ಅಪ್ರಾಪ್ತ ಬಾಲಕಿ ಮೇಲೆ ಉಪನ್ಯಾಸಕನಿಂದ ಅತ್ಯಾಚಾರ ಆರೋಪ‌; ಆರೋಪಿ ಜಾಮೀನು ರದ್ದುಪಡಿಸಿದ ಹೈಕೋರ್ಟ್

ನೊಂದ ಸಂತ್ರಸ್ತ ಬಾಲಕಿಯ ಪೋಷಕರು ಜಾಮೀನು ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಆರೋಪಿ ಎಲ್.ಗುರುರಾಜ್ ಜಾಮೀನು ರದ್ದುಗೊಳಿಸಿ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ತೀರ್ಪು ನೀಡಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಉಪನ್ಯಾಸಕನಿಂದ ಅತ್ಯಾಚಾರ ಆರೋಪ‌; ಆರೋಪಿ ಜಾಮೀನು ರದ್ದುಪಡಿಸಿದ ಹೈಕೋರ್ಟ್
ಸಾಂದರ್ಭಿಕ ಚಿತ್ರ
Edited By:

Updated on: Jan 21, 2022 | 7:07 PM

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಉಪನ್ಯಾಸಕ (Lecture) ಅತ್ಯಾಚಾರ ಮಾಡಿದ ಆರೋಪ‌ ಕೇಳಿಬಂದಿದ್ದು, ಆರೋಪಿ ಉಪನ್ಯಾಸಕನ ಜಾಮೀನನ್ನು ಹೈಕೋರ್ಟ್ (High court) ರದ್ದುಪಡಿಸಿದೆ. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಅತ್ಯಾಚಾರವೆಸಗಿ (Rape) ನಗ್ನ ಫೋಟೋ ಸೆರೆ ಹಿಡಿದಿದ್ದ ಆರೋಪಿ ಮೇಲೆ 2021ರಲ್ಲಿ ಸಂತ್ರಸ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಆದರೆ ಬಂಧನವಾದ ಎರಡೇ ದಿನಕ್ಕೆ ಉಪನ್ಯಾಸಕನಿಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು.

ಹೀಗಾಗಿ ನೊಂದ ಸಂತ್ರಸ್ತ ಬಾಲಕಿಯ ಪೋಷಕರು ಜಾಮೀನು ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಆರೋಪಿ ಎಲ್.ಗುರುರಾಜ್ ಜಾಮೀನು ರದ್ದುಗೊಳಿಸಿ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ತೀರ್ಪು ನೀಡಿದ್ದಾರೆ.

ನೆಲಮಂಗಲ: ಒಳ್ಳೆ ಕಡೆ ಕೆಲಸ ಕೊಡಿಸುವೆ ಎಂದು ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಆರೋಪ

ಒಳ್ಳೆ ಕಡೆ ಕೆಲಸ ಕೊಡಿಸುವೆ ಎಂದು ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿರುವ ಆರೋಪ ಬೆಂಗಳೂರು ಉತ್ತರ ತಾಲೂಕು ಮಾಕಳಿ ಬಳಿ ನಡೆದಿದೆ. ಯುವತಿ ಹತ್ಯಾಚಾರ ಆರೋಪಿಸಿ ಠಾಣೆ ಮೆಟ್ಟಿಲೇರಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರ್ಷ ಗೌಡ ಎನ್ನುವ ವ್ಯಕ್ತಿಯಿಂದ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಠಾಣೆಗೆ ದೂರು ಕೊಟ್ಟರೆ ನಿಮ್ಮ ಅಕ್ಕನಿಗೂ ಅತ್ಯಾಚಾರ ಆಗತ್ತೆ ಎಂದು ಬೆದರಿಕೆ ಹಾಕಿದ್ದಾನೆ. ಇದೇ ತಿಂಗಳ 16 ರಂದು ತನ್ನ ಐಶಾರಾಮಿ ಕಾರಿನಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದು, ಅತ್ಯಾಚಾರದ ವೇಳೆ‌ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬೆದರಿಕೆ ಕೂಡ ಹಾಕುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ರಾಯಚೂರು: ಮದ್ಯವ್ಯಸನದ ಜೊತೆಗೆ ಇಸ್ಪೀಟ್ ಶೋಕಿ: ಮನೆಮಾರಲು ಯತ್ನಿಸಿದ ಮಗನ ಕೊಲೆ

ಮದ್ಯವ್ಯಸನದ ಜೊತೆ ಇಸ್ಪೀಟ್ ಶೋಕಿಯೂ ಇದ್ದ ಮಗ ಮನೆಯನ್ನೇ ಮಾರಲು ಮುಂದಾದಾಗ ತಾಯಿಯೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ಶುಕ್ರವಾರ ನಡೆದಿದೆ. ಮನೆ ಮಾರಾಟಕ್ಕೆ ತಾಯಿ, ಅಕ್ಕ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಜಗಳವು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಅಮರೀಶ್ (43) ಎಂದು ಗುರುತಿಸಲಾಗಿದೆ. ಈತನ ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಸೋದರ ಅಳಿಯ ಸಂತೋಷ್​ ಕೊಲೆ ಆರೋಪಿಗಳು. ಮೃತ ಅಮರೇಶ್​ನ ಪತ್ನಿ ಸೌಭಾಗ್ಯ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಅಮರೇಶ್ ಕೆಲಸಕ್ಕೆ ಹೋಗದೆ ಪ್ರತಿದಿನ ಗಲಾಟೆ ಮಾಡುತ್ತಿದ್ದ. ಗಂಡ ದುಡಿಯುವುದಿಲ್ಲ ಎಂದು ಪತ್ನಿ ತವರು ಸೇರಿದ್ದರು. ಇಸ್ಪೀಟ್ ಹಾಗೂ ಮದ್ಯದ ಚಟಕ್ಕೆ ಹೆಚ್ಚು ಸಾಲವನ್ನೂ ಮಾಡಿಕೊಂಡಿದ್ದ. ಸಾಲ ತೀರಿಸಲು ಮನೆ ಮಾರಾಟಕ್ಕೆ ಯತ್ನಿಸಿದ್ದ. ಇದೇ ವಿಚಾರವಾಗಿ ನಿನ್ನೆ ತಡರಾತ್ರಿ ಮನೆಯಲ್ಲಿ ಜಗಳವಾಗಿತ್ತು. ಕೊಡಲಿಯಿಂದ ತಲೆಗೆ ಹೊಡೆದು, ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಲಾಗಿತ್ತು. ನಂತರ ಮೃತದೇಹ ಮನೆಯಿಂದ ಹೊರಗೆ ಎಸೆದಿದ್ದರು ಎಂದು ದೂರಲಾಗಿದೆ.

ಇದನ್ನೂ ಓದಿ:
Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

Gang Rape: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ಹಾಕಿದ ಕಾಮುಕರು!

 

 

Published On - 6:46 pm, Fri, 21 January 22