ಹೈಫೈ ಕಾರು ಸಿಗುವ ಆಸೆಯಲ್ಲಿದ್ದವರಿಗೆ ಶಾಕ್, ಇನ್ಕಮ್ ಟ್ಯಾಕ್ಸ್ ಹೆಸರಲ್ಲಿ 85 ಸಾವಿರ ರೂಪಾಯಿ ದೋಚಿದ ಕಿರಾತಕರು
ಗಿಫ್ಟ್ ಕಾರ್ಡ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಹೆಸ್ರು ಸಹ ಹಾಕಲಾಗಿತ್ತು. ಈ ನಡುವೆ ಸುರೇಶ್ಗೆ ಫೋನ್ ಮಾಡಿದ ಕೆಲವರು ಕಾರು ಬೇಡ ಅಂದ್ರೆ ಹಣ ಕೊಡ್ತೀವಿ ಅಂತಾ ನಂಬಿಸಿದ್ದಾರೆ. ಅಲ್ದೆ, ನಿಮಗೆ ಹಣ ಬೇಕಂದ್ರೆ ಅದಕ್ಕೆ ಜಿಎಸ್ಟಿ ಟ್ಯಾಕ್ಸ್ ಕಟ್ಟಬೇಕು. ಆಮೇಲೆ ನಿಮಗೆ ಫುಲ್ ಅಮೌಂಟ್ ಬರುತ್ತೆ ಅಂತಾ ಕಲರ್ ಕಲರ್ ಕಾಗೆ ಹಾರಿಸಿದ್ದಾರೆ.
ಬೆಂಗಳೂರು: ಕಮಲಾನಗರ ನಿವಾಸಿ ಸುರೇಶ್. ಇತ್ತೀಚೆಗೆ ಇವರ ಮನೆಗೆ ಹರ್ಬಲ್ ಲೈಫ್ ಕಂಪನಿಗೆ 40 ವರ್ಷದ ಆ್ಯನಿವರ್ಸರಿ ಅಂತಾ ಗಿಫ್ಟ್ ಕಾರ್ಡ್ವೊಂದು ಕೊರಿಯರ್ ಬಂದಿದೆ. ಅದ್ರಲ್ಲಿ ಸ್ಕ್ರ್ಯಾಚ್ ಕಾರ್ಡ್ ಒಂದಿದ್ದು, ಅದನ್ನು ಸ್ಕ್ರ್ಯಾಚ್ ಮಾಡುವಂತೆ ವ್ಯಕ್ತಿಯೊಬ್ಬ ಫೋನ್ ಮಾಡಿ ತಿಳಿಸಿದ್ದಾನೆ. ನಂತ್ರ ಅಲ್ಲಿ ನೋಡಿದಾಗ ಫಸ್ಟ್ ಪ್ರೈಸ್ ಬಂದಿದೆ ಎಂದು ಕಾಣಿಸಿದೆ. ಅಲ್ದೆ, ನೀವು ಬೆಲೆ ಬಾಳುವ ಟಾಟಾ ಸಫಾರಿ ಕಾರು ಗೆದ್ದಿರುವುದಾಗಿ ಉಲ್ಲೇಖ ಮಾಡಲಾಗಿತ್ತು. ಇದನ್ನ ಸುರೇಶ್ ಕುಟುಂಬಸ್ಥರು ನಂಬಿದ್ದಾರಷ್ಟೇಷ್ಟೇ.. ಬಳಿಕ ನಡೆದಿದ್ದೇ ಹಣದ ವ್ಯವಹಾರ..
ಇನ್ನು, ಗಿಫ್ಟ್ ಕಾರ್ಡ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಹೆಸ್ರು ಸಹ ಹಾಕಲಾಗಿತ್ತು. ಈ ನಡುವೆ ಸುರೇಶ್ಗೆ ಫೋನ್ ಮಾಡಿದ ಕೆಲವರು ಕಾರು ಬೇಡ ಅಂದ್ರೆ ಹಣ ಕೊಡ್ತೀವಿ ಅಂತಾ ನಂಬಿಸಿದ್ದಾರೆ. ಅಲ್ದೆ, ನಿಮಗೆ ಹಣ ಬೇಕಂದ್ರೆ ಅದಕ್ಕೆ ಜಿಎಸ್ಟಿ ಟ್ಯಾಕ್ಸ್ ಕಟ್ಟಬೇಕು. ಆಮೇಲೆ ನಿಮಗೆ ಫುಲ್ ಅಮೌಂಟ್ ಬರುತ್ತೆ ಅಂತಾ ಕಲರ್ ಕಲರ್ ಕಾಗೆ ಹಾರಿಸಿದ್ದಾರೆ. ನಂತ್ರ ಸುರೇಶ್ ಬಳಿ ಹಂತ ಹಂತವಾಗಿ ಸುಮಾರು 85 ಸಾವಿರ ರೂಪಾಯಿ ಪಡೆದು ವಂಚಕರು ಮೋಸ ಮಾಡಿದ್ದಾರೆ. ಆದ್ರೆ, ಕಾರು ಇಲ್ಲ.. ಹಣವೂ ಇಲ್ಲದೆ ಕಂಗಾಲಾದ ಸುರೇಶ್ ಕುಟುಂಬಸ್ಥರು ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಪೊಲೀಸರು ವಂಚಕರ ಜಾಲ ಭೇದಿಸಲು ಮುಂದಾಗಿದ್ದಾರೆ. ಮತ್ತೊಂದ್ಕಡೆ ಕೂಡಿಟ್ಟಿದ್ದ ಹಣ ಕಳ್ಕೊಂಡು ಸುರೇಶ್ ಕುಟುಂಬ ಕಂಗಾಲಾಗಿದೆ. ಏನೇ ಇರಲಿ, ಈಗಿನ್ ಕಾಲದಲ್ಲಿ ಯಾರನ್ನೂ ನಂಬೋಕೆ ಆಗ್ತಿಲ್ಲ. ಹೀಗಿರುವಾಗ ಅಪರಿಚಿತರನ್ನ ನಂಬೋಕು ಮೊದ್ಲು ನೂರು ಬಾರಿ ಆಲೋಚಿಸಿ. ಇಲ್ಲವಾದಲ್ಲಿ ಪರದಾಡಬೇಕಾಗುತ್ತೆ..