AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​: ಅಷ್ಟಕ್ಕೂ ಯಾರು ಈ ಅಜ್ಜಯ್ಯ?

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಭಕ್ತಿಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ.

ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​: ಅಷ್ಟಕ್ಕೂ ಯಾರು ಈ ಅಜ್ಜಯ್ಯ?
ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್Image Credit source: PTI
ಪ್ರಸನ್ನ ಹೆಗಡೆ
|

Updated on: Jun 03, 2026 | 5:28 PM

Share

ಬೆಂಗಳೂರು, ಜೂನ್​​ 03: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ.  ರಾಜ್ಯಪಾಲ ಥಾವರ್​​ಚಂದ್​​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧೀಸಿದ್ದು, ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿಕೆಶಿ ಪ್ರಮಾಣ ಸ್ವೀಕರಿಸಿರೋದು ಗಮನ ಸೆಳೆದಿದೆ. ತಮ್ಮ ಜೀವನದ ಮಹತ್ವದ ಘಟ್ಟದ ವೇಳೆ ತಮ್ಮ ಆರಾಧ್ಯ ದೈವವಾದ ಅಜ್ಜಯ್ಯನನ್ನು ನೆನೆದಿರೋದು ಡಿ.ಕೆ. ಶಿವಕುಮಾರ್​​ಗೆ ಅವರ ಮೇಲಿರುವ ನಂಬಿಕೆ ಎಂತಹದ್ದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಮಾಣವಚನಕ್ಕೂ ಮುನ್ನ ಅಜ್ಜಯ್ಯನಿಗೆ ಪುಷ್ಪಾಚನೆ

ವೇದಿಕೆಯಲ್ಲಿ ಇಡಲಾಗಿದ್ದ ಅಜ್ಜಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಸಿದ ಬಳಿಕೆಯೇ ಕರ್ನಾಟಕ ಸಿಎಂ ಆಗಿ ಡಿ.ಕೆ. ಶಿವಕುಮಾರ್​​ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿಯೂ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ಶಿವಕುಮಾರ್, ತಡರಾತ್ರಿಯವರೆಗೂ ಅಲ್ಲಿಯೇ ಸಮಯ ಕಳೆದಿದ್ದರು.

ಇದನ್ನೂ ಓದಿ: ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್!

ಎಲ್ಲಿದೆ ಈ ಅಜ್ಜಯ್ಯನ ಮಠ?

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠ (ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ) ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಈ ಮಠವನ್ನು ಸ್ಥಳೀಯವಾಗಿ ‘ಅಜ್ಜಯ್ಯನ ಮಠ’ ಎಂದೂ ಕರೆಯಲಾಗುತ್ತದೆ. ಈ ಮಠವು ಕರ್ನಾಟಕದ ಪ್ರಮುಖ ರಾಜಕಾರಣಿಗಳ ನೆಚ್ಚಿನ ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದು, ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್​​ ಸೇರಿ ಹಲವರು ಇಲ್ಲಿನ ಭಕ್ತರಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