ನಾಪತ್ತೆ ಆಗಿರುವ 4 ಮಕ್ಕಳು ಮಂಗಳೂರಿನತ್ತ ಪ್ರಯಾಣಿಸಿರುವ ಶಂಕೆ; ಏನೇನು ತರಬೇಕು ಎಂದು ಮಾಡಿದ್ದ ಪಟ್ಟಿ ಲಭ್ಯ

| Updated By: ganapathi bhat

Updated on: Oct 11, 2021 | 6:14 PM

ಮನೆ ಬಿಡುವ ಮುನ್ನ ಏನೇನು ತರಬೇಕೆಂದು ಲಿಸ್ಟ್ ಮಾಡಿಕೊಂಡಿರುವ ವಿಚಾರ ತಿಳಿದುಬಂದಿದೆ. ಮಕ್ಕಳು ಏನೇನು ತರಬೇಕೆಂದು ಲಿಸ್ಟ್ ಮಾಡಿಕೊಂಡಿದ್ದರು. ಬಹುದಿನದ ಟ್ರಿಪ್ ಮಾಡುವ ಪ್ಲ್ಯಾನ್‌ನಲ್ಲಿ ಮಕ್ಕಳು ಇದ್ದರು ಎಂದು ಮಾಹಿತಿ ಲಭ್ಯವಾಗಿದೆ.

ನಾಪತ್ತೆ ಆಗಿರುವ 4 ಮಕ್ಕಳು ಮಂಗಳೂರಿನತ್ತ ಪ್ರಯಾಣಿಸಿರುವ ಶಂಕೆ; ಏನೇನು ತರಬೇಕು ಎಂದು ಮಾಡಿದ್ದ ಪಟ್ಟಿ ಲಭ್ಯ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಸೋಲದೇವನಹಳ್ಳಿಯ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಾಹಿತಿಗಳು ಲಭ್ಯವಾಗಿದೆ. ನಾಲ್ವರು ಮಕ್ಕಳು ಮಂಗಳೂರಿಗೆ ಹೋಗಿರುವ ಮಾಹಿತಿ ಸಿಕ್ಕಿದೆ. ರೈಲಿನಲ್ಲಿ ಮಕ್ಕಳು ಮಂಗಳೂರಿಗೆ ಹೋಗಿರುವ ಬಗ್ಗೆ ತಿಳಿದುಬಂದಿದೆ. ಬೀದರ್, ಬಳ್ಳಾರಿ, ಮಂಡ್ಯ ಬಳಿಕ ಈಗ ಮಂಗಳೂರಿನತ್ತ ಮಕ್ಕಳು ಹೋಗಿರುವ ಬಗ್ಗೆ ಸುಳಿವು ಸಿಕ್ಕಿದೆ. ಈ ಮಹತ್ವದ ಸುಳಿವಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಮಂಗಳೂರಿನತ್ತ ಹೋಗುತ್ತಿದ್ದಾರೆ. ನಾಪತ್ತೆಯಾದವರು ಮಂಗಳೂರಿನಲ್ಲಿ ಇರಬಹುದು ಎನ್ನುವ ಮಾಹಿತಿ ಮೇರೆಗೆ ಮಂಗಳೂರಿಗೆ ಪೊಲೀಸರು ದೌಡಾಯಿಸಿದ್ದಾರೆ.

ಮಕ್ಕಳು ರೈಲಿನ ಮೂಲಕ ಮಂಗಳೂರಿಗೆ ಹೋಗಿರಬಹುದಾದ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಮಂಗಳೂರಿನತ್ತ ಪೊಲೀಸರು ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಏಳು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ನಾಪತ್ತೆಯಾಗುವ ಮುನ್ನ ಮಕ್ಕಳು ಬರೆದಿಟ್ಟಿದ್ದ ಚೀಟಿ ಪತ್ತೆಯಾಗಿದೆ. ಮನೆ ಬಿಡುವ ಮುನ್ನ ಏನೇನು ತರಬೇಕೆಂದು ಲಿಸ್ಟ್ ಮಾಡಿಕೊಂಡಿರುವ ವಿಚಾರ ತಿಳಿದುಬಂದಿದೆ. ಮಕ್ಕಳು ಏನೇನು ತರಬೇಕೆಂದು ಲಿಸ್ಟ್ ಮಾಡಿಕೊಂಡಿದ್ದರು. ಬಹುದಿನದ ಟ್ರಿಪ್ ಮಾಡುವ ಪ್ಲ್ಯಾನ್‌ನಲ್ಲಿ ಮಕ್ಕಳು ಇದ್ದರು ಎಂದು ಮಾಹಿತಿ ಲಭ್ಯವಾಗಿದೆ.

