Sperm Whale Ambergris: ಮತ್ತೆ 80 ಕೋಟಿ ರೂ ಮೌಲ್ಯದ ಅಂಬರ್ಗ್ರೀಸ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು, ಐವರ ಬಂಧನ
sperm whale ambergris: ಸಮುದ್ರದಲ್ಲಿ ಸಿಗುವ ಅಂಬರ್ಗ್ರೀಸ್ ಎಂಬ ತಿಮಿಂಗಲದ ವಾಂತಿ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ 5 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಅಂಬರ್ಗ್ರೀಸ್ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು: ಸಮುದ್ರದಲ್ಲಿ ಸಿಗುವ ಅಂಬರ್ಗ್ರೀಸ್ ಎಂಬ ತಿಮಿಂಗಲದ ವಾಂತಿ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ 5 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಅಂಬರ್ಗ್ರೀಸ್ ವಶಪಡಿಸಿಕೊಳ್ಳಲಾಗಿದೆ. ತಿಮಿಂಗಿಲ ಮೂಲದಿಂದ ಪಡೆಯುವ ಅಂಬರ್ಗ್ರೀಸ್ ಎಂಬ ಪದಾರ್ಥವನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಬೆಂಗಳೂರಿನ ಮಜೀಬ್ಪಾಷಾ, ಮೊಹಮದ್ ಮುನ್ನಾ, ಗುಲಾಬ್ ಚಂದ್, ಸಂತೋಷ ಹಾಗೂ ಜಗನ್ನಾಥಚಾರ್ ಬಂಧಿತರು.
ವನ್ಯಜೀವಿ ಕಾಯ್ದೆ ಹಾಗೂ IPC 420 ಅಡಿ ಪ್ರಕರಣ ದಾಖಲು: ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುವ ಅಂಬರ್ಗ್ರೀಸ್ಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಖಚಿತ ಮಾಹಿತಿಯ ಮೇರೆಗೆ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಖಾಸಗಿ ಕಚೇರಿಯೊಂದರ ಮೇಲೆ ದಾಳಿ ಮಾಡಿದಾಗ ಅಂಬರ್ಗ್ರೀಸ್ ಗಟ್ಟಿ ಪತ್ತೆಯಾಗಿದೆ. ಇದರ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲಾ ಕೆಜಿಗೆ ಒಂದು ಕೋಟಿ ರೂಪಾಯಿ ಇದೆ ಎಂದು ಪುಸಲಾಯಿಸಿ, ಸಾರ್ವಜನಿಕರಿಗೆ ಅದನ್ನು ಮಾರಾಟ ಮಾಡಲು (Ambergris smuggling) ಆರೋಪಿಗಳು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಿಸಿಬಿಯ ವಿಶೇಷ ವಿಚಾರಣಾ ದಳದ ಎಸಿಪಿ ಹನುಮಂತರಾಯ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶಿವಪ್ರಸಾದ್ ಅವರ ತಂಡವು ದಾಳಿ ನಡೆಸಿ, ಆರೋಪಿಗಳನ್ನು ಹಿಡಿದಿದೆ.
ಇಷ್ಟಕ್ಕೂ ಅಂಬರ್ಗೀಸ್ ಎಂದರೇನು…? ಅಂಬರ್ಗೀಸ್ ಅಥವಾ ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳು (Amber Greece, Sperm Wale) ಮಾತ್ರ ಇಂತಹ ದ್ರವವನ್ನ ಹೊರ ಹಾಕುತ್ತದೆ. ಸ್ಪರ್ಮ್ ವೇಲ್ ತಿಮಿಂಗಿಲಗಳು ಕಾಟ್ಲಾ ಫಿಶ್, ಸ್ಕ್ಬಿಡ್ ಫಿಶ್ ಗಳನ್ನ ಮಾತ್ರ ಬೇಟೆಯಾಡಿ ತಿನ್ನುತ್ತವೆ. ತಿಂಗಳಾನುಗಟ್ಟಲೆ ಮೀನುಗಳ ಮುಳ್ಳುಗಳು ಜೀರ್ಣವಾಗೋದಿಲ್ಲ. ಹಲವು ತಿಂಗಳು ಹೊಟ್ಟೆಯಲ್ಲಿರೋದ್ರಿಂದ ರಾಸಾಯನಿಕ ಪ್ರಕ್ರಿಯೆಗೆ ಒಳಪಡುತ್ತದೆ.
ನಂತರ ಅದು ಮೇಣದಂತೆ ರಚನೆಯಾಗುತ್ತದೆ. ಈ ಸಂದರ್ಭದಲ್ಲಿ ಅದು ಸುಗಂಧಿತವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಸ್ಪರ್ಮ್ ತಿಮಿಂಗಿಲಗಳು ಹೊಟ್ಟೆಯಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಂತೆ ಇಡೀ ಮೇಣದ ವಸ್ತುವನ್ನ ವಾಂತಿ ಮಾಡುವ ಮೂಲಕ ಹೊರ ಹಾಕುತ್ತದೆ! ಈ ವಾಂತಿಯು ಹಗುರವಾಗಿರುತ್ತದೆ. ಹಾಗಾಗಿ ಆದು ಸಮುದ್ರದಲ್ಲಿ ತೇಲಾಡುತ್ತದೆ. ಇಂತಹ ವಸ್ತುವನ್ನ ಸೈಂಟಿಫಿಕ್ ಆಗಿ ಅಂಬರ್ಗ್ರೀಸ್ ಎಂದು ಕರೆಯಲಾಗುತ್ತದೆ. ಕಾನೂನು ಪ್ರಕಾರ ಇದನ್ನು ಮಾರಾಟ ಮಾಡುವಂತಿಲ್ಲ. ಸಂಶೋಧನೆಗಾಗಿ ಮಾತ್ರ ಬಳಸಬಹುದು.
Unique catch by CCB..80 Kgs of Ambergris (also called Floating Gold) seized worth Rs 80 cr!! is product of Sperm Whales..was intended to be smuggled out of Ind..is in high demand in Intl market..5 arrested..@CPBlr @BlrCityPolice pic.twitter.com/rrNflAjPkj
— Sandeep Patil IPS (@ips_patil) August 10, 2021
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ಕೋಟಿ ರೂ ಬೆಲೆ ಬಾಳುವ 80 ಕೆಜಿ ಅಂಬರ್ ಗ್ರೀಸ್ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು @CCBBangalore ವಿಶೇಷ ತನಿಖಾ ದಳವು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕಾರ್ಯಾಚರಣೆ ಕೈಗೊಂಡ ತಂಡಕ್ಕೆ 1 ಲಕ್ಷ ರೂ ಬಹುಮಾನ ನೀಡಲಾಗಿದೆ.
— Kamal Pant, IPS (@CPBlr) August 10, 2021
ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲ ಕೇಸ್, ಪತ್ತೆಯಾದ ವಸ್ತು ಏನೆಂಬುದು ಮೊದಲಿಗೆ ಪೊಲೀಸರಿಗೇ ಗೊತ್ತಾಗಿಲ್ಲಾ!
(Ambergris smuggling bengaluru CCB police arrested a gang of five attempting to smuggle sperm whale ambergris)