ಬಿಡಿಎ ಅಧ್ಯಕ್ಷರಾಗಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ: ಸರ್ಕಾರದ ಆದೇಶಕ್ಕೆ ಸುಪ್ರಿಂ ನೋಟಿಸ್​

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್​ನನ್ನು ನೇಮಕ ಮಾಡಿರವ ರಾಜ್ಯ ಸರ್ಕಾರದ ಆದೇಶ ರದ್ದು ಮಾಡುವಂತೆ ಬೆಂಗಳೂರಿನ ವಕೀಲ ಎ.ಎಸ್.ಹರೀಶ್ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಬಿಡಿಎ ಅಧ್ಯಕ್ಷರಾಗಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ: ಸರ್ಕಾರದ ಆದೇಶಕ್ಕೆ ಸುಪ್ರಿಂ ನೋಟಿಸ್​
ಸುಪ್ರೀಂ ಕೋರ್ಟ್
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 09, 2023 | 10:27 PM

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧ್ಯಕ್ಷರಾಗಿ ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್​ನನ್ನು (S R Vishwanath) ನೇಮಕ ಮಾಡಿರವ ರಾಜ್ಯ ಸರ್ಕಾರದ ಆದೇಶ ರದ್ದು ಮಾಡುವಂತೆ ಬೆಂಗಳೂರಿನ ವಕೀಲ ಎ.ಎಸ್.ಹರೀಶ್ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಸ್‌ಕೆ ಕೌಲ್ ಮತ್ತು ಎಎಸ್ ಓಕಾ ಅವರು ಇದ್ದ ದ್ವಿಸದಸ್ಯ ಪೀಠ ಇಂದು (ಜ.9) ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹಾಗೂ ಸರ್ಕಾರಕ್ಕೆ ನೋಟಿಸ್ ನೀಡಿದೆ. ಹಾಗೇ 6 ಆರು ವಾರದ ಒಳಗೆ ನೋಟಿಸ್​​ಗೆ ಉತ್ತರ ನೀಡುವಂತೆ ಆದೇಶಿಸಿ, ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ವಾದ ಅರ್ಜಿದಾರರ ಪರ ವಾದಿಸಿದ ಎ.ಎಸ್.ಹರೀಶ್, ಬಿಡಿಎ ಅಧ್ಯಕ್ಷರು ಪೂರ್ಣಾವಧಿಗೆ ನೇಮಕವಾಗಬೇಕೆಂಬ ನಿಯಮವಿದೆ. ಶಾಸಕರಾದವರು ಬಿಡಿಎ ಪೂರ್ಣಾವಧಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಹೀಗಾಗಿ ಎಸ್.ಆರ್.ವಿಶ್ವನಾಥ್ ನೇಮಕ ರದ್ದುಪಡಿಸಬೇಕು. ಹಾಗೆಯೇ, ಅವರುಶೈಕ್ಷಣಿಕ ಅರ್ಹತೆಯೂ ಹೊಂದಿಲ್ಲ. ಅವರು ಶಾಸಕರಾಗಿಯೂ, ಹಾಗೂ ಬಡಿಎ ಅಧ್ಯಕ್ಷರಾಗಿಯೂ ವೇತನ ಮತ್ತು ಭತ್ಯ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯು ಸಾರ್ವಜನಿಕ ಹಣದಿಂದ ಎರಡು ಹುದ್ದೆಗಳಿಗೆ ಪ್ರತ್ಯೇಕ ವೇತನ ಹಾಗೂ ಭತ್ಯೆ ಪಡೆಯುವಂತಿಲ್ಲ. ಹಾಗಾಗಿ ಎಸ್‌.ಆರ್‌. ವಿಶ್ವನಾಥ್‌ ನೇಮಕ ಆದೇಶವನ್ನು ರದ್ದುಪಡಿಸಬೇಕು ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರ: ಕೊಂಕು ಮಾತನಾಡಿದ ಹೆಚ್​​.ಡಿ.ಕುಮಾರಸ್ವಾಮಿ

ಬಿಡಿಎ ನೇಮಕ ರದ್ದುಪಡಿಸಲು ಹೈಕೋರ್ಟ್​​ ನಿರಾಕರಣೆ

ಈ ಹಿಂದೆ ಎ.ಎಸ್.ಹರೀಶ್ ಹೈಕೋರ್ಟ್​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನದ ಪರಿಚ್ಛೇದ 191(1) (ಎ) ಪ್ರಕಾರ ಸಂಸದರು ಹಾಗೂ ಶಾಸಕರಾಗಿರುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಒಂದು ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರೆ ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದು ಹೇಳುತ್ತದೆ. ಆದರೆ ಎಸ್.ಆರ್.ವಿಶ್ವನಾಥ್ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಡಿಎ ಅಧ್ಯಕ್ಷರೂ ಆಗಿ ನೇಮಕವಾಗಿದ್ದಾರೆ ಹೀಗಾಗಿ ಅವರ ನೇಮಕವನ್ನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:  ಕೋಲಾರದಿಂದ ಕಣಕ್ಕಿಳಿಯಲು ಸಜ್ಜಾದ ಸಿದ್ಧರಾಮಯ್ಯ, ಬಾದಾಮಿ ಮುಖಂಡರಿಗೆ ಬಿಗ್ ಶಾಕ್​: ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ ಕಾರ್ಯಕರ್ತರು

ಅರ್ಜಿ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್ ಸೆಪ್ಟೆಂಬರ್​ 3 2022 ರಂದು ನೇಮಕ ರದ್ದುಪಡಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಮತ್ತು ಅಧ್ಯಕ್ಷರು ಸದಸ್ಯರ ನೇಮಕಕ್ಕೆ ಪ್ರತ್ಯೇಕ ನಿಯಮಾವಳಿ ರೂಪಿಸಬೇಕೆಂದು ವಿಭಾಗೀಯಪೀಠ ಸರ್ಕಾರಕ್ಕೆ ಸೂಚಿಸಿತ್ತು. ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಎ.ಎಸ್.ಹರೀಶ್ ಸುಪ್ರಿಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.