ಸಿಎಂ ಕ್ರಿಮಿನಲ್​​ಗಳ ರಕ್ಷಣೆ ಮಾಡುತ್ತಾರೆ ಎಂಬ ಕಾಂಗ್ರೆಸ್​ ಟ್ವೀಟ್​ಗೆ ಕಿಡಿಕಾರಿದ ಶಾಸಕ ಸಿ.ಟಿ.ರವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 02, 2023 | 3:56 PM

ಸಾಯುವ ಮುನ್ನ ಗಣಪತಿ ಲೈವ್​​ನಲ್ಲಿ ಸ್ಟೇಟ್​​​ಮೆಂಟ್ ಕೊಟ್ಟಿದ್ದರು. ಡಿ.ಕೆ.ರವಿ ಪ್ರಕರಣದಲ್ಲಿ ಹೆಚ್​​.ಡಿ.ಕುಮಾರಸ್ವಾಮಿ ಧರಣಿ ಮಾಡಿದ್ರು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಸಿಎಂ ಕ್ರಿಮಿನಲ್​​ಗಳ ರಕ್ಷಣೆ ಮಾಡುತ್ತಾರೆ ಎಂಬ ಕಾಂಗ್ರೆಸ್​ ಟ್ವೀಟ್​ಗೆ ಕಿಡಿಕಾರಿದ ಶಾಸಕ ಸಿ.ಟಿ.ರವಿ
ಬಿಜೆಪಿ ಶಾಸಕ ಸಿ.ಟಿ.ರವಿ
Follow us on

ಬೆಂಗಳೂರು: ಸಾಯುವ ಮುನ್ನ ಗಣಪತಿ ಲೈವ್​​ನಲ್ಲಿ ಸ್ಟೇಟ್​​​ಮೆಂಟ್ ಕೊಟ್ಟಿದ್ದರು. ಡಿ.ಕೆ.ರವಿ ಪ್ರಕರಣದಲ್ಲಿ ಹೆಚ್​​.ಡಿ.ಕುಮಾರಸ್ವಾಮಿ ಧರಣಿ ಮಾಡಿದ್ರು. ಪ್ರದೀಪ್​ ಕೇಸ್​​ನಲ್ಲಿ ಅರವಿಂದ ಲಿಂಬಾವಳಿ (Aravind Limbavali) ನೇರ ಪಾತ್ರ ಇದೆ ಅಂತಾ ಹೇಳಿಲ್ಲ. ಸಾರ್ವಜನಿಕರ ಜೀವನದಲ್ಲಿ ಸಹಾಯ ಕೇಳಲು ಸಾಕಷ್ಟು ಜನ ಬರ್ತಾರೆ. ಎಲ್ಲವನ್ನೂ ನಾವು ‌ಸಹಾಯ ಮಾಡೋಕೆ ಆಗುತ್ತಾ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಸಿಎಂ ಕ್ರಿಮಿನಲ್​​ಗಳ ರಕ್ಷಣೆ ಮಾಡುತ್ತಾರೆ ಎಂಬ ಕಾಂಗ್ರೆಸ್​ ಟ್ವೀಟ್ ವಿಚಾರವಾಗಿ ಅವರು ಕಿಡಿಕಾರಿದ್ದಾರೆ. ದುಡ್ಡು ಕೊಟ್ಟಾಗ ಕಾನೂನು ಮಾರ್ಗದಲ್ಲಿ ರಿಕವರಿ ಮಾಡಿಕೊಳ್ಳಬೇಕು. ಅರವಿಂದ ಲಿಂಬಾವಳಿ ಮೋಸ ಮಾಡಿದ್ದಾರೆ ಅಂತಾ ಎಲ್ಲೂ ಹೇಳಿಲ್ಲ. ನನಗೆ ಸಹಾಯ ಮಾಡಿಲ್ಲ ಅಂತ ಹೇಳಿದ್ದಾರೆ. ಆತ್ಮಹತ್ಯೆ ದಾರಿ‌ ಹಿಡಿದಿದ್ದು ದುರ್ದೈವದ ಸಂಗತಿ ಎಂದು ಹೇಳಿದರು.

