ಬೆಂಗಳೂರು: ಶತಪ್ರಯತ್ನ ಬಳಿಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ (Youth President) ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಿದ್ದಾರೆ. ಸರ್ವಧರ್ಮ ಪ್ರಾರ್ಥನೆ ಮೂಲಕ ರಾಜ್ಯ ಯುವ ಕಾಂಗ್ರೆಸ್ (Congress) ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಇಂದು (ಜ.31) ರಕ್ಷಾ ರಾಮಯ್ಯ ಘೋಷಿತ ಅಧಿಕಾರ ಅವಧಿ ಮುಕ್ತಾಯವಾಗಿದೆ. ಫೆಬ್ರವರಿ 10 ರಂದು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜತೆ ಪ್ರತಿಜ್ಞೆ ಸ್ವೀಕಾರ ಮಾಡಲಿದ್ದಾರೆ.
ಅಧಿಕಾರ ಸ್ವೀಕರಿಸಿ ಟಿವಿ9 ಜೊತೆ ಮಾತನಾಡಿದ ನೂತನ ಅಧ್ಯಕ್ಷ ಮೊಹ್ಮದ್ ನಲಪಾಡ್, 1 ವರ್ಷದ ಹಿಂದೆ ಚುನಾವಣೆ ಬಳಿಕ ಕೆಲ ಗೊಂದಲವಿತ್ತು. ಇವತ್ತಿನ ತನಕ ರಕ್ಷಾ ರಾಮಯ್ಯಗೆ ಸಮಯ ನೀಡಿದ್ದರು. ಇಂದಿನಿಂದ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಹೈಕಮಾಂಡ್ ಏನೇ ಜವಾಬ್ದಾರಿ ಕೊಟ್ರು ನಿರ್ವಹಿಸುತ್ತೇನೆ. ಹಿಂದಿನ ಘಟನೆ ಈಗ ಬೇಡ, ಇಂದಿನಿಂದ ನಾನೇ ಅಧ್ಯಕ್ಷ. ಎಲ್ಲರಿಗೂ ನಾನೇ ಅಧ್ಯಕ್ಷ, ಗುಂಪುಗಾರಿಕೆ ಇರಬಾರದು. ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದರು ನಾನು ತಪ್ಪು ಮಾಡಿದ್ದೇನೆ, ಬಹಳ ಸಲ ತಪ್ಪು ಮಾಡಿದ್ದೇನೆ. ಮೈಯೆಲ್ಲಾ ಕಣ್ಣಾಗಿ, ಯಾರಿಗೂ ನೋಯಿಸದೆ ಕೆಲಸ ಮಾಡುವೆ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುವೆ ಅಂತ ತಿಳಿಸಿದರು.
ನಾವೆಲ್ಲರು ಒಂದೆ. ಹಿಂದೆ 2018 ರಲ್ಲಿ ಒಂದು ಘಟನೆ ನಡೆದಿತ್ತು. ಆಗ ಎಲ್ಲರಿಗೂ ನಾನು ಕ್ಷಮೆ ಕೇಳಿದ್ದೀನಿ. ಅದಾದ ಮೇಲೆ ಇವತ್ತಿನವೆರೆಗೂ ಬಂದಿರುವುದು ಕೇವಲ ಆರೋಪ. ನನ್ನ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದರು. ನಾನು ತಪ್ಪು ಮಾಡಿದ್ದೇನೆ. ಬಹಳ ಸಲ ತಪ್ಪು ಮಾಡಿದ್ದೇನೆ. ಆದರೆ ಅದರಿಂದ ತಿದ್ದುಕೊಂಡಿದ್ದೇನೆ. ಇನ್ನು ಮುಂದೆ ಯುವ ಕಾಂಗ್ರೆಸ್ ನನ್ನ ಜೊತೆ ಇರುತ್ತೆ ಅಂತ ಮೊಹ್ಮದ್ ನಲಪಾಡ್ ಹೇಳಿದರು.
ಇದನ್ನೂ ಓದಿ
‘ಕನ್ನಡತಿ’ ನಟಿ ರಂಜನಿ ರಾಘವನ್ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ
ಕಂಡವರ ಕಾರು ಅಡ ಇಟ್ಟ ಹಣ ಪಡೆಯುತ್ತಿದ್ದ ಖದೀಮರು; ಹುಬ್ಬಳ್ಳಿ ಪೊಲೀಸರಿಂದ 7 ಜನರ ಗ್ಯಾಂಗ್ ಅರೆಸ್ಟ್
Published On - 11:59 am, Mon, 31 January 22