ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಭರ್ಜರಿ ಬೇಟೆ; 2021ನೇ ಸಾಲಿನಲ್ಲಿ 518 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ಪಟ್ಟಣದಲ್ಲಿ ಕಿರಾತಕರು ಯುವಕನ ಮರ್ಮಾಂಗ ಕತ್ತರಿಸಿ ದುಷ್ಕೃತ್ಯ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾದ ಮೈಬೂಬಸಾಬ್ ಮರ್ಮಾಂಗಕ್ಕೆ ಮೂವರು ಕಿರಾತಕರು ಕತ್ತರಿ ಹಾಕಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಭರ್ಜರಿ ಬೇಟೆ; 2021ನೇ ಸಾಲಿನಲ್ಲಿ 518 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಭರ್ಜರಿ ಬೇಟೆ; 2021ನೇ ಸಾಲಿನಲ್ಲಿ 518 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
Follow us
TV9 Web
| Updated By: ಆಯೇಷಾ ಬಾನು

Updated on: Nov 18, 2021 | 9:28 PM

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸರು 2021ನೇ ಸಾಲಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 2021ನೇ ಸಾಲಿನಲ್ಲಿ 6 ದರೋಡೆ, 54 ಸುಲಿಗೆ ಪ್ರಕರಣ, 151 ಕಳ್ಳತನ ಸೇರಿದಂತೆ ಒಟ್ಟು 518 ಕಳ್ಳತನ ಪ್ರಕರಣಗಳನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.

₹1,22,10,959 ಮೌಲ್ಯದ 2 ಕೆಜಿ 879 ಗ್ರಾಂ ಚಿನ್ನ. 9,52,549 ರೂ. ಮೌಲ್ಯದ 14 ಕೆಜಿ 394 ಗ್ರಾಂ ಬೆಳ್ಳಿ. ಅಂದಾಜು ₹55,88,949 ಮೌಲ್ಯದ 73 ವಾಹನಗಳು, 3,00,925 ರೂ. ಮೌಲ್ಯದ 27 ಮೊಬೈಲ್ ಫೋನ್, 35,40,102 ನಗದು, 15,16,400 ರೂ ಮೌಲ್ಯದ 39 ಕ್ವಿಂಟಾಲ್ ಅಡಕೆ, 4,38,796 ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, 60,29,036 ಇತರೆ ಸಾಮಾಗ್ರಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 3 ಕೋಟಿ 3 ಲಕ್ಷದ 59 ಸಾವಿರದ 716 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಕಾರಿನ ಗಾಜು ಒಡೆದು ಕಳ್ಳತನ ಇನ್ನು ಮತ್ತೊಂದೆಡೆ ಜಮೀನು ಖರೀದಿಗೆ ತಂದಿದ್ದ ಲಕ್ಷಾಂತರ ಹಣ ಕಳ್ಳತನವಾಗಿದೆ. ಕಾರಿನ ಗಾಜು ಒಡೆದು 9 ಲಕ್ಷ 50 ಸಾವಿರ ರೂ. ಕಳ್ಳತನ ಮಾಡಿರುವ ಘಟನೆ ಚಾಮರಾಜನಗರದ ಡಿಸಿ ಕಚೇರಿಯ ಬಳಿ ನಡೆದಿದೆ. ಅಚ್ಚಟ್ಟಿಪುರ ಗ್ರಾಮದ ನಿವಾಸಿ ನಾಗಪ್ಪ ಎಂಬುವವರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ನಾಗಪ್ಪ ಚಾಮರಾಜನಗರ ತಾಲೂಕು ಕಛೇರಿಯಿಂದ ಊಟಕ್ಕಾಗಿ ಜಿಲ್ಲಾಡಳಿತ ಭವನಕ್ಕೆ ಬಂದಿದ್ದರು. ಈ ವೇಳೆ ಖದೀಮರು ಕಾರಿನ ಗಾಜು ಒಡೆದು ಕಳ್ಳತನ ಮಾಡಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯುವಕನ ಮರ್ಮಾಂಗ ಕತ್ತರಿಸಿದ ದುಷ್ಕರ್ಮಿಗಳು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ಪಟ್ಟಣದಲ್ಲಿ ಕಿರಾತಕರು ಯುವಕನ ಮರ್ಮಾಂಗ ಕತ್ತರಿಸಿ ದುಷ್ಕೃತ್ಯ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾದ ಮೈಬೂಬಸಾಬ್ ಮರ್ಮಾಂಗಕ್ಕೆ ಮೂವರು ಕಿರಾತಕರು ಕತ್ತರಿ ಹಾಕಿದ್ದಾರೆ.

ತಡವಲಗಾ ಗ್ರಾಮದ ಮುನ್ನಾ ಪಟೇಲ್, ಹಮೀದ್ ಮುಲ್ಲಾ ಹಾಗೂ ಮುನ್ನಾ ಸಂಬಂಧಿಕ ದಾದು ಎಂಬುವವರಿಂದ ಕೃತ್ಯ ನಡೆದಿರುವ ಆರೋಪ ಕೇಳಿ ಬಂದಿದೆ. ಮರ್ಮಾಂಗ ಕತ್ತರಿಸಿ ತೀವ್ರ ಹಲ್ಲೆ ಮಾಡಿ ಮೂವರು ಕಿರಾತಕರು ಪರಾರಿಯಾಗಿದ್ದಾರೆ. ಅಕ್ಕಲಕೋಟೆಯ ಆಸ್ಪತ್ರೆಯಲ್ಲಿ ಮೈಬೂಬಸಾಬ್ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಕಲಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೊಸ ದಾಖಲೆ ಬರೆದ ‘ಜೈ ಭೀಮ್’​; ಹಾಲಿವುಡ್​ ಚಿತ್ರವನ್ನೂ ಹಿಂದಿಕ್ಕಿದ ಸೂರ್ಯ ನಟನೆಯ ಸಿನಿಮಾ

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು