ಅತ್ಯಾಚಾರಿ ಆರೋಪಿಗೆ 20 ವರ್ಷ ಜೈಲು, ಮೃತಳ ಕುಟುಂಬಕ್ಕೆ 9 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ

|

Updated on: May 25, 2023 | 8:24 PM

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಮೃತಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಅತ್ಯಾಚಾರಿ ಆರೋಪಿಗೆ 20 ವರ್ಷ ಜೈಲು, ಮೃತಳ ಕುಟುಂಬಕ್ಕೆ 9 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ
ಅತ್ಯಾಚಾರಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರಿನ FTSC 1 ಕೋರ್ಟ್
Follow us on

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ (Rape And Murder) ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್‌ಟಿಎಸ್‌ಸಿ 1 ಕೋರ್ಟ್ (FTSC 1 Court) ಆದೇಶ ಹೊರಡಿಸಿದೆ. ಜೊತೆಗೆ ಮೃತಳ ಕುಟುಂಬಕ್ಕೆ 9 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಕೊಲೆ ಕೇಸ್‌ನಲ್ಲಿ ಜೀವಾವಧಿ, ಪೋಕ್ಸೋ ಅಡಿ ನ್ಯಾ.ಕೆ.ಎನ್.ರೂಪಾ ಅವರು ಆದೇಶ ಹೊರಡಿಸಿದ್ದಾರೆ.

ಆರೋಪಿ ಬೆಂಗಳೂರಿನ ಸೋಮಸಂದ್ರಪಾಳ್ಯದ ರಾಜು.ಸಿ ಎಂಬಾತನಿಗೆ ಕೊಲೆ ಕೇಸ್‌ನಲ್ಲಿ ಜೀವಾವಧಿ, ಪೋಕ್ಸೋ ಅಡಿ 20 ವರ್ಷ ಜೈಲು ಶಿಕ್ಷೆ ಜೊತೆಗೆ 2 ಲಕ್ಷ 75 ಸಾವಿರ ರೂ. ದಂಡ ವಿಧಿಸಿ ನ್ಯಾ.ಕೆ.ಎನ್.ರೂಪಾ ಆದೇಶ ಹೊರಡಿಸಿದ್ದಾರೆ. ಸಾಮಾಜಿಕ ಜಾಲತಾಣದ‌ ಮೂಲಕ ಬಾಲಕಿಯೊಂದಿಗೆ ಗೆಳೆತನ ಮಾಡಿದ್ದ ರಾಜು, 2021ರ ಏಪ್ರಿಲ್ 3ರಂದು ಬಂಡೇಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ದೈಹಿಕ ಸಂಪರ್ಕ ಬೆಳೆಸಿ ಕೊಲೆ ಮಾಡಿದ್ದ ಆರೋಪವಿತ್ತು. ವಿಚಾರಣೆ ನಂತರ ಆರೋಪ ಸಾಬೀತಾಗಿತ್ತು.

ಇದನ್ನೂ ಓದಿ: ದಿ ಕೇರಳ ಸ್ಟೋರಿ ಸಿನಿಮಾ ವಿಚಾರವಾಗಿ ಗಲಾಟೆ, ಗೆಳೆಯನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಯುವತಿ

ಕೋರ್ಟ್​ನಲ್ಲಿ ಅಭಿಯೋಜನೆ ಪರವಾಗಿ ಎಸ್‌ಪಿಪಿ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು. ವಾದ ಆಲಿಸಿದ ಜಡ್ಜ್ ಕೆ.ಎನ್.ರೂಪಾ, ಆರೋಪಿಗೆ ಶಿಕ್ಷೆ ವಿಧಿಸಿದ್ದು, ಮೃತಳ ಕುಟುಂಬಕ್ಕೆ 9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