AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೂವರೆ ವರ್ಷ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ದಾಖಲಾದ ಈ ಬಾಲಕನ ಸಾಧನೆ ಸಮೃದ್ಧ

ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಜ್ಞಾನ ಭಂಡಾರವನ್ನು ಹೊಂದಿರುವ ಈತನ ಸಾಧನೆ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಹದಿನೈದು ಬಗೆಯ ಯೋಗಾಸನವನ್ನು ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ತಮ್ಮ ಜವಾಬ್ದಾರಿ ನಿರ್ವಹಣೆ, ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಕಾಳಜಿ ಸ್ವಲ್ಪ ಕಡಿಮೆಯಾಗುತ್ತಿದೆ.

ಎರಡೂವರೆ ವರ್ಷ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ದಾಖಲಾದ ಈ ಬಾಲಕನ ಸಾಧನೆ ಸಮೃದ್ಧ
ಎರಡೂವರೆ ವರ್ಷ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ದಾಖಲಾದ ಈ ಬಾಲಕನ ಸಾಧನೆ ಸಮೃದ್ಧ
Follow us
TV9 Web
| Updated By: ಆಯೇಷಾ ಬಾನು

Updated on:Jan 31, 2022 | 11:10 AM

ಹುಬ್ಬಳ್ಳಿ: ಆತ ಇನ್ನೂ ಅಂಗಳದಲ್ಲಿ ಆಡುವ ಚಿಕ್ಕ ಬಾಲಕ. ಆದ್ರೆ ಆತನ ಕೀರ್ತಿ ಮಾತ್ರ ಆಕಾಶದೆತ್ತರಕ್ಕೆ ಬೆಳೆದಿದೆ. ಅಪಾರ ಜ್ಞಾನದಿಂದ ದೇಶವನ್ನೇ ತನ್ನತ್ತ ನೋಡುವಂತೆ ಮಾಡಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತಿಗೆ ಸ್ಪೂರ್ತಿ ಆ ಬಾಲಕ. ವಾಣಿಜ್ಯ ನಗರಿ ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದ ಸಮೃದ್ಧ ಶ್ರೀಕಾಂತ್ ಶೆಟ್ಟಿ ಎಂಬುವ ಬಾಲಕನೇ ತನ್ನ ಜ್ಞಾನ ಭಂಡಾರವನ್ನು ಪರಿಚಯಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾನೆ. ಕೇವಲ ಎರಡೂವರೆ ವರ್ಷದ ಈತ ಹದಿನೈದು ತರಹದ ಯೋಗಾಸನ ಮಾಡುತ್ತಾನೆ. ಅಲ್ಲದೇ ಗ್ರಹಗಳನ್ನು ಗುರುತಿಸಿ ಅವುಗಳ ಪರಿಚಯವನ್ನು ಮಾಡುತ್ತಾನೆ. ಅಲ್ಲದೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಪಟ ಪಟ ಅಂತ ಉತ್ತರ ಕೊಡುವ ಈತ ನಮ್ಮ ರಾಜ್ಯದ ನದಿಗಳ ಹೆಸರನ್ನು ಸರಾಗವಾಗಿ ನೀರು ಕುಡಿದಷ್ಟೇ ಸುಲಭವಾಗಿ ಹೇಳುತ್ತಾನೆ. ವಯಸ್ಸಿಗೂ ಮೀರಿದ ಇತನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ ಬಂದಿದೆ. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಎಂಬುವಂತೆ ಮಗನ ಈ ಸಾಧನೆಗೆ ತಾಯಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಜ್ಞಾನ ಭಂಡಾರವನ್ನು ಹೊಂದಿರುವ ಈತನ ಸಾಧನೆ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಹದಿನೈದು ಬಗೆಯ ಯೋಗಾಸನವನ್ನು ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ತಮ್ಮ ಜವಾಬ್ದಾರಿ ನಿರ್ವಹಣೆ, ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಕಾಳಜಿ ಸ್ವಲ್ಪ ಕಡಿಮೆಯಾಗುತ್ತಿದೆ. ಅದರಂತೆ ಮಕ್ಕಳು ಮೊಬೈಲ್ ಬಳಕೆಯಿಂದ ತಮ್ಮಲ್ಲಿರುವ ಕೌಶಲ್ಯವನ್ನು ಮರೆತು ಹೋಗುತ್ತಿದ್ದಾರೆ. ಆದರ ಸಮೃದ್ಧ ಮಾತ್ರ ಮೊಬೈಲನ್ನು ಮನರಂಜನೆಗಾಗಿ ಬಳಕೆ ಮಾಡದೇ ಮೊಬೈಲ್ ನಲ್ಲಿ ಸಾಕಷ್ಟು ಜ್ಞಾನವನ್ನು ಪಡೆದುಕೊಂಡು ದೇಶದ ಸಾಧಕ ಬಾಲಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಚ್ಚುತ್ತಿದ್ದಾರೆ. ಮಗನ ಸಾಧನೆಗೆ ಬೆನ್ನೆಲುಬಾಗಿರುವ ಪಾಲಕರಿಗೆ ಮಗನ ಸಾಧನೆ ಹರ್ಷವನ್ನು ಇಮ್ಮಡಿಗೊಳಿಸಿದೆ.

ಹುಬ್ಬಳ್ಳಿ ಬಾಲಕನ ಅಪಾರವಾದ ಜ್ಞಾನವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರವನ್ನು ನೀಡಿರುವುದು ನಿಜಕ್ಕೂ ವಿಶೇಷವಾಗಿದೆ. ನಮ್ಮ ಹುಬ್ಬಳ್ಳಿಯ ಸಮೃದ್ಧ ಶೆಟ್ಟಿಯ ಭವಿಷ್ಯ ಮತ್ತಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಅಲ್ಲದೇ ಗಿನ್ನಿಸ್ ದಾಖಲೆಯಂತ ಹಲವಾರು ಪುರಸ್ಕಾರಗಳು ಲಭಿಸಲಿ ಎಂಬುವುದು ನಮ್ಮ ಆಶಯ.

ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ

Two years old boy makes india book of records 1

ಸಮೃದ್ಧ ಶ್ರೀಕಾಂತ್ ಶೆಟ್ಟಿ

Two years old boy makes india book of records 2

ಸಮೃದ್ಧ ಶ್ರೀಕಾಂತ್ ಶೆಟ್ಟಿ

ಇದನ್ನೂ ಓದಿ: ರಾಯಚೂರು ಮಕ್ಕಳ ‘ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​​’ ಸಾಧನೆ; ಅಪ್ಪು ಸಮಾಧಿಗೆ ಪ್ರಮಾಣಪತ್ರ ಅರ್ಪಣೆ

Published On - 11:08 am, Mon, 31 January 22

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್