ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಹೇಮಲತಾರನ್ನು ಏರ್ಲಿಫ್ಟ್ ಮಾಡಿದ ಬಿಜೆಪಿ
ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕರಿಗೆ ಟಿಕೆಟ್ ಸಿಕ್ಕಿದ್ದು ಅಭ್ಯರ್ಥಿಗೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಲು ಬಿಜೆಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ. ಹೇಮಲತಾ ಕೊಪ್ಪಳದಿಂದ ತುಮಕೂರಿಗೆ ಕಾರಿನಲ್ಲಿ ಬಂದಿದ್ದು ತುಮಕೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಲಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ( Vidhan Parishad Election 2022) ಇಂದು (ಮೇ 24) ಬಿಜಿಪಿ ಅಭ್ಯರ್ಥಿಗಳ ಹೆಸರು (BJP Candidates Names) ಪ್ರಕಟವಾಗಿದೆ. ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಎಸ್.ಕೇಶವಪ್ರಸಾದ್ಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿಗೆ ಬಿಜೆಪಿ ಟಿಕೆಟ್ ಫೈನಲ್ ಮಾಡಿದೆ. ಇನ್ನು ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು ನಾಮಪತ್ರ ಸಲ್ಲಿಸಲು ಹೇಮಲತಾ ನಾಯಕ ಏರ್ಲಿಫ್ಟ್ ಮಾಡಲಾಗಿದೆ.
ಬಿಜೆಪಿ ಅಭ್ಯರ್ಥಿ ಹೇಮಲತಾರನ್ನು ಏರ್ಲಿಫ್ಟ್ ಮಾಡಿದ ಬಿಜೆಪಿ ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕರಿಗೆ ಟಿಕೆಟ್ ಸಿಕ್ಕಿದ್ದು ಅಭ್ಯರ್ಥಿಗೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಲು ಬಿಜೆಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ. ಹೇಮಲತಾ ಕೊಪ್ಪಳದಿಂದ ತುಮಕೂರಿಗೆ ಕಾರಿನಲ್ಲಿ ಬಂದಿದ್ದು ತುಮಕೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಲಿದ್ದಾರೆ. ಕಾರಿನಲ್ಲಿ ಬಂದರೆ ಬೆಂಗಳೂರು ತಲುಪುವುದು ತಡವಾಗುವ ಹಿನ್ನೆಲೆಯಲ್ಲಿ ಏರ್ಲಿಫ್ಟ್ ಮಾಡಲಾಗುತ್ತಿದೆ. ತುಮಕೂರಿನಿಂದ ಜಕ್ಕೂರು ಏರೋಡ್ರಮ್ವರೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದು ಜಕ್ಕೂರು ಏರೋಡ್ರಮ್ಗೆ ಬಿಜೆಪಿ ಕಚೇರಿಯ ಕಾರು ಕಳಿಸಲಾಗಿದೆ. ಆ ಕಾರಿನ ಮೂಲಕ ಜಕ್ಕೂರಿನಿಂದ ಬಿಜೆಪಿ ಕಚೇರಿಗೆ ಹೇಮಲತಾ ಬರಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬಿಫಾರಂ ಪಡೆದು ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಟಾಸ್ಕ್ಫೋರ್ಸ್ ರಚಿಸಿದ ಸೋನಿಯಾ ಗಾಂಧಿ; ಪ್ರಶಾಂತ್ ಕಿಶೋರ್ ಮಾಜಿ ಸಹವರ್ತಿಗೂ ಸ್ಥಾನ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಈ ಹಿಂದೆ ಶಶಿಕಲಾ ಜೊಲ್ಲೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ತಡವಾಗುತ್ತಿದ್ದ ಕಾರಣಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಲಾಗಿತ್ತು. ಇಂದು ಹೇಮಲತಾ ನಾಯಕ್ ಬಿ ಫಾರ್ಮ್ ಪಡೆಯಲು ತಡವಾಗುತ್ತಿರುವ ಕಾರಣಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿಯ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಸೇರಿ ಮೂವರಿಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿ ಫಾರಂ ವಿತರಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ವಿತರಿಸಿದ್ದು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಗೆ ಮೂವರೂ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಚಿವರಾದ ಸಿ.ಸಿ.ಪಾಟೀಲ್, ಕೆ.ಗೋಪಾಲಯ್ಯ ಉಪಸ್ಥಿತರಿದ್ದರು. ಇದನ್ನೂ ಓದಿ: ಜನರು ದೂರು ಸಲ್ಲಿಸಲು ವಾಟ್ಸಪ್ ನಂಬರ್ ಬಿಡುಗಡೆಗೊಳಿಸಿದ ಬೆವಿಕಂ
BSY ಪುತ್ರ ವಿಜಯೇಂದ್ರಗೆ ಬೇರೆ ಬೇರೆ ಅವಕಾಶ ಇದೆ ಪರಿಷತ್ನ 4 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಟಿಕೆಟ್ ಸಿಕ್ಕ ನಾಲ್ವರು ಅಭ್ಯರ್ಥಿಗಳು ನನ್ನ ಟೀಮ್ನ ಸಹ ಸದಸ್ಯರು. ನಾಲ್ವರೂ ಅಭ್ಯರ್ಥಿಗಳಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರೀಯ ನಾಯಕರು ಹೊರಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಮೋದಿ ಸರ್ಕಾರ ಅದ್ಭುತವಾದ ತೀರ್ಮಾನವನ್ನು ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರ ಒಪ್ಪಿಗೆ ಕೂಡ ತೆಗೆದುಕೊಳ್ಳಬೇಕಾಗುತ್ತದೆ. BSY ಪುತ್ರ ವಿಜಯೇಂದ್ರಗೆ ಬೇರೆ ಬೇರೆ ಅವಕಾಶ ಇದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ರು.
Published On - 2:58 pm, Tue, 24 May 22