ಬೆಂಗಳೂರು ಬಂದ್​ಗೆ ಯಾವ್ಯಾವ ಸಂಘಟನೆಗಳು ಬೆಂಬಲ? ಎಲ್ಲೆಲ್ಲಿಂದ ರ್ಯಾಲಿ? ಪೊಲೀಸ್ ಸೆಕ್ಯೂರಿಟಿ ಹೇಗಿದೆ? ಇಲ್ಲಿದೆ ವಿವರ

Bengaluru Bandh: ಇಂದು ಬೆಂಗಳೂರು ಬಂದ್ ಆಗಲಿದೆ. ಯಾವ್ಯಾವ ಸಂಘಟನೆಗಳು ಬಂದ್‌ ಬೆಂಬಲಿಸಿವೆ. ಎಲ್ಲೆಲ್ಲಿಂದ ರ್ಯಾಲಿ ಪ್ಲ್ಯಾನ್‌ ಮಾಡಿದ್ದಾರೆ? ಯಾರ್ಯಾರು ಎಲ್ಲೆಲ್ಲಿ ಪ್ರತಿಭಟನೆ ಪ್ಲ್ಯಾನ್ ಮಾಡಲಿದ್ದಾರೆ. ಇನ್ನು ನಗರದಲ್ಲಿ ಪೊಲೀಸ್‌ ಸೆಕ್ಯೂರಿಟಿ ಹೇಗಿರಲಿದೆ? ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಬೆಂಗಳೂರು ಬಂದ್​ಗೆ ಯಾವ್ಯಾವ ಸಂಘಟನೆಗಳು ಬೆಂಬಲ? ಎಲ್ಲೆಲ್ಲಿಂದ ರ್ಯಾಲಿ? ಪೊಲೀಸ್ ಸೆಕ್ಯೂರಿಟಿ ಹೇಗಿದೆ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 26, 2023 | 6:56 AM

ಬೆಂಗಳೂರು, (ಸೆಪ್ಟೆಂಬರ್ 26): ಕಾವೇರಿ (Cauvery Water Dispute) ಕಿಚ್ಚು ಕಾವೇರಿದೆ. ರಾಜಧಾನಿ ಬೆಂಗಳೂರು ಇಂದು (ಸೆ.26) ಕಾವೇರಿ ರಣಕಹಳೆಗೆ ಸಾಕ್ಷಿಯಾಗಲಿದೆ. ನೀರು ಉಳಿಸಿಕೊಳ್ಳಲು ಒಕ್ಕೊರಲ ಹೋರಾಟಕ್ಕೆ ಕರೆ ನೀಡಲಾಗಿದ್ದು, ಇವತ್ತು 97ಕ್ಕೂ ಹೆಚ್ಚು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ. ಹೌದು.. ಪಕ್ಕದ ರಾಜ್ಯ ತಮಿಳುನಾಡಿಗೆ ಹರಿಯುತ್ತಿರುವ ನೀರು ಉಳಿಸಿಕೊಳ್ಳಲು ರೈತ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು ಬೀದಿಗಿಳಿಯಲಿದ್ದಾರೆ. ನಾಡಿನಾದ್ಯಂತ ಕಾವೇರಿಗಾಗಿ ಹೋರಾಟ ತೀವ್ರಗೊಂಡಿದ್ದು, ಇಡೀ ಬೆಂಗಳೂರು ಸ್ತಬ್ಧವಾಗಲಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬೆಂಗಳೂರು ಬಂದ್ (Bengaluru Bandh)ಆಗಲಿದೆ. 97ಕ್ಕೂ ಹೆಚ್ಚು ಸಂಘಟನೆಗಳು ಬೆಳಗ್ಗೆ ಟೌನ್​ಹಾಲ್​ನಿಂದ ಫ್ರೀಡಂಪಾರ್ಕ್​ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ.

