AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ನಾಳೆಯಿಂದ ಕಾಂಗ್ರೆಸ್​ ಬಸ್​​ ಯಾತ್ರೆ ಆರಂಭ; ಜಮೀರ್​ ​ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ: ಸಿದ್ದರಾಮಯ್ಯ

ಈ ಬಾರಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಶಾಸಕ ಜಮೀರ್ ಅಹ್ಮದ್​ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

Bengaluru: ನಾಳೆಯಿಂದ ಕಾಂಗ್ರೆಸ್​ ಬಸ್​​ ಯಾತ್ರೆ ಆರಂಭ; ಜಮೀರ್​ ​ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ: ಸಿದ್ದರಾಮಯ್ಯ
TV9 Web
| Updated By: ವಿವೇಕ ಬಿರಾದಾರ|

Updated on:Jan 10, 2023 | 6:01 PM

Share

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದ್ದು, ರಾಜ್ಯ ಕಾಂಗ್ರೆಸ್​ (Congress) ನಾಯಕರು ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಶತಾಯಗತಾಯ ಈ ಬಾರಿ ಪೂರ್ಣ ಬಹುಮತದೊಂಗೆ ಅಧಿಕಾರದ ಚುಕ್ಕಾಣಿ ಹಿಡಯಲು ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ಭಾರತ ಜೋಡೋ ಯಾತ್ರೆ ನಂತರ ರಾಜ್ಯದಲ್ಲಿ ಬಸ್​ ಯಾತ್ರೆ ಮಾಡಲು ನಿರ್ಧರಿಸಿದ್ದು, ನಾಳೆಯಿಂದ (ಜ.11) ರಿಂದ ಕಾಂಗ್ರೆಸ್​ನ ಬಸ್​​ ಯಾತ್ರೆ ಪ್ರಾರಂಭವಾಗಲಿದೆ. ಈ ಬಾರಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಶಾಸಕ ಜಮೀರ್ ಅಹ್ಮದ್​ಗೆ (MLA Zameer Ahmed Kha)ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ಆಪ್ತ, ಶಾಸಕ ಜಮೀರ್ ಅಹ್ಮದ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಇಂದು (ಜ.10) ರೌಂಡ್ಸ್ ಹಾಕಿದ್ದಾರೆ. ಬಳಿಕ ಮಾತನಾಡಿದ ಅವರು ಭಾರತಿಯ ಜನತಾ ಪಕ್ಷ ಒಂದು ಕೊಮುವಾದಿ ಪಕ್ಷ. ಬಿಜೆಪಿ ತೊರೆದು ಹಲವರು ಕಾಂಗ್ರೆಸ್​​ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿಯವರು ಮಹಿಳೆಯರ, ಬಡವರು, ದಲಿತರ ಏಳಿಗೆ ಬಯಸಲ್ಲ. ಮಾತಿಗೆ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಬಿಜೆಪಿಯವರು ದಲಿತರು, ಅಲ್ಪಸಂಖ್ಯಾತರನ್ನು ವಿರೋಧಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ ಘೋಷ ವಾಕ್ಯದೊಂದಿಗೆ ಬಸ್​ ಯಾತ್ರೆ

ಭ್ರಷ್ಟ ಬಿಜೆಪಿ  ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದೊಂದಿಗೆ ಜನವರಿ 11ರಿಂದ ರಾಜ್ಯದಲ್ಲಿ ಕಾಂಗ್ರೆಸ್​ನ ಪ್ರಜಾಧ್ವನಿ ಬಸ್ ಯಾತ್ರೆ ಆರಂಭವಾಗುತ್ತದೆ ಎಂದು ನಿನ್ನೆ (ಜ.09) ರಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದರು. ಬೆಳಗಾವಿಯ ಟಿಳಕವಾಡಿಯಿಂದ ಬಸ್​​ ಯಾತ್ರೆ ಆರಂಭವಾಗಲಿದೆ. ಅಂದು ಬ್ರಿಟಿಷ್”ರನ್ನ ತೊಲಗಿಸಿ ಎಂಬ ಘೋಷ ವಾಕ್ಯ ಇತ್ತು, ಈಗ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದಿಂದ ಅಭಿಯಾನ ಆರಂಭವಾಗಲಿದೆ. ಕೇಂದ್ರ, ರಾಜ್ಯದ ಪ್ರಮುಖ ನಾಯಕರು ಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಕಾಂಗ್ರೆಸ್​ ನಾಯಕ ಬಸ್ ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ರಾಯರೆಡ್ಡಿ ಹೇಳಿದ್ದರು.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಳಿದಾಸ ವೃತ್ತದಲ್ಲಿ ಜನವರಿ 18ರಂದು ಬಾಗಲಕೋಟೆಯಲ್ಲಿ ಸಮಾವೇಶ ನಡೆಯಲಿದೆ. ಎರಡನೇ ಹಂತದಲ್ಲಿ ಜ.28ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಯಾತ್ರೆ ನಡೆಯಲಿದೆ. ಈ ಹಿಂದೆ 1924ರಲ್ಲಿ ಮಹಾತ್ಮಾ ಗಾಂಧಿ, ಬೆಳಗಾವಿಯ ತಿಳಕವಾಡಿಗೆ ಭೇಟಿ ಕೊಟ್ಟ ಸ್ಥಳವಾಗಿದೆ ಎಂದು ತಿಳಿಸಿದರು.

ಬಸ್​ ಯಾತ್ರೆ ಮಾರ್ಗ

ಬೆಳಗಾವಿಯಿಂದ ಶುರುವಾಗಲಿದ್ದು, ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ಜನವರಿ 11ರಂದು ಬೆಳಗಾವಿ ಜಿಲ್ಲೆ, ಜನವರಿ 16ರಂದು ಹೊಸಪೇಟೆ, ಜನವರಿ 17ರಂದು ಕೊಪ್ಪಳ, ಜನವರಿ 18ರಂದು ಬಾಗಲಕೋಟೆ-ಗದಗ ಜಿಲ್ಲೆಯಲ್ಲಿ ಬಸ್ ಯಾತ್ರೆ, ಜನವರಿ 19ರಂದು ಹಾವೇರಿ-ದಾವಣಗೆರೆ ಜಿಲ್ಲೆ, ಜನವರಿ 21 ಹಾಸನ-ಚಿಕ್ಕಮಗಳೂರು, ಜನವರಿ 22 ಉಡುಪಿ-ದಕ್ಷಿಣ ಕನ್ನಡ. ಜನವರಿ 23 ಕೋಲಾರ-ಚಿಕ್ಕಬಳ್ಳಾಪುರ, ಜನವರಿ 24 ತುಮಕೂರು-ಬೆಂಗಳೂರು ಗ್ರಾಮಾಂತರ ಜನವರಿ 25 ಚಾಮರಾಜನಗರ-ಮೈಸೂರು, ಜನವರಿ 26 ಮಂಡ್ಯ ಮತ್ತು ರಾಮನಗರ, ಜನವರಿ 27 ಯಾದಗಿರಿ-ಕಲಬುರಗಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Tue, 10 January 23