ಬೆಂಗಳೂರು: ವಿಜಯನಗರದ ಹಂಪಿ ನಗರದಲ್ಲಿ ಸರಣಿ ರಸ್ತೆ ಅಪಘಾತ
ವಿಜಯನಗರದ ಹಂಪಿ ನಗರದ ಹಂಪಿ ನಗರದ ಹತ್ತನೇ ಮುಖ್ಯ ರಸ್ತೆಯಲ್ಲಿ ನಡೆದಿರುವ ಈ ರಸ್ತೆ ಅಪಘಾತದಲ್ಲಿ ಇನ್ನೋವಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕ್ವಾಲೀಸ್ ವೆಹಿಕಲ್ ಗೆ ಡಿಕ್ಕಿಯಾಗಿದೆ. ಕ್ವಾಲೀಸ್ ವಾಹನದಲ್ಲಿ ಒಂದೇ ಕುಟುಂಬದ ಐವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಆರ್ ಪಿಸಿ ಲೇಔಟಿನ 87 ಬಸ್ ಸ್ಟಾಪ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಇನ್ನೋವಾ ಕ್ರಿಸ್ಟಾ- ಕ್ವಾಲಿಸ್ ಕಾರುಗಳ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಈ ವೇಳೆ ಮತ್ತೊಂದು ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯನಗರದ ಹಂಪಿ ನಗರದ ಹಂಪಿ ನಗರದ ಹತ್ತನೇ ಮುಖ್ಯ ರಸ್ತೆಯಲ್ಲಿ ನಡೆದಿರುವ ಈ ರಸ್ತೆ ಅಪಘಾತದಲ್ಲಿ ಇನ್ನೋವಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕ್ವಾಲೀಸ್ ವೆಹಿಕಲ್ ಗೆ ಡಿಕ್ಕಿಯಾಗಿದೆ. ಕ್ವಾಲೀಸ್ ವಾಹನದಲ್ಲಿ ಒಂದೇ ಕುಟುಂಬದ ಐವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇನ್ನೋವಾ ಕಾರ್ ಡಿಕ್ಕಿಯಾಗುತ್ತಿದ್ದಂತೆ ಕ್ವಾಲೀಸ್ ವಾಹನ ಬಟ್ಟೆ ಅಂಗಡಿಗೆ ನುಗ್ಗಿದೆ. ಕ್ವಾಲೀಸ್ ವಾಹನದಲ್ಲಿದ್ದ ಐದೂ ಜನಕ್ಕೆ ಗಾಯಗಳಾಗಿವೆ. ಗಾಯಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Shocking: ಬಸ್ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಹಳ್ಳದಲ್ಲಿ ನಾಲ್ಕು ನವಜಾತ ಶಿಶುಗಳ ಮೃತ ದೇಹ ಪತ್ತೆಯಾಗಿದೆ. ಶಿಶುಗಳನ್ನ ಡಬ್ಬದಲ್ಲಿ ಹಾಕಿ, ಹಳ್ಳದಲ್ಲಿ ಬಿಟ್ಟಿದ್ದಾರೆ ದುರುಳರು. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾರು ಎಸೆದರು? ಏಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತದೇಹ ಕಂಡು ಹೌಹಾರಿದ ಮೂಡಲಗಿಯ ಜನ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Also Read:
Assam Flood: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿಕೆ; ಸಿಲ್ಚಾರ್ಗೆ ಹೆಲಿಕಾಪ್ಟರ್ ಮೂಲಕ ಆಹಾರ, ನೀರಿನ ಪೂರೈಕೆ
Also Read:
ಗೊಂಬೆಯನ್ನು ಮದುವೆಯಾದ ಮಹಿಳೆಗೆ ಜನಿಸಿತು ಮಗು! ಇಲ್ಲಿದೆ ಕುತೂಹಲಕಾರಿ ಸಂಗತಿ
Published On - 2:58 pm, Fri, 24 June 22