ಬೆಂಗಳೂರು: ರಾಜಕಾಲುವೆ ಒತ್ತುವರಿಯ ಕಾರಣ 23 ವರ್ಷಗಳಿಂದ ತುಂಬದ ದೊಡ್ಡಕೆರೆ; ಒತ್ತುವರಿ ತೆರವಿಗೆ ಮುಂದಾದ ಡಿಸಿ

TV9 Digital Desk

| Edited By: shivaprasad.hs

Updated on:Nov 27, 2021 | 2:42 PM

ಆನೇಕಲ್: ಆನೇಕಲ್​ನ ದೊಡ್ಡ ಕೆರೆ ಸುತ್ತಮುತ್ತ ಒತ್ತುವರಿಯಾಗಿರುವ ರಾಜಕಾಲುವೆ ತೆರವಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಚಾಲನೆ ನೀಡಿದ್ದಾರೆ. ಇದೇ ವೇಳೆ ಅವರು ಆನೆಕಲ್​ ಸುತ್ತಮುತ್ತ ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಸ್ಫೂರ್ತಿ ನರ್ಸಿಂಗ್ ಕಾಲೇಜಿಗೂ ಭೇಟಿ ನೀಡಿದ್ದಾರೆ.

ಬೆಂಗಳೂರು: ರಾಜಕಾಲುವೆ ಒತ್ತುವರಿಯ ಕಾರಣ 23 ವರ್ಷಗಳಿಂದ ತುಂಬದ ದೊಡ್ಡಕೆರೆ; ಒತ್ತುವರಿ ತೆರವಿಗೆ ಮುಂದಾದ ಡಿಸಿ
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆನೇಕಲ್​ನ ಸ್ಫೂರ್ತಿ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ


