AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಆಸ್ತಿಗಾಗಿ 88 ವರ್ಷದ ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿದ ಮಗ ಅರೆಸ್ಟ್

ಜಾನ್ ಡಿ ಕ್ರೂಸ್ ಎಂಬ 65 ವರ್ಷದ ವ್ಯಕ್ತಿ ತನ್ನ 88 ವರ್ಷದ, ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿ ಜೈಲು ಪಾಲಾಗಿದ್ದಾನೆ.

Crime News: ಆಸ್ತಿಗಾಗಿ 88 ವರ್ಷದ ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿದ ಮಗ ಅರೆಸ್ಟ್
ಜಾನ್ ಡಿ ಕ್ರೂಸ್, ಕ್ಯಾಥರಿನ್
TV9 Web
| Updated By: ಆಯೇಷಾ ಬಾನು|

Updated on:Oct 05, 2022 | 9:34 AM

Share

ಬೆಂಗಳೂರು: ಕೋಟ್ಯಾಂತರ ಮೌಲ್ಯದ ಆಸ್ತಿಗಾಗಿ ತಾಯಿಯನ್ನೇ ಕೊಲ್ಲಲು ಮಗ ಯತ್ನಿಸಿದ್ದು(Murder Attempt)ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಬೆಂಗಳೂರಿನ ಆರ್.ಟಿ.ನಗರ ಠಾಣೆ ಪೊಲೀಸರು(RT Nagar Police) ಬಂಧಿಸಿದ್ದಾರೆ. ಜಾನ್ ಡಿ ಕ್ರೂಸ್ ಎಂಬ 65 ವರ್ಷದ ವ್ಯಕ್ತಿ ತನ್ನ 88 ವರ್ಷದ, ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿ ಜೈಲು ಪಾಲಾಗಿದ್ದಾನೆ.

88 ವರ್ಷದ ಕ್ಯಾಥರಿನ್​ಗೆ ನಾಲ್ವರು ಮಕ್ಕಳಿದ್ದು ನಾಲ್ವರ ಪೈಕಿ ಮೊದಲನೆಯವ ಆರೋಪಿ ಜಾನ್, ಇನ್ನಿಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿದ್ದಾರೆ. ಮತ್ತೋರ್ವ ಪುತ್ರಿ ಆಶ್ರಮದಲ್ಲಿದ್ದಾರೆ. ಕ್ಯಾಥರಿನ್ ಅವರು ಮೊದಲ ಮಗನ ಹೆಸರಿಗೆ ಆಸ್ತಿ ಬರೆದಿದ್ದರು. ವಯಸ್ಸಾದ ಕಾರಣ ಕ್ಯಾಥರಿನ್ ಅವರಿಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು. ಉಸಿರಾಟದ ಸಮಸ್ಯೆ ಹಿನ್ನೆಲೆ ಆಕೆಗೆ ನಿರಂತರ ಆಕ್ಸಿಜನ್ ಪೂರೈಕೆ ಅಗತ್ಯ ಇತ್ತು. ಹೀಗಾಗಿ ಅಮೆರಿಕಾದ ಮಗ ತಾಯಿಯನ್ನು ನೋಡಿಕೊಳ್ಳಲು ಬೆಂಗಳೂರಿಗೆ ಕೇರ್ ಟೇಕರ್ ಕಳಿಸಿದ್ದರು. ಆದ್ರೆ ಮತ್ತೊಂದು ಕಡೆ ಜಾನ್ ಗೆ ಆಸ್ತಿ ಬರೆದು ಕೊಟ್ಟಿದ್ದರೂ ಬದುಕಿದ್ದ ತಾಯಿ ಮೇಲೆ ಆತನಿಗೆ ಕೋಪ ಇತ್ತು. ಇದೇ ವಿಚಾರವಾಗಿ ತಾಯಿ ಜೊತೆ ಆಗಾಗ ಜಗಳ ಮಾಡುತಿದ್ದ. ಇದನ್ನೂ ಓದಿ: Twitter Buyout: ಟ್ವಿಟರ್ ಖರೀದಿಗೆ ಎಲಾನ್ ಮಸ್ಕ್ ಮತ್ತೊಂದು ಆಫರ್, ಮೂಲ ದರ ಒಪ್ಪಿಕೊಂಡ ಟ್ವಿಟರ್

ಸೆ.29ರಂದು ಸಂಜೆ ಮನೆಗೆ ನುಗ್ಗಿದ್ದ ಜಾನ್​ ಗಲಾಟೆ ಮಾಡಿದ್ದಾನೆ. ಕೇರ್ ಟೇಕರ್ ಹೊರಗೆ ತಳ್ಳಿ ತಾಯಿ ಕೊಲೆಗೆ ಯತ್ನಿಸಿದ್ದಾನೆ. ತಾಯಿ ಆಕ್ಸಿಜನ್ ಪೈಪ್ ಕಿತ್ತು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೇರ್ ಟೇಕರ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ವೃದ್ಧೆಯನ್ನ ರಕ್ಷಿಸಿದ್ದ R.T.ನಗರ ಪೊಲೀಸರು ಕೇರ್ ಟೇಕರ್ ದೂರಿನ ಮೇರೆಗೆ ಜಾನ್ ಡಿ ಕ್ರೂಸ್ ಸೆರೆ ಹಿಡಿದಿದ್ದಾರೆ.

ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರೈತ ಚಿದಾನಂದ್ ಬಾಬುಶೆಟ್ಟಿ (53) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಚಿದಾನಂದ್ ಅವರು ಬ್ಯಾಂಕ್ ಸೇರಿದಂತೆ ಹಲವೆಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾಟದಹೊಸಳ್ಳಿಯ ಕೆರೆ ಬಳಿ ಯುವಕ ನೇಣಿಗೆ ಶರಣು

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದಲ್ಲಿ ಸುನಿಲ್ ಕುಮಾರ್ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕ್ಯಾಷಿಯರ್ ಆಗಿದ್ದ ಸುನಿಲ್ ಕುಮಾರ್, ಬ್ಯಾಂಕ್ ನಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಬ್ಯಾಂಕ್​ನ ಮ್ಯಾನೇಜರ್ 84 ಲಕ್ಷ ರೂಪಾಯಿ ವಂಚಿಸಿ ಎಸ್ಕೇಪ್ ಆಗಿದ್ದ. ಎಸ್ಕೇಪ್ ಆಗಿರುವ ಮ್ಯಾನೇಜರ್ ಜೊತೆ ಸುನಿಲ್ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ವಂಚನೆ ಪ್ರಕರಣ ತನ್ನ ಮೇಲೆ ಬರುತ್ತೆ ಅಂತ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:20 am, Wed, 5 October 22