ಬಿಡಿಎ ಬದಲಿ ನಿವೇಶನ ಆರೋಪ: ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿಗೆ ರಣದೀಪ್ ಸುರ್ಜೆವಾಲಾ ಪ್ರಶ್ನೆ

ಬೊಮ್ಮಾಯಿಯವರೇ ನೀವು ಈಗ ಕಾರ್ಯನಿರ್ವಹಿಸ್ತೀರಾ? ಜಟಿಲವಾದ ಮೌನಕ್ಕೆ ಶರಣಾಗುತ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ.

ಬಿಡಿಎ ಬದಲಿ ನಿವೇಶನ ಆರೋಪ: ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿಗೆ ರಣದೀಪ್ ಸುರ್ಜೆವಾಲಾ ಪ್ರಶ್ನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಆಯೇಷಾ ಬಾನು

Updated on:Nov 23, 2022 | 11:58 AM

ಬೆಂಗಳೂರು: ಬಿಡಿಎ(BDA) ಬದಲಿ ನಿವೇಶನ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ(Ranadeep Singh Surjewala) ಟ್ವೀಟ್ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಬೊಮ್ಮಾಯಿಯವರೇ, ಸುಪ್ರೀಂಕೋರ್ಟ್​​ ಸಾರ್ವಜನಿಕ ಕಚೇರಿಯ ದುರುಪಯೋಗ ಮತ್ತು ಅಕ್ರಮ ಹಂಚಿಕೆಗಳನ್ನ ​ಕಂಡುಹಿಡಿದಿದೆ. ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ ಚರಂತಿಮಠ, ಬಿಜೆಪಿ ಮಾಜಿ ಸಂಸದ ಬಿ.ಪಾಟೀಲ್ ಹಾಗೂ ಶಾಸಕ ಅಭಯ ಪಾಟೀಲ್​ ಸೇರಿ ಅನೇಕರ ಬಗ್ಗೆ ಆಕ್ಷೇಪಣೆ ಇದೆ. ಬೊಮ್ಮಾಯಿಯವರೇ ನೀವು ಈಗ ಕಾರ್ಯನಿರ್ವಹಿಸ್ತೀರಾ? ಜಟಿಲವಾದ ಮೌನಕ್ಕೆ ಶರಣಾಗುತ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: Uttar Pradesh: ಆಗ್ರಾದ ಖಾಸಗಿ ಆಸ್ಪತ್ರೆಯಲ್ಲಿ ಕಟ್ಟಡದ ಬೆಂಕಿ, 3 ಜನ ಸಾವು

ಜಿಹಾದ್ ಸಂಘಟನೆ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್

ಕಾಂಗ್ರೆಸ್‌ ಮತ್ತು ಜಿಹಾದಿ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರದ್ದೂ ಒಂದೇ ಧ್ಯೇಯ, ಅದು ದೇಶವನ್ನು ತುಂಡರಿಸುವುದು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಮುಂದುವರೆದರೆ, ಧಾರ್ಮಿಕತೆಯ ಹೆಸರಿನಲ್ಲಿ ಜಿಹಾದಿ ಸಂಘಟನೆಗಳು ಕಾರ್ಯಾಚರಿಸುತ್ತಿದ್ದವು. ದೇಶ ತುಂಡರಿಸಲು ಎಷ್ಟೊಂದು ಮುಖವಾಡಗಳು ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ದೇಶದಲ್ಲಿ ನಕಲಿ ಗಾಂಧಿ ಕುಟುಂಬ ಉಗ್ರವಾದವನ್ನು ಪೋಷಿಸಿದರೆ ರಾಜ್ಯದಲ್ಲಿ ಅದರ ನೇತೃತ್ವ ವಹಿಸಿಕೊಂಡಿದ್ದು ಸಿದ್ದರಾಮಯ್ಯ. ಸಮಾಜದಲ್ಲಿ ಅಸ್ಥಿರತೆ ಮೂಡಿಸಿ ತಮ್ಮ ವೈಯುಕ್ತಿಕ ಧಾರ್ಮಿಕ ಗುರಿಗಳನ್ನು ಹಿಂಸೆಯ ಮೂಲಕ ಪ್ರತಿಷ್ಠಾಪಿಸುವುದು ಈ ಜಿಹಾದಿಗಳ ಉದ್ದೇಶವಾಗಿತ್ತು. ಇಂತವರಿಗೂ ಕಾಂಗ್ರೆಸ್‌ ಬೆಂಬಲ ನೀಡುತ್ತಿರುವುದೇಕೆ? ಸಹಜ ದೇಶವಾಸಿಗಳ ಸೋಗಿನಲ್ಲಿ ದೇಶದಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸುವ ಹುನ್ನಾರ ನಡೆಸಿದ ಜಿಹಾದಿ ಸಂತತಿಯ ಪಿಎಫ್‌ಐ ಸೇರಿದಂತೆ ಸಮಾಜ ಘಾತುಕ ಸಂಘಟನೆಗಳನ್ನು ಮೋದಿ ಸರ್ಕಾರ ನಿಷೇಧಿಸಿದೆ. ಜಿಹಾದಿ ಮನಸ್ಥಿತಿ ನೆಲೆಯೂರುವಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರವಿದೆ. ಇವರ ಉಗ್ರ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದೇ ಕಾಂಗ್ರೆಸ್. ಇದು ಉಗ್ರ ಭಾಗ್ಯ ಎಂದು ಬಿಜೆಪಿ ವ್ಯಾಂಗ್ಯವಾಡಿದೆ. ಇದನ್ನೂ ಓದಿ: VIDEO: 1 ಎಸೆತದಲ್ಲಿ 3 ಬಾರಿ ಜೀವದಾನ ಪಡೆದ ಹರ್ಷಲ್ ಪಟೇಲ್..!

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:46 pm, Wed, 5 October 22

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​