ಆನೇಕಲ್: ಆನೇಕಲ್ ಗ್ರಾಮಾಂತರದ ದೊಡ್ಡ ಕೆರೆ ಕಳೆದ 23 ವರ್ಷಗಳಿಂದ ತುಂಬಿರಲಿಲ್ಲ. ಇದಕ್ಕೆ ರಾಜಕಾಲುವೆ ಒತ್ತುವರಿ ಕಾರಣವಾಗಿತ್ತು. ಇದೀಗ ಒತ್ತುವರಿ ಆಗಿರುವ ರಾಜಕಾಲುವೆ ತೆರವಿಗೆ ಬುಲ್ಡೋಜರ್ ಜತೆ ಸ್ವತಃ ಜಿಲ್ಲಾಧಿಕಾರಿ ಫೀಲ್ಡಿಗಿಳಿದಿದ್ದಾರೆ. ಹೌದು. ಆನೇಕಲ್ ತಾಲೂಕಿನ ಗೌರನಹಳ್ಳಿ ಬಳಿಯ ದೊಡ್ಡಕೆರೆಯಲ್ಲಿ ಒತ್ತುವರಿ ಆಗಿರುವ ಜಾಗದಲ್ಲಿ ಬುಲ್ಡೋಜರ್ ಮೂಲಕ ಒತ್ತುವರಿ ತೆರವು ಕಾರ್ಯವನ್ನು ಡಿಸಿ ಜೆ.ಮಂಜುನಾಥ್ ನಡೆಸಿದ್ದಾರೆ. ಆನೇಕಲ್​ನ ದೊಡ್ಡಕೆರೆಗೆ ನೀರು ಬರದ ಹಿನ್ನೆಲೆಯಲ್ಲಿ ಕಾರಣವನ್ನು ಹುಡುಕಿದಾಗ, ರಾಜಕಾಲುವೆ ಒತ್ತುವರಿ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದ್ದರಿಂದ ಬುಲ್ಡೋಜರ್​ಗೆ ಪೂಜೆ ಮಾಡುವ ಮೂಲಕ ಒತ್ತುವರಿ ತೆರವಿಗೆ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದ್ದು, ಮಾಹಿತಿ ನೀಡಿದ್ದಾರೆ. ‘‘ಆನೇಕಲ್ ಗ್ರಾಮಾಂತರದ ಈ ದೊಡ್ಡ ಕೆರೆ ಕಳೆದ 23 ವರ್ಷಗಳಿಂದ ತುಂಬಿರಲಿಲ್ಲ. ಕಳೆದ ಎರಡು ಮೂರು ತಿಂಗಳಲ್ಲಿ ಅತಿಹೆಚ್ಚು ಮಳೆ ಆದರೂ ಕೂಡ ಈ ಕೆರೆ ತುಂಬಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕಾಲುವೆ ಒತ್ತುವರಿ. ಕೆರೆಗಳಿಗೆ ಒಳಹರಿವು ಹೆಚ್ಚು ಮಾಡುವುದಕ್ಕಾಗಿ ಒತ್ತುವರಿ ತೆರುವು ಮಾಡಲಿದ್ದೇವೆ. ಕೆ.ಸಿ.ವ್ಯಾಲಿ ಅನ್ವಯ, 69 ಕೆರೆಗಳ ಅಭಿವೃದ್ಧಿ ಮಾಡಲಿದ್ದೇವೆ. ರಾಜಕಾಲುವೆ ಒತ್ತುವರಿ ಆಗಿದ್ದರೆ ಅದನ್ನು ತೆರವು ಮಾಡಿ ಹಾಗೂ ಕ್ಲೀನ್ ಮಾಡುವ ಮೂಲಕ ನೀರು ಹರಿಯುವಂತೆ ಮಾಡಲಾಗುತ್ತದೆ. ಈಗಾಗಲೇ 224 ಎಕರೆ ಪ್ರದೇಶದಷ್ಟು ಒತ್ತುವರಿ ತೆರವು ಮಾಡಲಾಗಿದೆ’’ ಎಂದು ಡಿಸಿ ಜೆ.ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಆನೇಕಲ್ ಸುತ್ತಮುತ್ತ ಕೊರೊನಾ ಹೆಚ್ಚಳ; ಸ್ಫೂರ್ತಿ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ:
ಬೆಂಗಳೂರು: ಆನೇಕಲ್ ಸುತ್ತಮುತ್ತ ಕೊವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮರಸೂರು ಬಳಿ ಇರುವ ಸ್ಫೂರ್ತಿ ನರ್ಸಿಂಗ್ ಕಾಲೇಜಿಗೆ ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದಾರೆ. ನಂತರ ಮಾತನಾಡಿದ ಅವರು, ‘‘ಎರಡು ದಿನಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಸ್ಫೂರ್ತಿ ಕಾಲೇಜಿನಲ್ಲಿ 168‌ ಜನರಿಗೆ ಕೊವಿಡ್​​ ಟೆಸ್ಟ್ ಮಾಡಲಾಗಿತ್ತು. ಆ ಪೈಕಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಎಲ್ಲರಿಗೂ ಕೊವಿಡ್​ ಟೆಸ್ಟ್​ ಮಾಡಲಾಗಿದೆ. ಎಲ್ಲರನ್ನೂ ಟೆಸ್ಟ್​ ಮಾಡಿದ ಬಳಿಕ 9‌ ಜನರಿಗೆ ದೃಢಪಟ್ಟಿದೆ. ಇಂಟರ್​​ನ್ಯಾಷನ್​​ ಸ್ಕೂಲ್​ನಲ್ಲೂ 34‌ ಕೇಸ್​ ಪತ್ತೆಯಾಗಿದ್ದು, ಆ‌ ಬೋರ್ಡಿಂಗ್ ಶಾಲೆ ಬಂದ್​ ಮಾಡಿದ್ದೇವೆ. ಸೋಂಕಿತ ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಬಂದವರೆಲ್ಲರೂ ಬಿಎಸ್​​ಸಿ ವಿದ್ಯಾರ್ಥಿಗಳಾಗಿದ್ದು, ಎಲ್ಲರೂ 2 ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. 85 ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಆನೇಕಲ್ ಸೆನ್ಸಿಟಿವ್ ಪ್ರದೇಶವಾಗಿದ್ದು, ಹಾಗಾಗಿ ಖಾಸಗಿ ಹಾಸ್ಟೆಲ್, ಬೋರ್ಡಿಂಗ್ ಶಾಲೆಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಕಾಡು ಹಂದಿಯ ಸ್ಪೀಡ್ ನೋಡಿ!

Truecaller: ಟ್ರೂ ಕಾಲರ್​ನಲ್ಲಿ​ ಭಯಾನಕವಾದ ಘೋಸ್ಟ್ ಕಾಲ್ ಫೀಚರ್: ಬಳಕೆದಾರರು ತಪ್ಪದೇ ಇದನ್ನು ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada