ಅಗ್ನೀಪಥ್ ಯೋಜನೆ ಯಾಕೆ ಬೇಕು? ಪೊಲೀಸರನ್ನು ತಳ್ಳಾಡಿ ಅಸಭ್ಯವಾಗಿ ಬೆರಳು ತೊರಿಸಿ ವಾರ್ನಿಂಗ್ ಕೊಟ್ಟ ನಲಪಾಡ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2022 | 3:56 PM

ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಾ ಕಾರ್ಯಕರ್ತರು ಮತ್ತು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಆಗಮಿಸಿದರು. ಪ್ರತಿಭಟನೆ ವೇಳೆ ಬಿ.ವಿ.ಶ್ರೀನಿವಾಸ್ ಶರ್ಟ್ ಹರಿಯಲಾಗಿದ್ದು, ಪೊಲೀಸರ ವಿರುದ್ಧ ಶ್ರೀನಿವಾಸ್ ಗರಂ ಆದರು.

ಅಗ್ನೀಪಥ್ ಯೋಜನೆ ಯಾಕೆ ಬೇಕು? ಪೊಲೀಸರನ್ನು ತಳ್ಳಾಡಿ ಅಸಭ್ಯವಾಗಿ ಬೆರಳು ತೊರಿಸಿ ವಾರ್ನಿಂಗ್ ಕೊಟ್ಟ ನಲಪಾಡ್​
ಮೊಹಮ್ಮದ್ ನಲಪಾಡ್
Follow us on

ಬೆಂಗಳೂರು: ಅಗ್ನೀಪಥ್ ಯೋಜನೆ ಯಾಕೆ ಬೇಕು. ಅಗ್ನೀಪಥ್ ಯೋಜನೆ ಮುಗಿದ ಮೇಲೆ ಯುವಕರು ಏನು ಮಾಡಬೇಕು. 4ವರ್ಷ ಅಗ್ನಿಪಥ್ ಇಂದ ಏನು ಮಾಡಲು ಸಾಧ್ಯ ಎಂದು ನಗರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿಕೆ ನೀಡಿದರು. ಈ ವೇಳೆ ಪೊಲೀಸರನ್ನು ತಳ್ಳಾಡಿ ನಲಪಾಡ್ ಅಸಭ್ಯವಾಗಿ ಹಲವು ಭಾರಿ ಪೊಲೀಸರಿಗೆ ಬೆರಳು ತೊರಿಸಿ ವಾರ್ನಿಂಗ್ ಕೊಟ್ಟಿದ್ದಾರೆ. ಅಗ್ನಿಪತ್ ಆಯೋಜನೆ ಖಂಡಿಸಿ ಇಂದು ಮೊಹಮ್ಮದ್ ನಲಪಾಡ್ ಮುಂದಾಳತ್ವದಲ್ಲಿ ರಾಜ್ಯ ಯೂತ್ ಕಾಂಗ್ರೆಸ್ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಭವನದಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನೆ ಮಾಡಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿದ್ದರು. ಯೂತ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಬಿಜೆಪಿಯ ಅವೈಜ್ಞಾನಿಕ ಅಗ್ನಿಪತ್ ಯೋಜನೆ ಹಿಂದೆ ಪಡೆಯುವವರೆಗೂ ಹೋರಾಟ ಮಾಡುವುದಾಗಿ ತಿಳಿಸಲಾಗಿದೆ. ಕೋವಿಡ್​ನಿಂದ 2ಕೋಟಿ ಉದ್ಯೋಗ ಹೋಗಿದೆ. ಅಗ್ಮೀಪತ್ ಯೋಜನೆ ವಾಪಸ್ ಪಡೆಯೋತನಕ ಯೂತ್ ಕಾಂಗ್ರೆಸ್ ಹೋರಾಟ ಮಾಡಲಿದೆ. ನಾವು ರಾಜಭವನಕ್ಕೆ ರ್ಯಾಲಿ ಮಾಡುತ್ತೇವೆ. ಬ್ಯಾರಿಕೇಡ್ ಬಿಳಿಸಿಯಾದ್ರೂ ನಾವು ರಾಜಭವನಕ್ಕೆ ಹೋಗಲೇಬೇಕು. ಲಾಠಿ ಬೀಸಿದ್ರು ಪರವಾಗಿಲ್ಲ ನಾವು ರಾಜಭವನಕ್ಕೆ ರ್ಯಾಲಿ ಹೊರಡೋಣ ಎಂದು ಹೇಳಿದರು.