ಇಂದಿನ ಬಂದ್‌ಗೆ ಖಾಸಗಿ ಶಿಕ್ಷಣ ಒಕ್ಕೂಟ ರೂಪ್ಸಾ ಬೆಂಬಲ ನೀಡಿದೆ. ರೂಪ್ಸಾ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳ ಪೋಷಕರ ಸಂಘಟನೆಗಳು, ಖಾಸಗಿ ಶಾಲಾ ವಾಹನಗಳ ಮಾಲೀಕರು ಕೂಡಾ ಬಂದ್​ಗೆ ಬೆಂಬಲ ಘೋಷಿಸಿದ್ದಾರೆ. ಖಾಸಗಿ ಸಾರಿಗೆ ಒಕ್ಕೂಟದ 37 ಸಂಘಟನೆಗಳು ಬಂದ್‌ಗೆ ಸಾಥ್‌ ಕೊಟ್ಟಿವೆ. ಪ್ರವಾಸೋದ್ಯಮ ವಾಹನಗಳ ಮಾಲೀಕರು, ಸಣ್ಣ ಕೈಗಾರಿಕೆಗಳ ಒಕ್ಕೂಟ, ಬೆಂಗಳೂರು ವಕೀಲರ ಸಂಘ, ಬಿಡಿಎ ನೌಕರರ ಸಂಘ & BWSSB ನೌಕರರ ಸಂಘ , ಬೆಂಗಳೂರು ಬೀದಿ ಬದಿ ಸಂಘ, ಬಿಬಿಎಂಪಿ ನೌಕರರ ಸಂಘ, ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಸೇರಿದಂತೆ 95 ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿವೆ.

ಇದನ್ನೂ ಓದಿ: Bengaluru Bandh News Live Updates: ಕಾವೇರಿ ವಿವಾದ: ಇಂದು ಬೆಂಗಳೂರು ಬಂದ್‌

ಇಷ್ಟೇ ಅಲ್ಲ ವಿಪಕ್ಷ ಬಿಜೆಪಿ ಬೆಂಗಳೂರು ಬಂದ್​ಗೆ ನೈತಿಕ ಬೆಂಬಲ ಘೋಷಣೆ ಮಾಡಿದೆ. ಜೆಡಿಎಸ್ ಸಂಪೂರ್ಣ ಬೆಂಬಲ ನೀಡಿದೆ. ಇಂದು ಜೆಡಿಎಸ್ ಬೆಂಗಳೂರು ಘಟಕ ಜೆಪಿ ಭವನದಿಂದ ಟೌನ್​ಹಾಲ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಖಾಸಗಿ ಸಾರಿಗೆ ಒಕ್ಕೂಟದ 37 ಸಂಘಟನೆಗಳು ಬಂದ್​ನಲ್ಲಿ ಭಾಗಿಯಾಗಲಿದ್ದು, ನ್ಯಾಷನಲ್ ಕಾಲೇಜಿನಿಂದ ಟೌನ್ ಹೌಲ್​ವರೆಗೆ ರ್ಯಾಲಿ ಹಮ್ಮಿಕೊಂಡಿವೆ. 2 ಸಾವಿರಕ್ಕೂ ಹೆಚ್ಚು ಚಾಲಕರು ಬಂದ್​ನಲ್ಲಿ ಭಾಗಿಯಾಗಲಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಟೌನ್​ಹಾಲ್​ನಿಂದ ಫ್ರೀಡಂಪಾರ್ಕ್​ವರೆಗೆ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಿಷೇಧಾಜ್ಞೆ.. 10 ಸಾವಿರ ಪೊಲೀಸರ ನಿಯೋಜನೆ

ಇನ್ನು ನೂರಾರು ಸಂಘಟನೆಗಳ, ಸಾವಿರಾರು ಮಂದಿ ಇವತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತುದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ನಿನ್ನೆ(ಸೆ.25) ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಾಗಿದೆ. 60 KSRP, 40 CAR ತುಕಡಿ, 10 ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಬಲವಂತವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಿದ್ರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ್ರೆ ಹುಷಾರ್ ಎಂದು ಪೊಲೀಸ್ ಆಯುಕ್ತ ದಯಾನಂದ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ..

ಅಂತೂ ಇವತ್ತು ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ಕಹಳೆ ಮೊಳಗಲಿದೆ. ಟೌನ್​ಹಾಲ್, ನ್ಯಾಷನಲ್ ಕಾಲೇಜು ಮೈದಾನ, ಜೆಡಿಎಸ್ ಕಚೇರಿ ಹೀಗೆ ಬೆಂಗಳೂರಿನ ದಿಕ್ಕು ದಿಕ್ಕುಗಳಿಂದ ಫ್ರೀಡಂಪಾರ್ಕ್​ವರೆಗೂ ರ್ಯಾಲಿ ನಡೆಸಲು ಸಂಘಟನೆಗಳು ಸಜ್ಜಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