ಕಂಡವರ ಕಾರು ಅಡ ಇಟ್ಟ ಹಣ ಪಡೆಯುತ್ತಿದ್ದ ಖದೀಮರು; ಹುಬ್ಬಳ್ಳಿ ಪೊಲೀಸರಿಂದ 7 ಜನರ ಗ್ಯಾಂಗ್ ಅರೆಸ್ಟ್
ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಐಶಾರಾಮಿ ಕಾರ್‌ಗಳನ್ನು ಮಂಗ ಮಾಯ ಮಾಡುತ್ತಿದ್ದ 7 ಜನರ ಗ್ಯಾಂಗ್ ಸೆರೆ ಹಿಡಿದು ಕಾರ್‌ಗಳನ್ನ ವಶಕ್ಕೆ ಪಡೆದಿದ್ದಾರೆ. 12 ವಿವಿಧ ಕಂಪನಿಗಳ ಕಾರು, ಒಂದು ಬೈಕ್ ಹಾಗೂ 2ಲಕ್ಷ ನಗದು ಸೇರಿ ಒಟ್ಟು 50 ಲಕ್ಷ ಮೌಲ್ಯದ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ: ಕಡಿಮೆ ಬೆಲೆಗೆ ಕಾರ್‌ಗಳನ್ನ ಅಡ ಇಡ್ತಿದ್ದ ಅವರು, ಬಳಿಕ ಆ ಕಡೆ ಸುಳಿಸುತ್ತಲೇ ಇರ್ಲಿಲ್ಲ. ಇತ್ತ ಕಾರ್ ಅಡ ಇಟ್ಕೊಂಡು ದುಡ್ಡು ಕೊಟ್ಟವರು ಕೂಡಾ ಖುಷಿಯಾಗಿ ಇರ್ತಿದ್ರು. ಆದ್ರೆ ಕಾರ್‌ಗಳನ್ನ ಅಡ ಇಡ್ತಿದ್ದ ಆ ಗ್ಯಾಂಗ್‌ನ ಅಸಲಿಯತ್ತು ಕೊನೆಗೂ ಬಯಲಾಗಿದೆ. ಹುಬ್ಬಳ್ಳಿ ಪೊಲೀಸರು ದೊಡ್ಡ ಬೇಟೆಯನ್ನೇ ಆಡಿದ್ದಾರೆ. ಕಾರ್ ಅಡ ಇಟ್ಟು ದುಡ್ಡು ಪಡೆಯುತ್ತಿದ್ದ ಗ್ಯಾಂಗ್‌ವೊಂದರ ಅಸಲಿಯತ್ತು ಬಯಲು ಮಾಡಿದ್ದಾರೆ. ಖದೀಮರ ಹೆಡೆಮುರಿ ಕಟ್ಟಿದ್ದಾರೆ. ಕಾರ್‌ಗಳನ್ನ ಕದಿಯದೇ ನಯವಾಗಿ ಎಗರಿಸುತ್ತಿದ್ದ ವಂಚಕರ ಟೀಂ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಐಶಾರಾಮಿ ಕಾರ್‌ಗಳನ್ನು ಮಂಗ ಮಾಯ ಮಾಡುತ್ತಿದ್ದ 7 ಜನರ ಗ್ಯಾಂಗ್ ಸೆರೆ ಹಿಡಿದು ಕಾರ್‌ಗಳನ್ನ ವಶಕ್ಕೆ ಪಡೆದಿದ್ದಾರೆ. 12 ವಿವಿಧ ಕಂಪನಿಗಳ ಕಾರು, ಒಂದು ಬೈಕ್ ಹಾಗೂ 2ಲಕ್ಷ ನಗದು ಸೇರಿ ಒಟ್ಟು 50 ಲಕ್ಷ ಮೌಲ್ಯದ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಅಷ್ಟಕ್ಕೂ ಖದೀಮರು ಕಾರ್‌ಗಳನ್ನ ಎಗರಿಸುತ್ತಿದ್ದ ರೀತಿಯೇ ರೋಚಕವಾಗಿದೆ. ರಾಜ್ಯದ ಹಲವು ನಗರಗಳಿಗೆ ಎಂಟ್ರಿಯಾಗ್ತಿದ್ದ ಖದೀಮರು ಅಲ್ಲಿ ಕಾರ್‌ಗಳನ್ನ ಬಾಡಿಗೆಗೆ ಪಡೆಯುತ್ತಿದ್ರು. ಅದ್ರಂತೆ ಮಂಗಳೂರಿನಲ್ಲಿ ಬಾಡಿಗೆಗೆ ಅಂತಾ ಪ್ರೀಮಿಯಂ ಕಾರುಗಳನ್ನು ಪಡೆದು ಹುಬ್ಬಳ್ಳಿ ಕಡೆಗೆ ಬರುತ್ತಿದ್ರು. ಇಲ್ಲಿಗೆ ಬಂದ ನಂತರ ಆ ಎಲ್ಲಾ ಕಾರುಗಳಿಗೆ ನಕಲಿ ಡಾಕ್ಯುಮೆಂಟ್ ತಯಾರು ಮಾಡುತಿದ್ದ ಗ್ಯಾಂಗ್, ಬಳಿಕ ಆ ಕಾರುಗಳನ್ನು ಕಡಿಮೆ ಹಣಕ್ಕೆ ಅಡವಿಟ್ಟು ಹಣ ಪಡೆಯುತ್ತಿದ್ದರು. ಹೀಗೆ ಕಂಡವರ ಕಾರ್‌ಗಳನ್ನ ಅಡ ಇಟ್ಟು ಹಣ ಪಡೆಯುತ್ತಿದ್ದ ವಂಚಕರು ಬಳಿಕ ಅತ್ತ ಕಡೆ ಸುಳಿಯುತ್ತಲೇ ಇರ್ಲಿಲ್ಲ. ಹೀಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಌಕ್ಟೀವ್ ಆಗಿದ್ದ ಗ್ಯಾಂಗ್ ಕೊನೆಗೂ ಖಾಕಿ ಬಲೆಗೆ ಬಿದ್ದಿದೆ.
ಖದೀಮರ ಗ್ಯಾಂಗ್ ನಾಲ್ವರನ್ನ ಅರೆಸ್ಟ್ ಮಾಡಿದ ಪೊಲೀಸರು ಅವರ ಮಾಹಿತಿ ಆಧರಿಸಿ ಮಂಗಳೂರು ಮತ್ತು ಬೆಂಗಳೂರಿಗೆ ಹೋಗಿ ಉಳಿದ ಮೂವರನ್ನ ಬಂಧಿಸಿದ್ದಾರೆ. ಆರೋಪಿಗಳನ್ನ ಬಂಧಿಸಿದ ಪೊಲೀಸರಿಗೆ ಆಯುಕ್ತರು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಅದೇನೇ ಇರ್ಲಿ, ಕಡಿಮೆ ಬೆಲೆಗೆ ಕಾರ್ ಅಡ ಇಡುತ್ತಿದ್ದಾರೆ ಅಂತಾ ನಂಬಿ ಹಣ ಕೊಡೋಕು ಮುನ್ನ ಎಚ್ಚರವಾಗಿರಿ.
ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ
ಇದನ್ನೂ ಓದಿ: 9ನೇ ತರಗತಿ ಹುಡುಗನಿಂದ ಹೋಯ್ತು 4 ಮಹಿಳೆಯರ ಪ್ರಾಣ; ಕಣ್ಣುಜ್ಜಲು ಹೋಗಿ ಕಾರು ಫೂಟ್ಪಾತ್ ಹತ್ತಿಸಿದ ಹುಡುಗ