ಬಿ.ಕೆ.ಹರಿಪ್ರಸಾದ್​ ಹೇಳಿಕೆಗೆ ಶಾಸಕ ಸಿ.ಟಿ.ರವಿ ಟಾಂಗ್

ರವಿ ಕುಡಿದು, ಗಾಂಜಾ ಸೇವಿಸಿ ಮಾತಾಡುತ್ತಾರೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಅವರು ಮಾತನಾಡಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ನಾಯಕರನ್ನು ನೋಡಿ ಈ ಮಾತು ಹೇಳುತ್ತಿದ್ದಾರೆ. ನಾನು ಬಿಜೆಪಿಯ ಸಿ.ಟಿ. ರವಿಯೇ ಹೊರತು, ಪಪ್ಪು ಅಲ್ಲ. ವಾಜಪೇಯಿ ಇಲ್ಲ ಅಂದಿದ್ದಿದ್ರೆ ನಿಮ್ಮ ನಾಯಕ ಅಮೇರಿಕಾ ಜೈಲಲ್ಲಿ ಇರಬೇಕಿತ್ತು. ಹರಿಪ್ರಸಾದ್ ಏನು ಹೇಳಿದ್ರೋ ಅದೆಲ್ಲಾ ನಿಮ್ಮ ನಾಯಕನಿಗೆ ಅನ್ವಯ ಆಗುತ್ತದೆ. ನನ್ನ ಯೋಗ್ಯತೆ ನೋಡಿ ಚಿಕ್ಕಮಗಳೂರಿನ ಜನರು ಗೆಲ್ಲಿಸಿದ್ದಾರೆ. ಆದರೆ ಇವರ ಯೋಗ್ಯತೆಗೆ ಒಂದು ಗ್ರಾಮ ಪಂಚಾಯತಿ ಚುನಾವಣೆಯನ್ನೂ ಗೆಲ್ಲೋಕೆ ಆಗಲಿಲ್ಲ. 30 ವರ್ಷದಿಂದ ನನ್ನ‌ ದೇಹದ ತೂಕ ಒಂದೇ ಇದೆ. ನಾನು ಡ್ಯಾಷ್ ಡ್ಯಾಷ್ ಹಿಡಿದು ರಾಜಕಾರಣ ಮಾಡಿದವನಲ್ಲ. ನನ್ನ ವಿರುದ್ದ ಸುಮ್ಮನೆ ಮಾತಾಡ್ಬೇಡಿ, ಮಾತಾಡಿದ್ರೆ ನಿಮ್ಮೆದೆಲ್ಲಾ ಬಿಚ್ಚಿಡಬೇಕಾಗುತ್ತದೆ ಎಂದು ತೀವ್ರ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್​​ಐಆರ್

ಹಳೆ ಮೈಸೂರು ಭಾಗದ ಸಭೆಗೆ ವಿಜಯೇಂದ್ರಗೆ ಆಹ್ವಾನ ಇಲ್ಲದ ವಿಚಾರ

ಇನ್ನು ಹಳೆ ಮೈಸೂರು ಭಾಗದ ಸಭೆಗೆ ವಿಜಯೇಂದ್ರಗೆ ಆಹ್ವಾನ ಇಲ್ಲದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರನ್ನು ಪಕ್ಷ ಸಂಘಟನೆಗೆ ಎಲ್ಲಿ ತೊಡಗಿಸಿಕೊಳ್ಳಬೇಕೋ ಅಲ್ಲಿ ಪಕ್ಷ ತೊಡಗಿಸಿಕೊಳ್ಳಲಿದೆ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರೂ ನನಗೆ ಇರುವುದು ಮೂರು ರಾಜ್ಯಗಳ ಉಸ್ತುವಾರಿ. ಉಳಿದಂತೆ ಉಳಿದ ಪ್ರಧಾನ ಕಾರ್ಯದರ್ಶಿಗಳಿಗೆ ಇರುತ್ತದೆ. ನಾವು ನಕಾರಾತ್ಮಕವಾಗಿ, ವ್ಯೆಯಕ್ತಿಕವಾಗಿ ಯಾರನ್ನೂ ಸೋಲಿಸಲು ಹೋಗಲ್ಲ. ಆದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ದ ಯಾವುದೇ ಎದುರಾಳಿ ಆಗಿರಲಿ ವೈಯಕ್ತಿಕ ಸೋಲಿಸುವ ಕೆಲಸ ಮಾಡಲ್ಲ. ವ್ಯೆಯಕ್ತಿವಾಗಿ ಸೋಲಿಸುವ ಪ್ರಯತ್ನದ ಬಗ್ಗೆ ಡಾ. ಪರಮೇಶ್ವರ್​ರನ್ನು ಕೇಳಿ ಎಂದರು.

ಇದನ್ನೂ ಓದಿ: Aravind Limbavali: ಉದ್ಯಮಿ ಪ್ರದೀಪ್ ಆತ್ಮಹತ್ಯೆ -ಪ್ರಭಾವಿ ಶಾಸಕ ಲಿಂಬಾವಳಿ ವಿರುದ್ಧ ಎಫ್​ಐಆರ್ ದಾಖಲು, ಇನ್​​ಸೈಡ್​​ ಸ್ಟೋರಿ ಹೀಗಿದೆ

ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್​ ಕೇಳಿದ್ದರಲ್ಲಿ ತಪ್ಪೇನಿದೆ

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್​ಗೆ ತಮ್ಮಯ್ಯ ಮನವಿ ಸಲ್ಲಿಕೆ ವಿಚಾರಕ್ಕೆ ಅವರು ಪ್ರತಿಕ್ರಿಸಿದ್ದು, ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್​ ಕೇಳಿದ್ದರಲ್ಲಿ ತಪ್ಪೇನಿದೆ. ನನ್ನ ಜತೆ ಮಾತನಾಡಿಯೇ ತಿಮ್ಮಯ್ಯ ಬಿಜೆಪಿ ಟಿಕೆಟ್​ ಕೇಳಿದ್ದಾರೆ. 1994ರಲ್ಲಿ ನಂತರ ನಾನು ಯಾವತ್ತೂ ಪಕ್ಷದ ಟಿಕೆಟ್ ಕೇಳಿರಲಿಲ್ಲ. ನಾನು ಸಂಸದ, ಶಾಸಕನಾಗಬೇಕೇ ಎಂದು ಪಕ್ಷ ತೀರ್ಮಾನಿಸುತ್ತೆ. ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿ ಎಂದು ಶ್ರಮಿಸುವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.