ತ್ರಿಬಲ್​ ರೈಡಿಂಗ್​ ಮಾಡಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತಾ? ಹೋಂ ಗಾರ್ಡ್​ ಮೇಲೆ ಹಲ್ಲೆ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

| Updated By: ಆಯೇಷಾ ಬಾನು

Updated on: Jan 10, 2023 | 8:11 AM

ಸಿಟ್ಟಿಗೆದ್ದ ಓರ್ವ ಬೈಕ್​ನಿಂದ ಇಳಿದು ಬಂದು ಏಕಾಏಕಿ ಸೆಕ್ಯೂರಿಟಿ ಗಾರ್ಡ್​ ಮುಖಕ್ಕೆ ಪಂಚ್ ಮಾಡಿದ್ದಾನೆ. ಕಿಡಿಗೇಡಿಯ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತ್ರಿಬಲ್​ ರೈಡಿಂಗ್​ ಮಾಡಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತಾ? ಹೋಂ ಗಾರ್ಡ್​ ಮೇಲೆ ಹಲ್ಲೆ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
Follow us on

ಬೆಂಗಳೂರು: ತ್ರಿಬಲ್​ ರೈಡಿಂಗ್​ ಹೋಗುತ್ತಿದ್ದವರನ್ನ ತಡೆದು ಪ್ರಶ್ನಿಸಿದಕ್ಕೆ ಹೋಂ ಗಾರ್ಡ್​ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಯುವ ಘಟನೆಗಳು ಸಾಮಾನ್ಯವಾಗಿವೆ. ಸದ್ಯ ಒಂದೇ ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಹೋಂ ಗಾರ್ಡ್ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜನವರಿ 7ರಂದು ಮಹದೇವಪುರದ ಔಟರ್​ ರಿಂಗ್​ ರಸ್ತೆಯಲ್ಲಿ ಒಂದೇ ಬೈಕ್​ನಲ್ಲಿ ಮೂವರು ಹೋಗುತ್ತಿದ್ದವರನ್ನು 30 ವರ್ಷದ ಹೋಂ ಗಾರ್ಡ್ ಸುದೇಶನ್​ ರಾಮ್ ಪ್ರಶ್ನಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಓರ್ವ ಬೈಕ್​ನಿಂದ ಇಳಿದು ಬಂದು ಏಕಾಏಕಿ ಹೋಂ ಗಾರ್ಡ್​ ಮುಖಕ್ಕೆ ಪಂಚ್ ಮಾಡಿದ್ದಾನೆ. ಕಿಡಿಗೇಡಿಯ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸುದೇಶನ್ ಕಳೆದ ಹತ್ತು ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

ಇದನ್ನೂ ಓದಿ: Mysore News: 37 ವರ್ಷ ಆದ್ರೂ ಮದ್ವೆ ಆಗಿಲ್ಲ, ನಿಂಗೆ ಯಾರೂ ಹುಡುಗಿ ಕೊಡಲ್ಲಾಂತ ಕಿಚಾಯಿಸಿದವನ ಕೊಲೆ

ಕೆಲ ಸ್ಥಳೀಯರು ಘಟನೆಯ ಸಿಸಿಟಿವಿ ದೃಶ್ಯವನ್ನು ಟ್ವೀಟ್ ಮಾಡಿ ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್​ ಮಾಡಲಾಗಿದ್ದು ಟ್ವೀಟ್​ ನೋಡಿದ ಹಿರಿಯ ಪೊಲೀಸ್​ ಅಧಿಕಾರಿಗಳು ಕೂಡಲೇ ಹಲ್ಲೆಗೊಳಗಾದ ಹೋಂ ಗಾರ್ಡ್​ನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಮಹದೇವಪುರ ಪೊಲೀಸರು ಮುಂದಾಗಿದ್ದಾರೆ. ಔಟರ್ ರಿಂಗ್ ರೋಡ್ ಕಂಪನಿ ಅಸೋಸಿಯೇಷನ್ ಕೂಡ ಹಲ್ಲೆ ಖಂಡಿಸಿ ಟ್ವೀಟ್ ಮಾಡಿ ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:09 am, Tue, 10 January 23