ಬೆಂಗಳೂರು, ಆ.30: ಇತ್ತೀಚೆಗೆ ಕೆಂಪು ಸುಂದರಿ ಟೊಮೆಟೊ(Tomato) ಬೆಲೆ ದಿಢೀರನೆ ಏರಿಕೆ ಕಂಡು ಗ್ರಾಹಕರಿಗೆ ವಿಪರೀತ ತಲೆ ನೋವಾಗಿತ್ತು. ಬಳಿಕ ಅಕ್ಕಿ, ಹಾಲು, ಮೊಸರು, ಈರುಳ್ಳಿ ಸೇರಿದಂತೆ ದೈನಂದಿನ ಜೀವನಕ್ಕೆ ಬೇಕಾದ ವಸ್ತುಗಳ ಬೆಲೆ ಏರಿಗೆ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿತ್ತು. ಇದರ ಜೊತೆಗೆ ಈಗ ಬೇಳೆಕಾಳುಗಳ(Pulses) ದರ ಕೂಡ ಗಗನಕ್ಕೇರಿದ್ದು ಸೆಪ್ಟೆಂಬರ್ ತಿಂಗಳಲ್ಲಿ ದ್ವಿಶತಕ ಬಾರಿಸಲಿದೆ ಎನ್ನಲಾಗುತ್ತಿದೆ. ಮಳೆ ಕೊರತೆ, ಸಪ್ಲೈ ಇಲ್ಲದ ಕಾರಣ ಬೇಳೆಕಾಳುಗಳ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ.
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಗುಜರಾತ್ನಿಂದ ರಾಜ್ಯಕ್ಕೆ ಸರಿಯಾಗಿ ಬೇಳೆಕಾಳುಗಳು ಸಪ್ಲೈ ಆಗುತ್ತಿಲ್ಲ. ಇನ್ನು ಸಪ್ಲೈ ಆಗಿರುವ ಕಾಳುಗಳನ್ನು ದೊಡ್ಡ ದೊಡ್ಡ ಆನ್ಲೈನ್ ಟ್ರೇಡಿಂಗ್ ಕಂಪನಿಗಳು ಸಾವಿರಾರು ಟನ್ಗಳಷ್ಟು ಗೋಡೌನ್ಗಳಲ್ಲಿ ಅಕ್ರಮವಾಗಿ ಸ್ಟಾಕ್ ಇಟ್ಟಿರುವ ಪರಿಣಾಮ ಬೇಳೆಕಾಳುಗಳ ಮೇಲೆ ವಿಪರೀತವಾಗಿ ಏರಿಕೆ ಕಾಣುತ್ತಿದೆ. ಸೆಪ್ಟೆಂಬರ್ ವೇಳೆಗೆ ಬೇಳೆಕಾಳುಗಳ ದರ 200 ರೂಪಾಯಿ ಗಡಿದಾಟಲಿದೆ. ನಮ್ಮ ದೇಶದಿಂದ ಬೇರೆ ಬೇರೆ ದೇಶಗಳಿಗೆ ಹೆಚ್ಚಾಗಿ ಬೇಳೆಕಾಳುಗಳು ರಫ್ತಾಗುತ್ತಿರುವ ಕಾರಣ ಬೇಳೆಕಾಳುಗಳು ಅಗತ್ಯಕ್ಕೆ ಬೇಕಾಗುವಷ್ಟು ಇಲ್ಲ. ಹಿಂದಿನ ವಾರ ಕೆಜಿ 160 ರೂಪಾಯಿ ಇದ್ದ ತೊಗರಿ ಬೇಳೆ ಈ ವಾರ ಕೆಜಿ 170 ರೂಪಾಯಿ ಆಗಿದೆ. ಹೋಲ್ ಸೇಲ್ ನಲ್ಲಿ ರೀಟೆಲ್ ದರ- ಕೆಜಿ 180 ರುಪಾಯಿ ಆಗಿದ್ದು ಸೆಪ್ಟೆಂಬರ್ನಲ್ಲಿ 200 ರೂಪಾಯಿ ಆಗಲಿದೆ.
ಇದನ್ನೂ ಓದಿ: ಹಳೇ ಚಪ್ಪಲಿ ಬಿಟ್ಟು ದುಬಾರಿ ಬೆಲೆ ಚಪ್ಪಲಿ ಕಳ್ಳತನ, ವಿಡಿಯೋನಲ್ಲಿ ನೋಡಿ ಖದೀಮನ ಐಡಿಯಾ
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