22ರ ವಿದ್ಯಾರ್ಥಿಗೆ ಸಿಕ್ತು 52 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಉದ್ಯೋಗ ​: ಇದು ಬೆಂಗಳೂರು ಎಂಐಟಿ​ ಸಾಧನೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಬೆಂಗಳೂರು ಕ್ಯಾಂಪಸ್‌ನ ಅತ್ಯುತ್ತಮ ಸಂಸ್ಥೆಯಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), NIRF 2024 ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದು, ಈ ವರ್ಷ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ಅದ್ಭುತ ಫಲಿತಾಂಶವನ್ನು ಸಾಧಿಸಿದ್ದು, ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ 52 ಲಕ್ಷ ರೂಪಾಯಿ ಸಂಬಳದ ನೌಕರಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

22ರ ವಿದ್ಯಾರ್ಥಿಗೆ ಸಿಕ್ತು 52 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಉದ್ಯೋಗ ​: ಇದು ಬೆಂಗಳೂರು ಎಂಐಟಿ​ ಸಾಧನೆ
Mit Bengaluru
Updated By: ರಮೇಶ್ ಬಿ. ಜವಳಗೇರಾ

Updated on: Jun 30, 2025 | 6:37 PM

ಬೆಂಗಳೂರು, (ಜೂನ್ 30): ಬೆಂಗಳೂರಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ 52 ಲಕ್ಷ ರೂಪಾಯಿ ಸಂಬಳದ ನೌಕರಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ಅದ್ಭುತ ಫಲಿತಾಂಶವನ್ನು ಸಾಧಿಸಿದ್ದು, ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ ವಿಜ್ವಲ್ ನಾರಾಯಣ ಅವರು 52 ಲಕ್ಷ ರೂಪಾಯಿ ಸ್ಯಾಲರಿ ಪ್ಯಾಕೇಜಿನ ನೌಕರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಇದು ಎಂಐಟಿ ಬೆಂಗಳೂರಿನ ಮೊದಲ ಪದವಿ ಬ್ಯಾಚ್‌ಗೆ ಮಹತ್ವದ ಮೈಲಿಗಲ್ಲಾಗಿದೆ.

ಇದರ ಜೊತೆಗೆ ವಿವಿಧ ವಿಭಾಗ ವಿದ್ಯಾರ್ಥಿಗಳೂ ಹೆಚ್ಚಿನ ವೇತನದ ಪ್ಯಾಕೇಜ್‌ಗಳನ್ನು ಪಡೆದಿದ್ದು ಅವುಗಳಲ್ಲಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರದ್ಯೋತ ಕೀರ್ತಿಕರ್ ಅವರ 22 ಲಕ್ಷ ರೂಪಾಯಿ ಪ್ಯಾಕೇಜ್‌, ಸಿಎಸ್ಇ – AI ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದ ಹಿಮವರ್ಷಿಣಿ ಬೀಡಾಲ ಮತ್ತು ಶ್ರೀಯಾ ಖೇರಾ ಅವರ 18.6 ಲಕ್ಷ ರೂ. ಪ್ಯಾಕೇಜ್‌ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಪಿ. ಯಾಸ್ಮೀನ್ ಬೇಗಂ ಅವರ 15 ಲಕ್ಷ ರೂಪಾಯಿ ಪ್ಯಾಕೇಜ್‌ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ISRO Recruitment 2025: ನೀವು ಕೂಡ ಇಸ್ರೋದಲ್ಲಿ ವಿಜ್ಞಾನಿಯಾಗಲು ಬಯಸುವಿರಾ? ಹಾಗಿದ್ರೆ ತಕ್ಷಣ ಅರ್ಜಿ ಸಲ್ಲಿಸಿ

ಮಾಹೆ ಬೆಂಗಳೂರು ಕ್ಯಾಂಪಸ್ ನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. (ಡಾ) ಮಧು ವೀರರಾಘವನ್ ಮಾತನಾಡಿ, ‘ ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿ ವೃತ್ತಿಪರರನ್ನು ಸಿದ್ಧಪಡಿಸುವ ಬಗ್ಗೆಯೇ ನಾವು ಹೆಚ್ಚು ಗಮನ ಹರಿಸುತ್ತೇವೆ. ಆಧುನಿಕ ಮಾರುಕಟ್ಟೆ ಬೇಡಿಕೆಗೆ ಸರಿಹೊಂದುವ ಪಠ್ಯಕ್ರಮವನ್ನು ರೂಪಿಸುವ ಹಾಗು ಪ್ರಾಯೋಗಿಕ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ, ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾಗಿ ಸ್ಪರ್ಧಿಸಲು ತಯಾರಾಗಿದ್ದಾರೆಯೇ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಅದಕ್ಕೆ ನಮ್ಮಲ್ಲಿ ಆಗುವ ಕ್ಯಾಂಪಸ್ ಆಯ್ಕೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಸಿಕ್ಕ ಪ್ಯಾಕೇಜ್‌ಗಳು ಸಾಕ್ಷಿಯಾಗಿದೆ’ ಎಂದು ಹೇಳಿದರು.

ಈ ಕ್ಯಾಂಪಸ್ ಆಯ್ಕೆ ಬಗ್ಗೆ ಮಾತನಾಡಿದ ಎಂಐಟಿ ಬೆಂಗಳೂರಿನ ನಿರ್ದೇಶಕ ಡಾ. ಐವೆನ್ ಜೋಸ್, ‘ಎಂಐಟಿ ಬೆಂಗಳೂರಿನಲ್ಲಿ, ಸಮಯಕ್ಕೆ ತಕ್ಕಂತೆ ನವೀಕರಣಗೊಳ್ಳುವುದರ ಜೊತೆಗೆ ಈಗಿನ ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಕಲಿಕಾ ವ್ಯವಸ್ಥೆ ನಮ್ಮಲ್ಲಿ ಇದೆ. ಪ್ರತಿಷ್ಠಿತ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್-ಅಪ್ ಎಲ್ಲವೂ ನಮ್ಮ ಸಂಸ್ಥೆ ಜೊತೆಗೆ ಉತ್ತಮ ಸಂಬಂಧ ಇರುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಸಮಗ್ರ ಜ್ಞಾನ ದೊರೆಯುತ್ತದೆ. ಸುಧಾರಿತ ಮೂಲಸೌಕರ್ಯ, ಅಂತರಶಿಸ್ತೀಯ ಕೆಲಸಗಳು ಮತ್ತು ಉತ್ತಮ ಅಧ್ಯಾಪಕರ ವರ್ಗ ಇರುವುದರಿಂದ ನಮ್ಮಲ್ಲಿ ಕಲಿಯುವ ವಿದ್ಯಾರ್ಥಿಗಳು ನೈಜ-ಪ್ರಪಂಚದ ಸವಾಲುಗಳ ಬಗ್ಗೆ ಕೆಲಸ ಮಾಡಿ ಅದರ ಅನುಭವನ್ನು ಪಡೆಯುವುದರಿಂದಲೇ ಒಳ್ಳೆಯ ಉದ್ಯೋಗವನ್ನು ಪಡೆಯುತ್ತಿದ್ದಾರೆ’ ಎಂದರು.

ಇಂಟರ್ನ್‌ಶಿಪ್ ಡ್ರೈವ್‌ನಲ್ಲಿಯೂ ಎಂಐಟಿ ಬೆಂಗಳೂರು ವಿದ್ಯಾರ್ಥಿಗಳು ಅತ್ಯುತ್ತಮ ಸ್ಟೈಫಂಡ್ ಪಡೆದಿದ್ದಾರೆ.

