ಬೆಂಗಳೂರಿನಲ್ಲಿ ಗಾಳಿ-ಮಳೆಗೆ ಮರದ ಕೊಂಬೆ ಬಿದ್ದು ತಾಯಿ, ಮಗುವಿಗೆ ಗಂಭೀರ ಗಾಯ

ಬೆಂಗಳೂರಲ್ಲಿ ಸೋಮವಾರ ರಾತ್ರಿ ಸುರಿದ ಗಾಳಿ-ಮಳೆಗೆ, ವಿಲ್ಸನ್ ಗಾರ್ಡನ್​​ನ ಏಳನೇ ಕ್ರಾಸ್​​ನ ಫುಟ್​ಪಾತ್ ಮೇಲೆ ಹೊಗುತಿದ್ದ ತಾಯಿ ಮತ್ತು ಮಗುವಿನ ಮೇಲೆ ಮರದ ಕೊಂಬೆ ಬಿದ್ದಿದ್ದೆ.

ಬೆಂಗಳೂರಿನಲ್ಲಿ ಗಾಳಿ-ಮಳೆಗೆ ಮರದ ಕೊಂಬೆ ಬಿದ್ದು ತಾಯಿ, ಮಗುವಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Sep 26, 2023 | 10:47 AM

ಬೆಂಗಳೂರು ಸೆ.26: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ (Rain), ವಿಲ್ಸನ್ ಗಾರ್ಡನ್​​ನ ಏಳನೇ ಕ್ರಾಸ್​​ನ ಫುಟ್​ಪಾತ್ ಮೇಲೆ ಹೊಗುತಿದ್ದ ತಾಯಿ ಮತ್ತು ಮಗುವಿನ ಮೇಲೆ ಮರದ (Tree) ಕೊಂಬೆ ಜೊತೆಗೆ ವಿದ್ಯುತ್​ ಕಂಬ ಬಿದ್ದ ಪರಿಣಾಮ ತಾಯಿ ಮತ್ತು ಮಗು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ (Wilson Garden) ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಹೇಮಾವತಿ ಮತ್ತು ಐದು ವರ್ಷದ ಮಗು ತಮ್ಮ ಮನೆಯ ಮುಂದಿನ ಪುಟ್​ಪಾತ್​ ಮೇಲೆ ನಡೆದು ಹೋಗುತ್ತಿದ್ದರು. ಈ ವೇಳೆ ಗಾಳಿಗೆ ದಿಢೀರನೆ ಬೃಹತ್ ಗಾತ್ರದ ಮರದ ಕೊಂಬೆ ಹೇಮಾವತಿ ಅವರ ತಲೆ ಮೇಲೆ ಬಿದ್ದಿದೆ. ಘಟನೆಯಲ್ಲಿ ಮಗುವಿಗೂ ಗಾಯವಾಗಿದೆ. ತಾಯಿ ಹೇಮಾವತಿ ಅವರು ಮಗುವಿಗೆ ಮನೆ ಬಳಿ ಊಟ ಮಾಡಿಸುತ್ತಾ ಇದ್ದರು. ಈ ವೇಳೆ ಏಕಾಏಕಿ ಬೃಹತ್ ಗಾತ್ರದ ಮರ ಮುರಿದು ಬಿದ್ದಿದೆ. ಅದರ ಜೊತೆಗೆ ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದೆ.

ಮನೆಯಲ್ಲಿ ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ: ಕೌಟುಂಬಿಕ ಕಲಹದಿಂದಾಗಿ ಗೃಹಣಿ ಮನೆಯಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನೆಲಮಂಗಲ ಟೌನ್​ನಲ್ಲಿ ನಡೆದಿದೆ. ಶಶಿಕಲಾ (35) ಮೃತ ಮಹಿಳೆ.
18 ವರ್ಷದ ಹಿಂದೆ ರುದ್ರೇಶ್ ಜೊತೆಯಲ್ಲಿ ಮದುವೆ ಆಗಿತ್ತು. ಮನೆಯಿಂದ ತಂದೆ ಮಕ್ಕಳು ಹೊರ ಹೋಗಿದ್ದ ವೇಳೆ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ.  ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 am, Tue, 26 September 23