Crime News: ನೀರಿನಲ್ಲಿ ಆಟ ಆಡುತ್ತಿದ್ದಕ್ಕೆ ಕೋಪಗೊಂಡು ಮಗುವಿಗೆ ಥಳಿಸಿದ ಹೆತ್ತ ತಾಯಿ; ಗಂಭೀರ ಸ್ಥಿತಿಯಿಂದ 2 ವರ್ಷದ ಮಗು ಸಾವು

ಮಗುವಿನ ತಂದೆ ಆಟೋರಿಕ್ಷಾ ಚಾಲಕನಾಗಿದ್ದು, ಆತ ಹೊರಗಡೆ ಹೋದ ಸಮಯದಲ್ಲಿ ಘಟನೆ ನಡೆದಿದೆ. ಮಗುವಿನ ತಾಯಿ ನೇಹಾ ಸೋನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

Crime News: ನೀರಿನಲ್ಲಿ ಆಟ ಆಡುತ್ತಿದ್ದಕ್ಕೆ ಕೋಪಗೊಂಡು ಮಗುವಿಗೆ ಥಳಿಸಿದ ಹೆತ್ತ ತಾಯಿ; ಗಂಭೀರ ಸ್ಥಿತಿಯಿಂದ 2 ವರ್ಷದ ಮಗು ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Aug 10, 2021 | 12:24 PM

ಪುಟ್ಟ ಮಗು ನೀರಿನಲ್ಲಿ ಅಟವಾಡುತ್ತಿದೆ ಎಂಬ ಮಾತ್ರಕ್ಕೆ ಹೆತ್ತ ತಾಯಿಯೇ ಥಳಿಸಿದ ಘಟನೆ ನಡೆದಿದೆ. ತಾಯಿ ಹೊಡೆದ ಏಟಿಗೆ ಮಗು ಸಾವಿಗೀಡಾಗಿರುವ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. 22 ವರ್ಷದ ತಾಯಿ ಕೋಪಗೊಂಡು ಮಗುವಿಗೆ ಹೊಡೆದಿದ್ದಾಳೆ. 2 ವರ್ಷದ ಪುಟ್ಟ ಬಾಲಕಿ ತಲೆಗೆ ಬಿದ್ದ ಏಟಿನಿಂದ ಸಾವಿಗೀಡಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಗರ್ಭಿಣಿಯಾಗಿರುವ ಮಹಿಳೆಯನ್ನು ವಿರಾರ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ ಎಂಬುದು ತಿಳಿದು ಬಂದಿದೆ. ಮಗು ನೀರಿನಲ್ಲಿ ಆಟವಾಡುತ್ತಿದ್ದಕ್ಕೆ ಕೋಪಗೊಂಡ ತಾಯಿ ನೇಹಾ ಸೋನಿ ಮಗುವಿಗೆ ಥಳಿಸಿದ್ದಾಳೆ. ಗಂಭೀರ ಏಟಿನ ಪರಿಣಾಮ ಮಗು ಸಾವಿಗೀಡಾಗಿದೆ.

ನೆರೆಯವರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗುವನ್ನು ನೆಲಕ್ಕೆ ಗುದ್ದಿರುವ ಪರಿಣಾಮ ಗಂಭೀರ ಸ್ಥಿತಿಯಾಗಿದ್ದು ಮಗು ಸಾವಿಗೀಡಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಹೆಚ್ಚು ಪೆಟ್ಟು ಬಿದ್ದಿದೆ ಎಂಬುದು ಶವಪರೀಕ್ಷೆಯ ಬಳಿಕ ತಿಳಿದು ಬಂದಿದೆ.

ಮಗುವಿನ ತಂದೆ ಆಟೋರಿಕ್ಷಾ ಚಾಲಕನಾಗಿದ್ದು, ಆತ ಹೊರಗಡೆ ಹೋದ ಸಮಯದಲ್ಲಿ ಘಟನೆ ನಡೆದಿದೆ. ಮಗುವಿನ ತಾಯಿ ನೇಹಾ ಸೋನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:

Crime News: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಚುಚ್ಚಿಕೊಂಡ ಪ್ರಿಯತಮ

Crime News: ಚೆನ್ನೈನ ನರರೋಗ ತಜ್ಞ ಡಾ. ಸುಬ್ಬಯ್ಯ ಹತ್ಯೆ ಪ್ರಕರಣ; 7 ಆರೋಪಿಗಳಿಗೆ ಗಲ್ಲು ಶಿಕ್ಷೆ

(Mother angry with 2 year old daughter and beat her to death in Mumbai )