಾ ಕೌಂಟರ್‌ ಮತ್ತು ಆಸನಗಳ ನಿರ್ಮಾಣ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಪ್ರಸಾದ ವಿತರಣೆಗೆ ಅನ್ನದಾಸೋಹ ಭವನವನ್ನು ಉಪಯೋಗಿಸಲಾಗುತ್ತಿದೆ. ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ಭವನದ ಖಾಲಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಪೆಂಡಾಲ್‌ಗಳನ್ನು ಹಾಕಿ ಪ್ರಸಾದವನ್ನು ವಿತರಿಸಲಾಗುತ್ತಿದೆ. ಮಳೆ ಬಂದಾದ ಪ್ರಸಾದ ಸ್ವೀಕರಿಸಲು ತೊಂದರೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸದರಿ ಸ್ಥಳದಲ್ಲಿ ಭಕ್ತಾದಿಗಳಿಗೆ ಅನುಕೂಲ ಉಂಟಾಗುವಂತೆ ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಶಾಶ್ವತ ಮೇಲ್ಚಾವಣಿಯನ್ನು ನಿರ್ಮಿಸಿ ಅನ್ನಪ್ರಸಾದ ವಿತರಣೆಗೆ ಕೌಂಟರ್‌ಗಳ ನಿರ್ಮಾಣ ಮತ್ತು ಪ್ರಸಾದ ಸೇವನೆಗೆ ಅನುಕೂಲವಾಗುವಂತೆ ಕುಳಿತುಕೊಳ್ಳಲು ಆಸನಗಳನ್ನ ನಿರ್ಮಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾಂಪೌಂಡು ಗೋಡೆಯನ್ನು ಸೂಕ್ತ ಎತ್ತರಕ್ಕೇರಿಸುವ ಬಗ್ಗೆ ದೇವಾಲಯದ ಹಿಂಭಾಗದಲ್ಲಿರುವ ಹಾಲು ಕಾಂಪೌಂಡು ಗೋಡೆಯನ್ನು ಸೂಕ್ತ ಎತ್ತರಕ್ಕೆ ಏರಿಸಲು ಹಾಗೂ ಸುತ್ತಲಿನ ಗಾಳಿ-ಬೆಳಕು ಸರಾಗವಾಗಿ ಒಳಬರಲು ಕಾಂಪೌಂಡಿನ ಮೇಲ್ಭಾಗದಲ್ಲಿ ಎಸ್‌.ಎಸ್‌ ನಿಂದ ಲೂವರ್ಸ್‌ಗಳನ್ನು ಅಳವಡಿಸಲು ಹಾಗೂ ಸದರಿ ಕಾಮಗಾರಿಗಾಗಿ ಅಂದಾಜು ಪಟ್ಟಿಯನ್ನು ಸಲ್ಲಿಸಲು ಮತ್ತು ಕಾಮಗಾರಿಯನ್ನು ಶ್ರೀಘ್ರವಾಗಿ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಹೈಟೆಕ್‌ ಮಾದರಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ದೇವಾಲಯದ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವು ತುಂಬಾ ಹಳೆಯ ಕಟ್ಟಡವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಒಂದೇ ಪ್ರವೇಶವಿದೆ. ಇದರಿಂದ ಭಕ್ತಾದಿಗಳಿಗೆ ಬಹಳಷ್ಟು ಅನಾನುಕೂಲವಾಗುತ್ತಿದೆ. ಆದ್ದರಿಂದ ಶೌಚಾಲಯನ್ನು ಹೈಟೆಕ್‌ ಮಾದರಿಯಲ್ಲಿ ನಿರ್ಮಿಸಲು ಅಂದಾಜು ಪಟ್ಟಿಯನ್ನು ಸಲ್ಲಿಸುಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಹಾಗೆಯೇ, ಶೌಚಾಲಯಗಳ ನಿರ್ವಹಣೆಗಾಗಿ ಸುಲಭ ಶೌಚಾಲಯದವರಿಗೆ ವಹಿಸಲು ಅಗತ್ಯ ಕ್ರಮ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನ್ನದಾಸೋಹ ಭವನಕ್ಕೆ ಲಿಫ್ಟ್‌ ವ್ಯವಸ್ಥೆ ಅನ್ನದಾಸೋಹ ಭವನದ ಅಡುಗೆ ಮನೆ ನೆಲ ಮಹಡಿಯಲ್ಲಿದೆ. ಪ್ರಸಾದ ವ್ಯವಸ್ಥೆಗೆ ಮೊದಲ ಮಹಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನಕ್ಕೆ ಲಿಫ್ಟ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲು ಅಡುಗೆ ಮನೆಯಿಂದ ಮೊದಲನೇ ಮಹಡಿಗೆ ಪ್ರಸಾದ ಕೊಂಡೊಯ್ಯುವುದು ತುಂಬಾ ಕಷ್ಟವಾಗುತ್ತಿದೆ. ಈ ಸಂಬಂಧ ದಾನಿಗಳೊಬ್ಬರು ಲಿಫ್ಟ್‌ ಕೊಡಿಸಲು ಮುಂದಾಗಿದ್ದು, ಇದಕ್ಕೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಮುಜರಾಯಿ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಬನಶಂಕರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ಪದ್ಮಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Published On - 7:38 pm, Mon, 22 August 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?