AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಮೇಶ ಮೇಸ್ತ ಸಾವು ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ: ಎಂಎಲ್​ಸಿ ರವಿಕುಮಾರ

ಪಕ್ಷನಾಯಕ ಸಿದ್ದರಾಮಯ್ಯವರಿಗೆ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ ಎಂದು ಬಿಜೆಪಿ ವಿಧಾನ ಪರಿಷತ್​ ಸದಸ್ಯ ರವಿಕುಮಾರ ಬೆಂಗಳೂರಲ್ಲಿ ವಾಗ್ದಾಳಿ ಮಾಡಿದ್ದಾರೆ.

ಪರಮೇಶ ಮೇಸ್ತ ಸಾವು ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ: ಎಂಎಲ್​ಸಿ ರವಿಕುಮಾರ
ಎಂಎಲ್​ಸಿ ರವಿಕುಮಾರ
TV9 Web
| Updated By: ವಿವೇಕ ಬಿರಾದಾರ|

Updated on: Oct 04, 2022 | 3:03 PM

Share

ಬೆಂಗಳೂರು: ವಿಪಕ್ಷನಾಯಕ ಸಿದ್ದರಾಮಯ್ಯವರಿಗೆ (Siddaramaiah) ಬಿಜೆಪಿ (BJP) ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ ಎಂದು ಬಿಜೆಪಿ ವಿಧಾನ ಪರಿಷತ್​ ಸದಸ್ಯ ರವಿಕುಮಾರ ಬೆಂಗಳೂರಲ್ಲಿ ವಾಗ್ದಾಳಿ ಮಾಡಿದ್ದಾರೆ. ಹೊನ್ನಾವರ ಪರೇಶ್ ಮೇಸ್ತ ಸಾವು ಹತ್ಯೆ ಅಲ್ಲ ಆಕಸ್ಮಿಕ ಸಾವು ಎಂದು ಸಿಬಿಐ ತನಿಖಾ ವರದಿಯಲ್ಲಿ ಉಲ್ಲೇಖ ಬಹಿರಂಗೊಂಡ ಬೆನ್ನಲ್ಲೆ ವಿಪಕ್ಷನಾಯಕ ಸಿದ್ದರಾಮಯ್ಯ ಬಿಜೆಪಿ ಕ್ಷಮೆ ಕೇಳಬೇಕು ಎಂದು ಟ್ವೀಟ್​ ಮಾಡಿದ್ದರು. ಈ ಸಂಬಂಧ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಎಂಎಲ್​ಸಿ ರವಿಕುಮಾರ ಹುಬ್ಬಳ್ಳಿಯಲ್ಲಿ ಯೋಗೇಶ್ ಕೊಲೆಯಾದಾಗ ಏನಾಯ್ತು? ರಾಜ್ಯದಲ್ಲಿ ಆಗಿರೋ ಕೊಲೆಗಳಿಗೆ ಕಾಂಗ್ರೆಸ್​ ಮತ್ತು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು.

ಪಿಎಫ್​ಐ ಮೇಲಿನ ಕೇಸ್ ವಾಪಸ್​ ಪಡೆದಿದ್ದು ಕೊಲೆಗೆ ಕಾರಣ. ಕಾಂಗ್ರೆಸ್​​ ಭಂಡ ಧೈರ್ಯದಿಂದ PFI ಸಂಘಟನೆ ಬೆಂಬಲಿಸಿತ್ತು. ಪರೇಶ್ ಮೇಸ್ತಾ ಸಾವು ಕೊಲೆ. ಇದರಲ್ಲಿ ಎರಡು ಮಾತು ಇಲ್ಲ. ಇದಕ್ಕೆ ಪಿಎಫ್ಐ ಸಂಘಟನೆ ಯವರೇ ಕಾರಣ ಅಂತಾ ಅವರ ತಂದೆಯೇ ಹೇಳಿದ್ದಾರೆ. ಸಿಬಿಐ ವರದಿ ಕೋರ್ಟ್​​ಗೆ ಕೊಟ್ಟಿದ್ದಾರೆ. ಕೋರ್ಟ್​​ನಿಂದ ಸಂಪೂರ್ಣ ತನಿಖಾ ವರದಿ ಬರಲಿ. ನಮ್ಮನ್ನು ಕೇಳುವ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಸಾಕ್ಷ್ಯನಾಶ ಮಾಡಿದ್ದಕ್ಕಾಗಿ ಅವರು ಜನರಲ್ಲಿ ಕ್ಷಮೆ ಕೇಳಬೇಕು. ಧಾರವಾಡದಲ್ಲಿ ಯೋಗೇಶ್ ಗೌಡ ಕೊಲೆಗೆ ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲಕರ್ಣಿ ಕಾರಣ ಎಂಬುದು ಗೊತ್ತಿರಲಿಲ್ಲವೇ? ಈ ವಿಷಯವನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಡಿ.ಕೆ.‌ ರವಿ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕೆ.ಜೆ. ಜಾರ್ಜ್ ಕಾರಣ. ನಾವು ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಪರೇಶ್ ಮೇಸ್ತ ಪ್ರಕರಣದ ಕುರಿತು ಸಿಬಿಐ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.

ಮೊದಲ ದಿನದ ಭಾರತ್ ಜೋಡೋ ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರನ್ನು ಹೈಜಾಕ್ ಮಾಡಿದರು. ಆಮೇಲೆ ಪಾದಯಾತ್ರೆಗೆ ಜನರೇ ಬರಲಿಲ್ಲ. ಇದರಿಂದ ಅವರ ಬುಡ ಅಲುಗಾಡುತ್ತಿದೆ. ನಮಗೆ ಯಾವುದೇ ನಡುಕ ಇಲ್ಲ, ಅವರು ನಡುಗುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಸರಣಿ ಪ್ರಕರಣಗಳಿಗೆ ಕ್ಷಮೆ ಕೇಳಬೇಕು : ಛಲವಾದಿ ನಾರಾಯಣಸ್ವಾಮಿ

ಪರೇಶ್ ಮೇಸ್ತಾ ಸಾವು ಪ್ರಕರಣದ ಕುರಿತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಇದು ಖಂಡಿತವಾಗಿಯೂ ಕೊಲೆ ಎಂದು ಅವರ ತಂದೆಯವರೇ ಹೇಳಿದ್ದಾರೆ. ಅವರ ತಂದೆಯವರಿಗಿಂತ ಸಿದ್ದರಾಮಯ್ಯನವರಿಗೆ ಹೆಚ್ಚು ಗೊತ್ತಾ? ರಕ್ತದ ಮಡುವಿನಲ್ಲಿ ಅವರು ಸತ್ತಿದ್ದಾರೆ ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕಲ್ಲವಾ ? ಕೊಲೆಗೆ ಇದ್ದ ಪುರಾವೆಗಳನ್ನು ನಾಶ ಮಾಡಿ ಬಚಾವ್ ಆಗಿದ್ದೀರಿ ನೀವು. ಕೋರ್ಟ್​ಗೆ ಸಿಬಿಐ ವರದಿ ಕೊಟ್ಟಿದೆ. ಪೂರ್ತಿ ವರದಿ ಬರಲಿ, ಗೃಹ ಸಚಿವರು ಇದರ ಬಗ್ಗೆ ಮಾತಾಡಲಿ. ಆ ನಂತರ ಇದರ ಬಗ್ಗೆ ಚರ್ಚೆ ಮಾಡೋಣ. ಯೋಗೇಶ್ ಗೌಡ ಕೊಲೆಗೆ ನಿಮ್ಮ ಮಂತ್ರಿಗಳೇ ಅಲ್ವಾ ಕಾರಣ? ಸಿದ್ದರಾಮಯ್ಯ ಸರಣಿ ಕೇಸ್​ಗಳಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು

ಬಿ ಎಸ್​ ಯಡಿಯೂರಪ್ಪ, ಸಚಿವ ಆರ್​. ಅಶೋಕ್ ಕುಮಾರ, ಶೋಭಾ ಕರಂದ್ಲಾಜೆ ಟಿಪ್ಪು ಖಡ್ಗ ಹಿಡಿದಿರುವ ಫೋಟೋ ಕಾಂಗ್ರೆಸ್​ನಿಂದ‌ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆ ಮಾಡುವುದು ಬೇರೆ, ಯಾರೋ ಕಾರ್ಯಕ್ರಮಕ್ಕೆ ಕರೆದು ಖಡ್ಗ, ಕತ್ತಿ ಕೊಟ್ಟರೆ ನಾವೇ ಅದನ್ನು ಮಾಡಿದ್ದು ಅಂತಲ್ಲ. ನಾವೇನೂ ಅಲ್ಪಸಂಖ್ಯಾತರ ವಿರೋಧಿ ಅಲ್ವಲ್ಲಾ? ಸಿದ್ದರಾಮಯ್ಯ ಟಿಪ್ಪು ಟೋಪಿ ಹಾಕಿದರೆ ಹಾಕಿಸಿಕೊಳ್ಳುತ್ತಾರೆ. ಅದೇ ಕಾವಿ ಹಾಕಿದರೆ ಅದನ್ನು ಹಾಕಿಸಿಕೊಳ್ಳಲ್ಲ. ಕೇಳಿದರೇ ಹಿಂದೂ ಅಂತಾರೆ, ಇವರು ಯಾವ ಹಿಂದೂ? ನಮ್ಮ ಸರ್ಕಾರದಿಂದ ಯಾವತ್ತೂ ಟಿಪ್ಪು ಜಯಂತಿ ಮಾಡಿಲ್ಲ. ಮುಂದೆಯೂ ನಾವು ಟಿಪ್ಪು ಜಯಂತಿ ಮಾಡಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಲ್ಲಿಕ್ ಮಾಡಿ

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್