ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇಕಡಾ 30ರಷ್ಟು ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

| Updated By: ganapathi bhat

Updated on: Nov 27, 2021 | 3:09 PM

ವಿಜಯಪುರ, ಬೀದರ್, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಶೇಕಡಾ 10ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ. ಈ ಜಿಲ್ಲೆಗಳಲ್ಲಿ ತಾಪಮಾನದ ವೈಪರೀತ್ಯ ಉಂಟಾಗುತ್ತಿದೆ. ಹೀಗಾಗಿ ಅರಣ್ಯ ಭೂಮಿ ವೃದ್ಧಿಗೆ ಸಚಿವ ಉಮೇಶ್ ಕತ್ತಿ ಆದೇಶ ನೀಡಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇಕಡಾ 30ರಷ್ಟು ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ
ಉಮೇಶ್ ಕತ್ತಿ
Follow us on

ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇಕಡಾ 30 ರಷ್ಟು ಅರಣ್ಯ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಆದೇಶ ನೀಡಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇಕಡಾ 30ರಷ್ಟು ಅರಣ್ಯ ನಿರ್ಮಾಣ ಆಗಬೇಕು. ಅರಣ್ಯ ನಿರ್ಮಿಸಲು ಭೂಮಿ ಇಲ್ಲದ ಜಿಲ್ಲೆಗಳಲ್ಲಿ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆಗೆ ಸೇರಿ ಬೇರೆ ಇಲಾಖೆಗೆ ಒಳಪಡುವ ಭೂಮಿಯಲ್ಲಿ ಅರಣ್ಯ ಬೆಳೆಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಉಮೇಶ್ ಕತ್ತಿ ಆದೇಶ ನೀಡಿದ್ದಾರೆ.

ಅರಣ್ಯ ಇಲಾಖೆಗೆ ವಿಲೀನ ಮಾಡದೆ ಅರಣ್ಯ ಬೆಳೆಸಲು ಸೂಚನೆ ಕೊಡಲಾಗಿದೆ. ವಿಜಯಪುರ, ಬೀದರ್, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಶೇಕಡಾ 10ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ. ಈ ಜಿಲ್ಲೆಗಳಲ್ಲಿ ತಾಪಮಾನದ ವೈಪರೀತ್ಯ ಉಂಟಾಗುತ್ತಿದೆ. ಹೀಗಾಗಿ ಅರಣ್ಯ ಭೂಮಿ ವೃದ್ಧಿಗೆ ಸಚಿವ ಉಮೇಶ್ ಕತ್ತಿ ಆದೇಶ ನೀಡಿದ್ದಾರೆ.

ಒಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆ ಅಲರ್ಟ್ ಹಿನ್ನೆಲೆ; ಬೆಳಗಾವಿ ವಿಧಾನಮಂಡಲ ಅಧಿವೇಶನದ ಬಗ್ಗೆ ಅನಿಶ್ಚಿತತೆ
ಒಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆ ಅಲರ್ಟ್ ಹಿನ್ನೆಲೆಯಲ್ಲಿ ಬೆಳಗಾವಿ ವಿಧಾನಮಂಡಲ ಅಧಿವೇಶನದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಮೇಲೆ ಅಧಿವೇಶನದ ಭವಿಷ್ಯ ನಿರ್ಧಾರ ಆಗಲಿರುವ ಬಗ್ಗೆ ಹೇಳಲಾಗಿದೆ. ಮಾರ್ಗಸೂಚಿ ನಿಯಮ ಅಡ್ಡಿ ಆದ್ರೆ ಅಧಿವೇಶನ ಅನುಮಾನ ಎನ್ನಲಾಗುತ್ತಿದೆ. ಕೇಂದ್ರದ ಸಲಹೆ ಪ್ರಕಾರ ರಾಜ್ಯದಿಂದ ಮಾರ್ಗಸೂಚಿ ತಯಾರಾಗಲಿದೆ. ಕರ್ನಾಟಕ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಲಿದೆ.

ತಜ್ಞರ ಸಲಹೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಗಣಿಸಲಿದೆ. ಅಧಿವೇಶನಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಭೆಯನ್ನು ವಿಧಾನಸಭೆ ಸಚಿವಾಲಯ ಎದುರು ನೋಡುತ್ತಿದೆ.

ದೇಶದಾದ್ಯಂತ ಒಮಿಕ್ರಾನ್ ವೈರಸ್ ಅಲರ್ಟ್ ಹಿನ್ನೆಲೆ ಕೇಂಪೇಗೌಡ ‌ಏರ್ಪೋರ್ಟ್​ನಲ್ಲಿ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿದೇಶಿಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಏರ್ಪೋರ್ಟ್​ನಲ್ಲಿ ‌ಬಿಗಿ ಕ್ರಮಕ್ಕೆ‌ ಮುಂದಾ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮುಂದಾಗಿದೆ. ಏರ್ಪೋರ್ಟ್​ನಲ್ಲಿ‌ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಚಾಮುಂಡಿಬೆಟ್ಟವನ್ನ ಕಾಂಕ್ರೀಟ್ ಕಾಡು ಮಾಡುವ ಯೋಜನೆ ವಿರುದ್ಧ ಸಾಹಿತಿ ಎಸ್.ಎಲ್. ಬೈರಪ್ಪ ಸಾತ್ವಿಕ ಸಿಟ್ಟು, ಪ್ರಧಾನಿ ಮೋದಿಗೆ ಪತ್ರ

ಇದನ್ನೂ ಓದಿ: ಅರಣ್ಯ ಉತ್ಪನ್ನಗಳಿಂದ ಮಾನವ ತಯಾರಿಸಿದ ಉತ್ಪನ್ನಗಳು ಕೂಡಾ ಅರಣ್ಯ ಉತ್ಪನ್ನಗಳು ಎಂಬ ಹಿಂದಿನ ತೀರ್ಪು ನಿರಾಕರಿಸಿದ ಸುಪ್ರೀಂಕೋರ್ಟ್

Published On - 2:47 pm, Sat, 27 November 21