ಇದನ್ನೂ ಓದಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಶಂಕಿತ ಮಾಸ್ಟರ್ ಮೈಂಡ್ ಸಾಜಿದ್ ಮಿರ್ ಬಂಧಿಸಿದ ಪಾಕಿಸ್ತಾನ

ಹೇಯ್ ನೀನು ಬಿಜೆಪಿಯವ್ನಾ: ಬಿ.ವಿ.ಶ್ರೀನಿವಾಸ್

ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಾ ಕಾರ್ಯಕರ್ತರು ಮತ್ತು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಆಗಮಿಸಿದರು. ಪ್ರತಿಭಟನೆ ವೇಳೆ ಬಿ.ವಿ.ಶ್ರೀನಿವಾಸ್ ಶರ್ಟ್ ಹರಿಯಲಾಗಿದ್ದು, ಪೊಲೀಸರ ವಿರುದ್ಧ ಶ್ರೀನಿವಾಸ್ ಗರಂ ಆದರು. ಹೇಯ್ ನೀನು ಬಿಜೆಪಿಯವ್ನಾ ಎಂದು ಪೊಲೀಸರ ಜತೆ ಜಗಳ ಮಾಡಿದರು. ಪ್ರತಿಭಟನಾನಿರತ ಸಾವಿರಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಆನಂದ್ ರಾವ್ ಸರ್ಕಲ್ ಬಳಿ ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನಾ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸ್

ಸೌತ್ ರುಚಿ ಹೋಟೆಲ್ ಸರ್ಕಲ್ ಬಳಿ ಪೊಲೀಸ್ ಬ್ಯಾರಿಕೇಡ್ ಹಾಕಿ ಪ್ರತಿಭಟನಾ ರ್ಯಾಲಿ ತಡೆಯಲು ಪೊಲೀಸರು ಮುಂದಾದರು. ನೂರಾರು ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಯಾಗಿದ್ದು, ಕೈ ಕಾರ್ಯಕರ್ತರನ್ನ ವಶಕ್ಕೆ ಪಡೆಯಲು ಬಸ್ ಗಳು ಸಿದ್ದವಾಗದ್ದವು. ಬ್ಯಾರಿಕೇಡ್ ಏರಲು ಶ್ರೀನಿವಾಸ್ ಬಿ.ವಿ ಹರಸಾಹಸಪಟ್ಟರು. ಇದೇ ವೇಳೆ ಪೊಲೀಸ್​ರಿಂದ ಇಳಿಸುವ ಕೆಲಸವಾಯಿತು. ನಲಪಾಡ್, ಶ್ರೀನಿವಾಸ್​ರನ್ನ ಪೊಲೀಸರು ವಶಕ್ಕೆ‌ ಪಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಲಪಾಡ್​ನನ್ನೂ ಬಸ್​ನಲ್ಲೇ ಪೊಲೀಸರು ಹೊತ್ತೊಯ್ದರು. ರೇಸ್ ಕೋರ್ಸ್ ರಸ್ತೆ ಬಳಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾವೇ ಸೃಷ್ಟಿಸಿದ್ದು, ಶರ್ಟ್​ಗಳನ್ನ ಹರಿದು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ, ಮೊಹಮ್ಮದ್ ನಲಪಾಡ್ ಮತ್ತು ಪೊಲೀಸರ ನಡುವೆ ಜಟಾಪಟಿ