ಹುಬ್ಬಳ್ಳಿ: 21 ವರ್ಷಗಳ ಬಳಿಕ ಕಳ್ಳತನ ಪ್ರಕರಣಕ್ಕೆ ತೆರೆ; ತಲೆಮರೆಸಿಕೊಂಡಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು

21 ವರ್ಷಗಳ ಹಿಂದೆ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಹರ ಠಾಣೆ ಇನ್ಸ್​ಪೆಕ್ಟರ್​ ಆನಂದ ಒಣಕುದರಿ ನೇತೃತ್ವದ ತಂಡ ಗೋವಾದಲ್ಲಿ ಬಂಧಿಸಿದೆ.

ಹುಬ್ಬಳ್ಳಿ: 21 ವರ್ಷಗಳ ಬಳಿಕ ಕಳ್ಳತನ ಪ್ರಕರಣಕ್ಕೆ ತೆರೆ; ತಲೆಮರೆಸಿಕೊಂಡಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು
ಸಾಂಕೇತಿಕ ಚಿತ್ರ

ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ (arrest) ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶಪೇಟೆಯ ಅಬ್ದುಲ್‌ ಬಂಧಿತ ಆರೋಪಿ. 21 ವರ್ಷಗಳ ಹಿಂದೆ ಕಳ್ಳತನ (Theft) ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಹರ ಠಾಣೆ ಇನ್ಸ್​ಪೆಕ್ಟರ್​ ಆನಂದ ಒಣಕುದರಿ ನೇತೃತ್ವದ ತಂಡ ಗೋವಾದಲ್ಲಿ ಬಂಧಿಸಿದೆ. ಹಳೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆದರೆ ನಿನ್ನೆ (ನವೆಂಬರ್ 21) ಕಳ್ಳತನ ಪ್ರಕರಣಕ್ಕೆ ತೆರೆಬಿದ್ದಿದ್ದು, ಆರೋಪಿ ಅಬ್ದುಲ್​ನನ್ನು ಪೊಲೀಸರು ನಿನ್ನೆ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತುಮಕೂರು: ಮಲ್ಲಸಂದ್ರ ಗ್ರಾಮದ 4 ಅಂಗಡಿಗಳಲ್ಲಿ ಸರಣಿ ಕಳ್ಳತನ
ತುಮಕೂರು ಗ್ರಾಮಾಂತರ ಭಾಗದ ಮಲ್ಲಸಂದ್ರ ಗ್ರಾಮದ 4 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬೇಕರಿ, ಹಾರ್ಡ್​ವೇರ್​ ಮತ್ತು ಟೀ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. 40 ಸಾವಿರ ಮೌಲ್ಯದ ದಿನಸಿ, 5 ಸಾವಿರ ರೂ. ನಗದು ಕಳವು ಮಾಡಲಾಗಿದ್ದು, ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಇಬ್ಬರು ಹೆಣ್ಣು ಮಕ್ಕಳ ಮುಂದೆಯೇ ತಂದೆಯ ಭೀಕರ ಹತ್ಯೆ
ಇಬ್ಬರು ಹೆಣ್ಣುಮಕ್ಕಳ ಮುಂದೆಯೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಬಳಿ ನಡೆದಿದೆ. ದೀಪಕ್ ಕುಮಾರ್ ಸಿಂಗ್(46) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹತ್ಯೆಯ ಬಳಿಕ ದುಷ್ಕರ್ಮಿಗಳು ಮಕ್ಕಳಿಗೆ ಬೆದರಿಕೆ ಒಡ್ಡಿದ್ದಾರೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಂಬಂಧ ಪ್ರಕರಣ ದಾಖಲಾಗಿದೆ.

ತಡರಾತ್ರಿ 1:30 ರ ಸುಮಾರಿಗೆ ಮನೆಗೆ ನುಗ್ಗಿ ಲಾಂಗ್​ನಿಂದ ಹತ್ಯೆ ಮಾಡಲಾಗಿದೆ. ಮೂಲತಃ ಬಿಹಾರದವನಾದ ಮೃತ ದೀಪಕ್ ಕುಮಾರ್ ಸಿಂಗ್ ಜಿಕೆವಿಕೆನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಮೃತನ ಪತ್ನಿ ಇತ್ತೀಚೆಗೆ ಬಿಹಾರದ ತವರು ಮನೆಗೆ ತೆರಳಿದ್ದರು. ಇಬ್ಬರು ಹೆಣ್ಣು ಮಕ್ಕಳ ಜೊತೆ ಮೃತ ದೀಪಕ್ ಕುಮಾರ್ ಸಿಂಗ್ ವಾಸವಿದ್ದರು. ಆದರೆ ನಿನ್ನೆ ತಡರಾತ್ರಿ ಏಕಾಏಕಿ ಮನೆಗೆ ನಾಲ್ವರು ಹಂತಕರು ನುಗ್ಗಿದ್ದು, ತಲೆಗೆ ಮಚ್ಚು ಬೀಸಿ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ:
ವಿಜಯಪುರದಲ್ಲಿ ಎಟಿಎಂಗೆ ಹಾನಿ ಮಾಡದೇ 16 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ಕಳ್ಳರು! ಬ್ಯಾಂಕ್ ಸಿಬ್ಬಂದಿ, ಕಾವಲುಗಾರನಿಂದಲೇ ಕಳ್ಳತನ ಶಂಕೆ

ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಭರ್ಜರಿ ಬೇಟೆ; 2021ನೇ ಸಾಲಿನಲ್ಲಿ 518 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

Click on your DTH Provider to Add TV9 Kannada