ಬೆಂಗಳೂರು: ಆಟೋ ಹತ್ತಿದ್ದ ಪ್ರಯಾಣಿಕನನ್ನು ದರೋಡೆ ಮಾಡಿದ್ದ ಪ್ರಕರಣ; ಪೊಲೀಸ್ ಬಲೆಗೆ ಬಿದ್ದ ಚಾಲಕ
ಪ್ರಯಾಣಿಕನನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಟೋ ಚಾಲಕನೋರ್ವನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ಬೆಂಗಳೂರು: ಆಟೋ ಹತ್ತಿದ್ದ ಪ್ರಯಾಣಿಕನನ್ನು ದರೋಡೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಸೆರೆ ಹಿಡಿದಿದ್ದಾರೆ. ಆತನನ್ನು ಮನೋಜ್ ಎಂದು ಗುರುತಿಸಲಾಗಿದೆ. ಮೆಜೆಸ್ಟಿಕ್ನಿಂದ ಬೊಮ್ಮನಹಳ್ಳಿಗೆ ತೆರಳಲು ಆಟೋ ಹತ್ತಿದ್ದಾಗ, ಸ್ವಲ್ಪ ದೂರ ಕರೆದೊಯ್ದು ಚಾಕು ತೋರಿಸಿ ದರೋಡೆ ಮಾಡಲಾಗಿತ್ತು. ಕೃತ್ಯಕ್ಕೆ ತನ್ನ ಸಹಚರರನ್ನೂ ಆರೋಪಿ ಜತೆಯಲ್ಲಿ ಸೇರಿಸಿಕೊಂಡಿದ್ದ. ಚಾಕು ತೋರಿಸಿ, ಚಿನ್ನದ ಸರ ಕದ್ದು ಆರೋಪಿಗಳು ಪರಾರಿಯಾಗಿದ್ದರು. ಸದ್ಯ ಬಂಧಿತನಿಂದ ₹7 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.
ಪ್ರಕರಣವೇನು? ಮೆಜೆಸ್ಟಿಕ್ ನಿಂದ ಬೊಮ್ಮನಹಳ್ಳಿಗೆ ತೆರಳಲು ಯುವಕನೊಬ್ಬ ಆಟೋ ಹತ್ತಿದ್ದ. ಸ್ವಲ್ಪ ದೂರ ಕರೆದೊಯ್ದ ಚಾಲಕ ನಂತರ, ತನ್ನ ಸಹಚರರನ್ನು ಜೊತೆ ಸೇರಿಸಿಕೊಂಡಿದ್ದಾನೆ. ಬಳಿಕ ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಪ್ರಯಾಣಿಕನಿಂದ ಚಿನ್ನದ ಸರ ಕದ್ದು ಅಸಾಮಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಕೊಂಡಿದ್ದ ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸಿ, ಆಟೋ ಚಾಲಕ ಮನೋಜ್ನನ್ನು ಬಂಧಿಸಿದ್ದಾರೆ.
ಆರೋಪಿ ವಿಚಾರಣೆ ವೇಳೆ ರಾಮಮೂರ್ತಿ ನಗರ ಸರಹದ್ದಿನಲ್ಲಿ ಕ್ಯಾಮೆರಾ ಹಾಗೂ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಒಬ್ಬ ಆರೋಪಿಯನ್ನು ಬಂಧಿಸಿ 7 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಉಳಿದ ಆರೋಪಿಗಳಿಗೆ ಉಪ್ಪಾರಪೇಟೆ ಪೊಲೀಸರು ಬಲೆ ಬೀಸಿದ್ದಾರೆ.
ಖರ್ಚಿಗೆ ಅತ್ತೆ ಹಣ ಕೊಟ್ಟಿಲ್ಲವೆಂದು ಹಲ್ಲೆ ಮಾಡಿದ ಅಳಿಯ: ನೆಲಮಂಗಲ: ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಅಳಿಯ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದಿದೆ. ಅತ್ತೆ ಸರಸ್ವತಮ್ಮ ಮೇಲೆ ಅಳಿಯ ಶ್ರೀರಾಮ್ ಎಂಬಾತ ಹಲ್ಲೆ ಮಾಡಿದ್ದಾನೆ. ಗಾಯಾಳು ಸರಸ್ವತಮ್ಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶ್ರೀರಾಮ್ ವಿರುದ್ಧ ಆತನ ಪತ್ನಿ ಚೈತ್ರಾ ದೂರು ನೀಡಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
Viral Video: ಐಸ್ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್
ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ
Published On - 3:22 pm, Sat, 27 November 21