AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಪಟ್ಟು: ಸ್ಥಳದಲ್ಲೇ ವಿಷ ಕುಡಿದ ಪ್ರತಿಭಟನಾ ನಿರತ ಆಟೋ ಚಾಲಕ

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಒತ್ತಾಯಿಸಿ ಬೆಂಗಳೂರಿನ ಶಾಂತಿನಗರದ RTO ಮುಖ್ಯ ಕಚೇರಿ ಬಳಿ ಆಟೋ ಚಾಲಕರಿಂದ ಪ್ರತಿಭಟನೆ ಮಾಡಲಾಯಿತು.

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಪಟ್ಟು: ಸ್ಥಳದಲ್ಲೇ ವಿಷ ಕುಡಿದ ಪ್ರತಿಭಟನಾ ನಿರತ ಆಟೋ ಚಾಲಕ
ಆಟೋ ಚಾಲಕರಿಂದ ಪ್ರತಿಭಟನೆ
TV9 Web
| Edited By: |

Updated on: Jan 09, 2023 | 5:23 PM

Share

ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿ (Rapido Bike Taxi) ನಿಷೇಧಿಸುವಂತೆ ಒತ್ತಾಯಿಸಿ ಬೆಂಗಳೂರಿನ ಶಾಂತಿನಗರದ RTO ಮುಖ್ಯ ಕಚೇರಿ ಬಳಿ  ಆಟೋ ಚಾಲಕರಿಂದ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಸ್ಥಳದಲ್ಲೇ ಆಟೋ ಚಾಲಕ ಸುನೀಲ್ ಎನ್ನುವವರು ವಿಷ ಕುಡಿದ ಕುಡಿದಿರುವಂತಹ ಘಟನೆ ಕೂಡ ನಡೆದಿದೆ. ಅಸ್ವಸ್ಥ ಆಟೋ ಚಾಲಕ​ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಶಾಂತಿನಗರ ಬಸ್ ನಿಲ್ದಾಣ ಮುಂದೆ ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಜಮಾಯಿಸಿದ್ದು, ಬಿಎಂಟಿಸಿ ಬಸ್​​​​ಗೆ ಅಡ್ಡ ಮಲಗಿ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಆಟೋ ಚಾಲಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

ಇನ್ನು ಡಬಲ್ ರೋಡ್​ನಿಂದ ಬಿಟಿಎಸ್ ರೋಡ್ ಬಂದ್ ಮಾಡಿದ್ದು, ರೋಡ್ ಮೇಲೆ ಕುಳಿತುಕೊಂಡು ಚಾಲಕರು ಪ್ರತಿಭಟಿಸುತ್ತಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವವರೆಗೂ ಇಲ್ಲಿಂದ ಹೋಗಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಆಟೋ ಚಾಲಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾನಿರತ ಚಾಲಕರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿದರು.

ಇದನ್ನೂ ಓದಿ: ಡಿ.29ರಂದು ರಾಜಧಾನಿ ಬೆಂಗಳೂರಿನಲ್ಲಿ ಆಟೋ ಸಿಗಲ್ಲ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರಿಂದ ಮುಷ್ಕರ

ವಾರ್ಡ್​ಗೆ ಶಿಫ್ಟ್ ಆದ ಆಟೋ ಚಾಲಕ ಸುನೀಲ್   

ವಿಷದ ಆಟೋ ಡ್ರೈವರ್​ನನ್ನು ವಿಲ್ಸನ್ ಗಾರ್ಡನ್​ನ ಅಗಡಿ ಆಸ್ಪತ್ರೆ ದಾಖಲಿಸಿದ್ದು, ವೈದ್ಯರು ವಾಂತಿ ಮಾಡಿಸುವ ಮೂಲಕ ವಿಷವನ್ನು ಹೊರ ತೆಗೆದಿದ್ದಾರೆ. ಆಟೋ ಚಾಲಕ ಸುನೀಲ್ ( 55) ಐಸಿಯು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. 24 ತಾಸುಗಳ‌ ಅಬ್ಸರ್ವೇಷನ್ ಇಟ್ಟಿದ್ದಾರೆ. ಕಣ್ಣು ಬಾಯಿಯಿಂದ ಸತತ ನೀರು ಸುರಿಯುತ್ತಿರುವ ಹಿನ್ನೆಲೆ ಆಕ್ಸಿಜನ್ ಅಳವಡಿಕೆ ಮಾಡಲಾಗಿದೆ.

