ಬೆಂಗಳೂರು: ಸಚಿವ ಸುನೀಲ್ ಕುಮಾರ್ ಇಂದು (ಆಗಸ್ಟ್ 11) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರವನ್ನು ಸ್ವೀಕರಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲಿನ ಮೇಲೆ ಕುಳಿತು ಕಡತಕ್ಕೆ ಸಹಿ ಹಾಕಿದ ಸಚಿವರು, ರವೀಂದ್ರ ಕಲಾಕ್ಷೇತ್ರದ ಬಳಿ ತಾಯಿ ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಇಲಾಖೆಯ ಕಾರ್ಯವನ್ನು ಆರಂಭಿಸಿದ್ದಾರೆ. ಸಚಿವರಿಗೆ ಕನ್ನಡ ಭಾವುಟ ಶಾಲು, ಪೇಟ ತೊಡಿಸಿ ಇಲಾಖೆ ಅಧಿಕಾರಿಗಳು ಸ್ವಾಗತ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ, ಸುನೀಲ್ ಪುರಾಣಿಕ್, ತಾರಾ, ಮಾಳವಿಕಾ ಅವಿನಾಶ್, ಸೇರಿ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆ ಬಳಿಕ ಮಾತನಾಡಿದ ಸಚಿವ ಸುನೀಲ್ ಕುಮಾರ್, ಸಚಿವನಾದ ನಂತರ ಹಾರ ತುರಾಯಿ ಬೇಡ, ಕನ್ನಡ ಪುಸ್ತಕ ಕೊಡಿ ಅಂತ ಹೇಳಿದ್ದೆ. ಇದೊಂದು ದೊಡ್ಡ ಇಲಾಖೆ. ಈ ಇಲಾಖೆ ಇನ್ನಷ್ಟು ಶ್ರೀಮಂತಗೊಳಿಸು ಕೆಲಸ ಮಾಡುತ್ತೀನಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪವರ್ ಬರಬೇಕು. ಪವರ್ ಇಲಾಖೆಯಲ್ಲಿ ಸಂಸ್ಕೃತಿ ಬರಬೇಕು ಹಾಗೆ ಕೆಲಸ ಮಾಡ್ತೀನಿ. ಇಲಾಖೆಯ ಸುಧಾರಣೆ ಮಾಡುವ ಕೆಲಸ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಕೆಲಸ ಮಾಡ್ತೀನಿ. ಜನರು ನಿತ್ಯ ಒಂದು ಕನ್ನಡ ಪೇಪರ್ ಓದಬೇಕು. ವಾರಕ್ಕೆ ಒಂದು ಕನ್ನಡ ಪುಸ್ತಕ ಓದಿ, ತಿಂಗಳಿಗೆ ಒಂದು ಕನ್ನಡ ಸಿನಿಮಾ ನೋಡುವ ಕೆಲಸ ಮಾಡಲಿ. ಜನರು ಕೂಡಾ ಮನೆಯಲ್ಲಿ ಕನ್ನಡ ಮಾತಾಡುವ ಕೆಲಸ ರೂಢಿಸಿಕೊಳ್ಳಬೇಕು. ಎಲ್ಲಾ ಅಕಾಡೆಮಿಗಳನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡ್ತೀನಿ. ಎಲ್ಲವನ್ನು ಕಾನೂನು ಮೂಲಕ ಜಾರಿಗೆ ತರಲು ಸಾಧ್ಯವಿಲ್ಲ. ಜನರು ಕೂಡಾ ಕೈಗೂಡಿಸಬೇಕು ಅಂತ ಅಭಿಪ್ರಾಯಪಟ್ಟರು.
ಇಲಾಖೆ ಅಧಿಕಾರ ಸ್ವೀಕರಿಸದ ಬಳಿಕ ಸಚಿವ ಸುನೀಲ್ ಕುಮಾರ್, ಪುಸ್ತಕ ಖರೀದಿ ಮಾಡಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಇರುವ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ 3 ಪುಸ್ತಕಗಳನ್ನು ಖರೀದಿ ಮಾಡಿದರು.
ಇಂಧನ ಇಲಾಖೆಗೆ ಸಚಿವ ಆನಂದ್ ಸಿಂಗ್ ಪಟ್ಟು ಹಿಡಿದಿರುವ ವಿಚಾರಕ್ಕೆ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರ ಸ್ವೀಕರಿಸಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಗ್ಗೆ ಮಾತ್ರ ಮಾತಾಡುವೆ. 3 ದಿನ ಬಿಟ್ಟು ಇಂಧನ ಇಲಾಖೆ ಅಧಿಕಾರ ಸ್ವೀಕರಿಸುವೆ ಅಂತ ತಿಳಿಸಿದರು.
ಇದನ್ನೂ ಓದಿ
ಕನ್ನಡ ಪುಸ್ತಕ ಕೊಡಿ ಎಂದ ನೂತನ ಸಚಿವ ಸುನಿಲ್ ಕುಮಾರ್ ಈಗ ಕಲಾವಿದರೊಂದಿಗೆ ಕಾಫಿ ಕುಡಿಯಲಿದ್ದಾರೆ!
ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?
(Minister Sunil Kumar Received Authority Culture and the Department of Culture in Bengaluru)
Published On - 10:35 am, Wed, 11 August 21