ನಾಪತ್ತೆಯಾಗುವ ಮುನ್ನ ಮಕ್ಕಳು ಬರೆದಿಟ್ಟಿರುವ ಚೀಟಿ ಪತ್ತೆಯಾಗಿದೆ. ಅದರಲ್ಲಿ ಊಟದ ಸಾಮಾಗ್ರಿ, ಬಟ್ಟೆಗಳು, ಆಧಾರ್ ಸೇರಿದಂತೆ ದಾಖಲಾತಿಗಳ ಆರು ಪ್ರತಿ ಮತ್ತು ಚಿನ್ನ, ಹಣ, ನೀರಿನ ಬಾಟಲಿ, ಟವಲ್, ಬ್ರಷ್, ಕ್ರೀಮ್, ಪೇಸ್ಟ್, ಬಾಚಣಿಕೆ, ಚಪ್ಪಲಿ, ಮ್ಯಾಟ್, ಪಾತ್ರೆಗಳು, ಸೀಮೆಎಣ್ಣೆ ಗ್ಯಾಸ್, ವ್ಯಾಕ್ಸಿನೇಷನ್ ಸರ್ಟಿಫಿಕೇಟ್, ತಲೆದಿಂಬು, ಬೆಡ್‌ಶೀಟ್, ಉಡುಗೊರೆಗಳು ತರಬೇಕು ಎಂದು ಉಲ್ಲೇಖ ಮಾಡಲಾಗಿದೆ. ಬಹುದಿನದ ಟ್ರಿಪ್ ಮಾಡೋ ಪ್ಲಾನ್‌ನಲ್ಲಿ ಮಕ್ಕಳು ಪಟ್ಟಿ ತಯಾರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವರ್ಷಿಣಿ ಹೇಳಿದಂತೆ ಪಟ್ಟಿ ತಯಾರಿಸಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಏಳು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ವಿಚಾರ ಬಯಲಾಗಿದೆ. ನಾಪತ್ತೆಯಾಗಿರುವ ಮಕ್ಕಳಿಗೆ ಆನ್​​ಲೈನ್​ ಗೇಮ್​​ನ ಹುಚ್ಚು ಇತ್ತು ಎಂದು ತಿಳಿದುಬಂದಿದೆ. ‘ಮೈ‌ನ್​ಕ್ರಾಫ್ಟ್‌’ ಎಂಬ ಆನ್‌ಲೈನ್ ಗೇಮ್ ಆಡ್ತಿದ್ದ ಮಕ್ಕಳು, ಆನ್‌ಲೈನ್‌ ಗೇಮ್‌ನಿಂದ ಪ್ರೇರೇಪಣೆಗೊಂಡು ಮನೆ ಬಿಟ್ರಾ? ಎಂಬ ಪ್ರಶ್ನೆಯೂ ಕೇಳಿಬಂದಿದೆ. ಮೈನ್​ಕ್ರಾಫ್ಟ್ ಗೇಮ್‌ನಿಂದ ಮಕ್ಕಳು ಮನೆ ತೊರೆದ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು: ಪತ್ತೆಯಾಗಿದ್ದು ಹೇಗೆ?

ಇದನ್ನೂ ಓದಿ: ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಸ್ಪೋರ್ಟ್ಸ್​ನಲ್ಲಿ ಆಸಕ್ತಿಯಿದೆ ಎಂದು ಪತ್ರ ಬರೆದು ನಾಪತ್ತೆಯಾದ 7 ಮಕ್ಕಳು; ಪೊಲೀಸರಿಂದ ಶೋಧ

Published On - 4:39 pm, Mon, 11 October 21