Bengaluru Murder: ಜ್ಞಾನಭಾರತಿ ಕಡೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ವ್ಯಕ್ತಿಯ ಕತ್ತು ಕೊಯ್ದು ಪರಾರಿ

ಜ್ಞಾನಭಾರತಿ ವ್ಯಾಪ್ತಿಯ ಮಂಗನಹಳ್ಳಿ ನಿವಾಸಿ ದಿನೇಶ್, ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗ್​​ನಿಂದ ದಿನೇಶ್​​ ಕತ್ತು ಕೊಯ್ದು ಪರಾರಿಯಾಗಿದ್ದಾರೆ.

Bengaluru Murder: ಜ್ಞಾನಭಾರತಿ ಕಡೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ವ್ಯಕ್ತಿಯ ಕತ್ತು ಕೊಯ್ದು ಪರಾರಿ
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Feb 23, 2023 | 7:32 AM

ಬೆಂಗಳೂರು: ಕಾರ್ಪೆಂಟರ್ ಕತ್ತು ಕೊಯ್ದು​ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬಳಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಕಾರ್ಪೆಂಟರ್​​​​​ ದಿನೇಶ್(46) ಹತ್ಯೆ ಮಾಡಲಾಗಿದೆ.

ಜ್ಞಾನಭಾರತಿ ವ್ಯಾಪ್ತಿಯ ಮಂಗನಹಳ್ಳಿ ನಿವಾಸಿ ದಿನೇಶ್, ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗ್​​ನಿಂದ ದಿನೇಶ್​​ ಕತ್ತು ಕೊಯ್ದು ಪರಾರಿಯಾಗಿದ್ದಾರೆ. ಬಳಿಕ ಪಕ್ಕದ ಖಾಲಿ ಜಾಗದಲ್ಲಿ ಲಾಂಗ್​ ಎಸೆದಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಫಿಂಗರ್ ಪ್ರಿಂಟ್ಸ್ ತಜ್ಞರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಆ ಕಡೆ ಅಕ್ರಮ ಸಂಬಂಧ, ಈ ಕಡೆ ಕೊಟ್ಯಾಂತರ ರೂ ಮೌಲ್ಯದ ಗದ್ದೆ ಮೇಲೆ ಕಣ್ಣು! ಮದುವೆಗೆ ಸಿದ್ಧತೆ ನಡೆಸಿದ ತಮ್ಮನನ್ನೇ ಸಾಯಿಸಿದ ಅಣ್ಣ!

ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು, ತಾನು ನೇಣಿಗೆ ಶರಣಾದ ಪತಿ

ಚಾಮರಾಜನಗರ: ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಹತ್ಯೆಗೈದು ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಹದೇಶ್ವರಬೆಟ್ಟ ಸಮೀಪದ ನಾಗಮಲೆಯಲ್ಲಿ ನಡೆದಿದೆ. ಪತಿಯನ್ನು ಬಿಟ್ಟು ಬಂದು ಪರಪುರುಷನೊಂದಿಗೆ ನಾಗಮಲೆಯಲ್ಲಿ ವಾಸವಾಗಿದ್ದ ಲಕ್ಷ್ಮಿ, ಇದರಿಂದ ಬೇಸತ್ತ ಪತಿ ಮುನಿರಾಜ್‌ ಪತ್ನಿ‌ಯನ್ನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬಳಿಕ ಆಕೆಯ ರಕ್ತಸಿಕ್ತ ದೇಹದ ವಿಡಿಯೋ ಮಾಡಿ ತನ್ನ ವಾಟ್ಸಪ್ ಸ್ಟೇಟಸ್‌ಗೆ ಹಾಕಿಕೊಂಡು ತಾನೂ ಆತಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮಹದೇಶ್ವರಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಿಂದ ಹೊರಬಂದು ಮತ್ತೆ ಪ್ರೀತಿಸುವಂತೆ ಯುವಕನಿಂದ ಕಾಟ

ಬೆಂಗಳೂರು: ಜೈಲಿನಿಂದ ಹೊರಬಂದು ಮತ್ತೆ ಪ್ರೀತಿಸುವಂತೆ ಯುವಕ ಮಾರಿಯಪ್ಪನ್​ನಿಂದ ಇಸ್ರೋ ವಿಜ್ಞಾನಿಗೆ ಕಿರುಕುಳ ನೀಡಿದ್ದಾನೆ. ಯುವತಿ ಮೇಲೆ ಒನ್ ವೇ ಲವ್​ನಲ್ಲಿದ್ದ ಆಸಾಮಿ ಮಾರಿಯಪ್ಪನ್, ಕಳೆದ ವರ್ಷ ಮಾನಸಿಕ ಕಿರುಕುಳ ಹಿನ್ನೆಲೆ ಆತನ ಮೇಲೆ ಯುವತಿ ದೂರು ನೀಡಿದ್ದಳು. ಈ ಸಂಬಂಧ ಆರೋಪಿ ಮಾರಿಯಪ್ಪನ್​ನ್ನು ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು, ಇದೀಗ ಜೈಲಿನಿಂದ ಜಾಮೀನು ಪಡೆದು ಹೊರಬಂದು ಮತ್ತೆ ಕಿರುಕುಳ ಕೊಟ್ಟಿದ್ದಾನೆ. ಇಸ್ರೋದಿಂದ ವಾಪಸ್ ಮನೆಗೆ ಬರುವಾಗ ಫೆ.10ರಂದು ಬೈಕ್​ ಅಡ್ಡಗಟ್ಟಿ ಯುವತಿಗೆ ಕಾಟ ಕೊಟ್ಟಿದ್ದ ಆರೋಪಿ, ಈ ವೇಳೆ ನನ್ನನ್ನು ಪ್ರೀತಿಸು, ಮದುವೆಯಾಗು ಎಂದು ಪೀಡಿಸಿ, ಬೈಕ್ ಎಳೆದಾಡಿ ಹಿಂಸೆ ನೀಡಿದ್ದನಂತೆ. ಈ ಹಿನ್ನೆಲೆ ಜೀವನ್ ಭೀಮಾನಗರ ಪೊಲೀಸ್​ ಠಾಣೆಯಲ್ಲಿ ಯುವತಿ ಮತ್ತೊಂದು ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:29 am, Thu, 23 February 23