AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತ ಜ್ಯೋತಿ ಯೋಜನೆ ನಿಯಮಾವಳಿ ಸಡಿಲಕ್ಕೆ ತೀರ್ಮಾನಿಸಿದ್ದೇವೆ, ಯೋಜನೆಯನ್ನು ವಾಪಸ್ ಪಡೆದಿಲ್ಲ: ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ

ಇಂಧನ ಸಚಿವ ಸುನೀಲ್ ಕುಮಾರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುತ್ತೋಲೆ ಅರ್ಥೈಸಿಕೊಳ್ಳಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ದೊಡ್ಡ ಪ್ರಮಾದ ಮಾಡುತ್ತಿದ್ದಾರೆ. 2013 ರಿಂದ 2018 ರವರೆಗೆ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಇಲಾಖೆಯನ್ನು ದಿವಾಳಿ ಮಾಡುವುದರಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು.

ಅಮೃತ ಜ್ಯೋತಿ ಯೋಜನೆ ನಿಯಮಾವಳಿ ಸಡಿಲಕ್ಕೆ ತೀರ್ಮಾನಿಸಿದ್ದೇವೆ, ಯೋಜನೆಯನ್ನು ವಾಪಸ್ ಪಡೆದಿಲ್ಲ: ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ
ಸಚಿವ ಸುನೀಲ್ ಕುಮಾರ್
TV9 Web
| Edited By: |

Updated on: Sep 06, 2022 | 5:27 PM

Share

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ಯೋಜನೆಯ ನಿಯಮಾವಳಿ ಸಡಿಲಕ್ಕೆ ತೀರ್ಮಾನಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ನಿಯಮಾವಳಿ ಆದೇಶ ಮಾತ್ರ ವಾಪಸ್ ಪಡೆದಿದ್ದೇವೆ. ಅಮೃತ ಜ್ಯೋತಿ ಯೋಜನೆಯನ್ನು ವಾಪಸ್ ಪಡೆದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪರಿಶಿಷ್ಟಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವರು ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ? ಎಂದು ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದರು. ಈ ಸಂಬಂಧ ಇಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈ ವೇಳೆ ಇಂಧನ ಸಚಿವ ಸುನೀಲ್ ಕುಮಾರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುತ್ತೋಲೆ ಅರ್ಥೈಸಿಕೊಳ್ಳಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ದೊಡ್ಡ ಪ್ರಮಾದ ಮಾಡುತ್ತಿದ್ದಾರೆ. 2013 ರಿಂದ 2018 ರವರೆಗೆ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಇಲಾಖೆಯನ್ನು ದಿವಾಳಿ ಮಾಡುವುದರಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು. ಸಿದ್ದರಾಮಯ್ಯ ಅವಧಿಯಲ್ಲಿ ಎಸ್ಕಾಂಗಳಿಗೆ 3.500 ಸಾವಿರ ಕೋಟಿ ಸಬ್ಸಿಡಿ ಹಣ ಬಾಕಿ ಇರಿಸಿದ್ದರು. ಅವರ ಪಾಪದ ಕೂಸನ್ನು ಇವತ್ತು ನಾವು ಹೊತ್ತುಕೊಂಡಿದ್ದೇವೆ. ಇಲಾಖೆಯನ್ನು ಸಾಲದಲ್ಲಿ ಮುಳುಗಿಸಿ ದಿವಾಳಿ ಮಾಡುವ ಹುನ್ನಾರ ನಡೆಸಿದ್ದರು. ಕೃತಕವಾಗಿ ಹಣಕಾಸು ದುರ್ಬಲತೆ ಸೃಷ್ಟಿ ಮಾಡಿ ಕಾಂಗ್ರೆಸ್ ಅವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಸಿದ್ದರಾಮಯ್ಯ ಮಾಡಿದ್ದರು. ನಾವು ಅದನ್ನು ಇವತ್ತು ಸರಿ ಮಾಡಲು ಹೊರಟಿದ್ದೇವೆ. ರೈತರಿಗೆ ಉಚಿತ ವಿದ್ಯುತ್ ಕೊಡಲು ಬದ್ಧ. ಯಾವುದೇ ರೈತರ ಐಪಿ ಸೆಟ್​ಗೆ ಮೀಟರ್ ಅಳವಡಿಸುವುದಿಲ್ಲ. ಕೃತಕ ಅಭಾವ ಸೃಷ್ಟಿ ಮಾಡಿ ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ. ಶಿವಕುಮಾರ್ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ಪಾವಗಡ ಸೋಲಾರ್ ಪ್ಲಾಂಟ್ ಹೇಗೆ ಹಂಚಿಕೆ ಆಗಿದೆ ಅಂತಾ ಗೊತ್ತಿದೆ. ತನಿಖೆ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಮಾಡುತ್ತೇನೆ. ಸವಾಲು ಸ್ವೀಕಾರ ಅಂದರೆ ರಾಜಕೀಯವಾಗಿ, ತನಿಖೆ ಎಲ್ಲವೂ ಸೇರುತ್ತದೆ. ಅಧಿವೇಶನ ಮುಗಿದ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಡಿಕೆ ಶಿವಕುಮಾರ್​ಗೆ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಎನ್​ಐಎ ಚಾರ್ಜ್ ಶೀಟ್ ವಿಚಾರ ಸಂಬಂಧ ಮಾತನಾಡಿದ ಸಚಿವ ಸುನೀಲ್ ಕುಮಾರ್, ಇಸ್ಲಾಂ ಭಯೋತ್ಪಾದನೆ ಎಂಬುದನ್ನು ನಾವು ಹಿಂದೆಯೇ ಹೇಳುತ್ತಿದ್ದೆವು. ಈ ಮಾನಸಿಕತೆಯ ವಿರುದ್ಧ ಇಡೀ ಸಮಾಜ ಒಂದಾಗಬೇಕು. ಡಿಜೆ ಹಳ್ಳಿ ಗಲಾಟೆ, ಪ್ರವೀಣ್ ಕೊಲೆ ಎಲ್ಲವೂ ಇಸ್ಲಾಂ ಭಯೋತ್ಪಾದನೆಯ ಭಾಗ. ಇಸ್ಲಾಂ ಭಯೋತ್ಪಾದನೆಯನ್ನು ಬೆಂಬಲಿಸುವವರ ಬಗ್ಗೆಯೂ ಜನರು ಎಚ್ಚರದಿಂದಿರಬೇಕು ಎಂದರು.