ಬಿಎಂಟಿಸಿಯಲ್ಲಿ ಶ್ರೀರಾಮುಲು ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ವಾ?

ಸಾರಿಗೆ ಸಚಿವ ಶ್ರೀರಾಮುಲು ಮಾತಿಗೆ ಬಿಎಂಟಿಸಿ ಎಂಡಿಜಿ ಸತ್ಯವತಿ ಡೋಂಟ್ ಕೇರ್​ ಎನ್ನುತ್ತಿದ್ದು, ಶ್ರೀರಾಮುಲು ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ವಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸಚಿವರು ಹೇಳುತ್ತಿರುವುದು ಒಂದು. ಆದರೆ ನಿಗಮದಲ್ಲಿ ಆಗುತ್ತಿರುವುದು ಒಂದು. ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ಮತ್ತೆ ಅನ್ಯಾಯವಾಗಿದ್ದು, ನೌಕರರನ್ನು ವಜಾಗೊಳಿಸಲಾಗಿದೆ. ಎಲ್ಲಾ ನೌಕರರನ್ನೂ ಕೆಎಸ್ಆರ್ಟಿಸಿ ಮರಳಿ ಕೆಲಸಕ್ಕೆ ಪಡೆದರೆ, ಬಿಎಂಟಿಸಿ ನೌಕರಿಗೆ ಮಾತ್ರ ಬೇರೆಯದ್ದೇ ಕಾನೂನು ಎನ್ನಲಾಗುತ್ತಿದೆ. ನೌಕರರು ಮರಳಿ ಕೆಲಸಕ್ಕೆ ಸೇರ್ಬೇಕಾದ್ರೆ ನೂರಾರು ಕಠಿಣ ಷರತ್ತನ್ನು ಬಿಎಂಟಿಸಿ ಆಡಳಿತ ವಿಧಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಸರಿಯಾದ ಸಮಯಕ್ಕೆ ಆಟೋ ಸಿಗಲ್ಲ, ಚಾಲಕರಿಂದ ವಿಧಾನಸೌಧಕ್ಕೆ ಮುತ್ತಿಗೆ ಕರೆ

ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ ನೌಕರರು

ಯಾವುದೇ ಷರತ್ತಿಲ್ಲದೇ ಮರಳಿ ಕೆಲಸಕ್ಕೆ ಪಡೆಯೋದಾಗಿ ಸಚಿವರು ಹೇಳಿದ್ದರು. ಆದರೂ ಬಿಎಂಟಿಸಿ ಕಠಿಣ ಷರತ್ತು ಮುಂದುವರೆಸಿದೆ. ಒಂದು ಮುಂಬಡ್ತಿ ತಡೆ, ವಜಾಗೊಂಡ ವೇಳೆಯ ಸಂಬಳ ನೀಡೋದಿಲ್ಲ ಹಾಗೂ ಮುಂದೆದೂ ಮುಷ್ಕರದಲ್ಲಿ ಭಾಗಿಯಾಗುವ ಹಾಗಿಲ್ಲ. ಷರತ್ತಿಗೆ ಒಪ್ಪಬೇಕಾ, ಬೇಡ್ವಾ ಎಂಬ ಗೊಂದಲ ಒಂದುಕಡೆಯಾದರೆ, ಇನ್ನೊಂದೆಡೆ ಸಚಿವರು ಡೊಡ್ಡವ್ರಾ, ಅಧಿಕಾರಿಗಳೇ ದೊಡ್ಡವ್ರ ಅನ್ನೋ ಗೊಂದಲ ಉಂಟಾಗಿದೆ. ಹೀಗಾಗಿ ವಜಾಗೊಂಡ ಬಿಎಂಟಿಸಿ ನೌಕರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.