  • 1.1 LPA – ಅತ್ಯಧಿಕ ಇಂಟರ್ನ್‌ಶಿಪ್ ಸ್ಟೈಫಂಡ್
  • 38 KPM – ಸರಾಸರಿ ಸ್ಟೈಫಂಡ್
  • 30 KPM – ಸರಾಸರಿ ಸ್ಟೈಫಂಡ್

250ಕ್ಕೂ ಹೆಚ್ಚು ಕಂಪನಿಗಳು ಭಾಗಿ

ತಂತ್ರಜ್ಞಾನ, ಸಲಹಾ, ಆರೋಗ್ಯ, ಇಂಧನ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳ 250ಕ್ಕೂ ಹೆಚ್ಚು ಕಂಪನಿಗಳು ಈ ಪ್ಲೇಸ್‌ಮೆಂಟ್ ನಲ್ಲಿ ಭಾಗವಹಿಸಿದ್ದವು, ಮೈಕ್ರೋಸಾಫ್ಟ್, ಅಮೆಜಾನ್, ಮೆಕಿನ್ಸೆ & ಕಂಪನಿ, ಕೊಂಪ್ರೈಸ್, ಆಪ್ಟಮ್, ಸವಿಯಂಟ್, ಶೆಲ್, HPE, ಇನ್ಫೋಸಿಸ್, TCS, ಇಂಟೆಲ್, ಗೋಲ್ಡ್‌ಮನ್ ಸ್ಯಾಚ್ಸ್, ಫಿಲಿಪ್ಸ್, ಯೂನಿಲಿವರ್, ಡೆಲ್, ಕ್ಯಾಪ್‌ಜೆಮಿನಿ, ಸ್ವಿಗ್ಗಿ, ಲುಮಿಕ್, ಬ್ಲ್ಯಾಕ್‌ರಾಕ್, ಕಾಗ್ನಿಜೆಂಟ್, ಸೀಮೆನ್ಸ್ ಹೆಲ್ತ್‌ನಿಯರ್ಸ್ ಇತ್ಯಾದಿ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ

1953 ರಲ್ಲಿ ಸ್ಥಾಪನೆಯಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಗಮನಾರ್ಹ ಸಂಶೋಧನಾ ಕೊಡುಗೆಗಳೊಂದಿಗೆ, ಮಾಹೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್ ವಿಶ್ವವಿದ್ಯಾಲಯ ಎಂಬ ಹುದ್ದೆಯನ್ನು ನೀಡಿ ಗೌರವಿಸಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) ಆರನೇ ಸ್ಥಾನದಲ್ಲಿದೆ, ಮಾಹೆ ಪರಿವರ್ತನಾತ್ಮಕ ಕಲಿಕೆಯ ಅನುಭವವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆಯಾಗಿದೆ.

ಮಾಹೆಯ ಹೊರಗಿನ ಕ್ಯಾಂಪಸ್ ಆಗಿರುವ ಮಾಹೆ ಬೆಂಗಳೂರು, ಹೆಚ್ಚು ಅರ್ಹ ಅಧ್ಯಾಪಕರು ಮತ್ತು ಸಮರ್ಪಿತ ಮಾರ್ಗದರ್ಶಕರಿಂದ ಬೆಂಬಲಿತವಾದ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡುವಲ್ಲಿ ಶ್ರೇಷ್ಠವಾಗಿದೆ. ಮಾಹೆ ಬೆಂಗಳೂರು ಕ್ಯಾಂಪಸ್ ಹೊಸ ಯುಗದ ತಂತ್ರಜ್ಞಾನ-ಸಕ್ರಿಯಗೊಳಿಸಿದ ಜೀವನ ಕ್ಯಾಂಪಸ್‌ನಲ್ಲಿ ಸ್ಪೂರ್ತಿದಾಯಕ, ಭವಿಷ್ಯ-ಸಂಬಂಧಿತ ಕಲಿಕಾ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ, ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ, ರೂಪಾಂತರಗೊಳ್ಳುತ್ತಾರೆ ಮತ್ತು ಬಹು ಆಯ್ಕೆಗಳು ಮತ್ತು ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಮಾಹೆ ಬೆಂಗಳೂರಿನಲ್ಲಿ, ಬೆಳವಣಿಗೆಯ ಸಾಮರ್ಥ್ಯ ಮತ್ತು ಲಭ್ಯವಿರುವ ಅವಕಾಶಗಳು ಅಪಾರವಾಗಿವೆ.

Published On - 6:29 pm, Mon, 30 June 25