ಎಸಿ ಬಸ್ನಲ್ಲಿ ಸೊಳ್ಳೆಗಳ ಕಾಟ: ಮಸ್ಕಿಟೋಗಳಿಂದ ಮುಕ್ತಿ ಕೊಡಿಸಿ ಅಂತ BMTCಗೆ ಟ್ಯಾಗ್ ಮಾಡಿ ಟ್ವೀಟ್
ಸೊಳ್ಳೆಗಳು ಬಿಎಂಟಿಸಿ ಎಸಿ ಬಸ್ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿವೆ. ಹೌದು ಬಿಎಂಟಿಸಿ ಹವಾನಿಯಂತ್ರಿತ ಬಸ್ನಲ್ಲಿ ಸೊಳ್ಳೆ ಕಾಟವಿದೆ ಎಂದು ಸೋಷಿಯಲ್ ಕಾಪ್ ಎಂಬವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ (Mosquito) ಕಾಟ ಜಾಸ್ತಿಯಾಗಿದೆ. ಅದರಲ್ಲಂತು ನಗರ ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳು ಮತ್ತು ವಿಶೇಷವಾಗಿ ಹೊರವರ್ತುಲ ರಸ್ತೆಯ ಹೊರವಲಯದಲ್ಲಿರುವ ಪ್ರಮುಖ ಪ್ರದೇಶಗಳ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾದ ಹಿನ್ನೆಲೆ ಮಲೇರಿಯಾ, ಡೆಂಗ್ಯೂ (Dengue) ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳು ಹರಡುವ ಭಯ ನಗರವಾಸಿಗಳಲ್ಲಿದೆ. ಇದಗೀಗ ಸೊಳ್ಳೆಗಳು ಬಿಎಂಟಿಸಿ (BMTC) ಎಸಿ ಬಸ್ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿವೆ. ಹೌದು ಬಿಎಂಟಿಸಿ ಹವಾನಿಯಂತ್ರಿತ ಬಸ್ನಲ್ಲಿ ಸೊಳ್ಳೆ ಕಾಟವಿದೆ ಎಂದು ಸೋಷಿಯಲ್ ಕಾಪ್ ಎಂಬವರು ಟ್ವೀಟ್ ಮಾಡಿದ್ದಾರೆ.
ಸೋಷಿಯಲ್ ಕಾಪ್ ಎಂಬುವರು ತಮ್ಮ ಬೆರಳ ಮೇಲೆ ಕೂತ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್ ಫೋಟೋ ಟ್ವೀಟರ್ನಲ್ಲಿ ಹಂಚಿಕೊಂಡಿದ್ದು “ಬಿಎಂಟಿಸಿ ಎಸಿ ಬಸ್ನಲ್ಲಿ ಸೊಳ್ಳೆಗಳ ಕಾಟ. ಕಾಂಗ್ರೆಸ್ ಸರ್ಕಾರ ಬಿಎಂಟಿಸಿ ಎಸಿ ಬಸ್ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ?” ಎಂದು ಪ್ರಶ್ನಿಸಿದ್ದಾರೆ.
Mosquitoes make @BMTC_BENGALURU AC bus travel miserable.
A lot of mosquitoes in the bus. Did the Congress government announce free travel for mosquitos in BMTC AC buses?
Bus no. – KA01F8840#bmtc #Bengaluru #vajra #ACBus pic.twitter.com/No8obaUeVp
— SocialCop (@social__cop) July 7, 2023
ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಸೊಳ್ಳೆಗಳಿಗೆ ಸಾಮಾನ್ಯ ಬಸ್ಗಳಲ್ಲಿ ಜಾಗವಿಲ್ಲಿದೆ ಎಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿವೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಕುಹಕವಾಡಿದ್ದಾರೆ.
Mosquitoes make @BMTC_BENGALURU AC bus travel miserable.
A lot of mosquitoes in the bus. Did the Congress government announce free travel for mosquitos in BMTC AC buses?
Bus no. – KA01F8840#bmtc #Bengaluru #vajra #ACBus pic.twitter.com/No8obaUeVp
— SocialCop (@social__cop) July 7, 2023
ಇದನ್ನೂ ಓದಿ: ಡೆಂಗ್ಯೂ: ಈ ಸರಳ ಅಡುಗೆ ಪದಾರ್ಥವು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ
ಮೊತ್ತಬ್ಬರು ಸಾಮಾನ್ಯ ಬಸ್ನಲ್ಲಿ ಸೀಟ್ಗಾಗಿ ಜನರು ಪರದಾಡುತ್ತಿದ್ದರೇ ನೀವು ಸೊಳ್ಳೆಗಳಿಂದ ಮುಕ್ತ ಸವಾರಿಯನ್ನು ಬಯಸುತ್ತೀದ್ದೀರಿ ಎಂದು ಶ್ರೀಕಾಂತ ಗೌಡ ಎಂಬ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
BMTC2022008408 is the complaint docket number.
— BMTC (@BMTC_BENGALURU) July 7, 2023
ಇನ್ನು ಬಿಎಂಟಿಸಿ ಕಂಪ್ಲೇಂಟ್ ರಿಸಿವ್ಡ್ ಅತೀ ಶೀಘ್ರದಲ್ಲಿ ಪರಿಹಾರ ಕೊಡುತ್ತೇವೆ ಅಂತ ಪ್ರತಿಕ್ರಿಯಿಸಿದೆ.
Published On - 11:31 am, Wed, 19 July 23