ಬೆಂಗಳೂರು: ಲಿಫ್ಟ್ ಕೆಟ್ಟುನಿಂತು ಅರ್ಧಗಂಟೆ ಸಿಲುಕಿದ ಸಂಸದ ಉಮೇಶ್ ಜಾಧವ್

| Updated By: ಆಯೇಷಾ ಬಾನು

Updated on: Jan 04, 2024 | 1:55 PM

ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯ ಲಿಫ್ಟ್​ನಲ್ಲಿ ಸಂಸದ ಉಮೇಶ್ ಜಾಧವ್‌ ಹಾಗೂ ಇತರ ಮೂವರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದರು. ಲಿಫ್ಟ್‌ ನಲ್ಲಿ ಹೋಗುತ್ತಿದ್ದ ವೇಳೆ ಕರೆಂಟ್‌ ಹೋಗಿದ್ದು ಲಿಫ್ಟ್ ನಿಂತು ಹೋಗಿತ್ತು. ಇನ್ನು ಕರೆಂಟ್ ಬಂದ ಮೇಲೂ ಲಿಫ್ಟ್ ವರ್ಕ್ ಆಗಿಲ್ಲ. ಸದ್ಯ ಈಗ ಹೊರ ಬಂದಿದ್ದಾರೆ.

ಬೆಂಗಳೂರು: ಲಿಫ್ಟ್ ಕೆಟ್ಟುನಿಂತು ಅರ್ಧಗಂಟೆ ಸಿಲುಕಿದ ಸಂಸದ ಉಮೇಶ್ ಜಾಧವ್
ಸಂಸದ ಉಮೇಶ್ ಜಾಧವ್
Follow us on

ಬೆಂಗಳೂರು, ಜ.04: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ (BJP Office) ಆಗಮಿಸಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಉಮೇಶ್‌ ಜಾಧವ್‌ (Umesh Jadhav) ಅವರು ಅರ್ಧ ಗಂಟೆಗಳ ಲಿಫ್ಟ್‌ ನಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿದೆ. ಲಿಫ್ಟ್ ಕೈಕೊಟ್ಟು ಅರ್ಧ ಗಂಟೆ ಸಂಸದ ಉಮೇಶ್ ಜಾಧವ್ ಹಾಗೂ ಮೂವರು ಸಿಲುಕಿದ್ದರು.

ಇಂದು ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂಸದ ಉಮೇಶ್‌ ಜಾಧವ್‌ ಹಾಗೂ ಇತರ ಮೂವರು ಲಿಫ್ಟ್‌ ನಲ್ಲಿ ಸಿಲುಕೊಂಡಿದ್ದರು. ಲಿಫ್ಟ್‌ ನಲ್ಲಿ ಹೋಗುತ್ತಿದ್ದ ವೇಳೆ ಕರೆಂಟ್‌ ಹೋಗಿದ್ದು ಲಿಫ್ಟ್ ನಿಂತು ಹೋಗಿತ್ತು. ಇನ್ನು ಕರೆಂಟ್ ಬಂದ ಮೇಲೂ ಲಿಫ್ಟ್ ವರ್ಕ್ ಆಗಿಲ್ಲ. ಕೊನೆಗೆ ಅರ್ಧ ಗಂಟೆಯ ಬಳಿಕ ಕಚೇರಿಯ ನೆಲಮಹಡಿಯಲ್ಲಿ ಲಿಫ್ಟ್ ಅರ್ಧದಲ್ಲಿ ತೆರೆದುಕೊಂಡಿದೆ. ಬಳಿಕ ಲಿಫ್ಟ್​ನಿಂದ ಜಾದವ್ ಹೊರ ಬಂದಿದ್ದಾರೆ. ಸದ್ಯ ಲಿಫ್ಟ್‌ ಟೆಕ್ನಿಷಿಯನ್‌ ಕರೆಸಿ ಕೆಟ್ಟು ನಿಂತ ಲಿಫ್ಟ್ ಸರಿಪಡಿಸಲಾಗುತ್ತಿದೆ.

ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ -ಸತೀಶ್​​​ ಜಾರಕಿಹೊಳಿ

ನನಗೆ ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಬಾರಿ ಅವಕಾಶ ಸಿಗಲಿದೆ ಎಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್​​​ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭಾ ಕ್ಷೇತ್ರದಲ್ಲೂ ನಾನು, ನಮ್ಮ ಕುಟುಂಬದ ಸದಸ್ಯರು ಯಾರೂ ಸ್ಪರ್ಧಿಸುವುದಿಲ್ಲ. ಈ ಬಾರಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಈ ಬಗ್ಗೆ ಹೈಕಮಾಂಡ್​ ಏನು​​ ಹೇಳುತ್ತದೋ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ: ಚಾಮರಾಜನಗರ: ಮಗುವಿನ ಹಾಡಿಯಲ್ಲಿ 60 ಮನೆಗಳಿಗಿಲ್ಲ ವಿದ್ಯುತ್; ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿರುವ ಜನರು

ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಹಾಗೂ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಸಿಗುವ ಭರವಸೆ ಹೊರ ಹಾಕಿದ್ದಾರೆ. ಇನ್ನು ಇದೇ ವೇಳೆ ರಾಮಮಂದಿರ ಉದ್ಘಾಟನೆ ಆಮಂತ್ರಣದ ಬಗ್ಗೆ ಮಾತನಾಡಿದ್ದಾರೆ. ರಾಮಮಂದಿರ ಉದ್ಘಾಟನೆ ಒನ್​ ಮ್ಯಾನ್​ ಶೋ ಆಗುತ್ತಿದೆ. ಕಾರ್ಯಕ್ರಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಲೋಕಸಭಾ ಚುನಾವಣೆ ಬೇರೆ ಬರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಇನ್ನೂ ಸಮಯ ಇದೆ ಆಹ್ವಾನ ಕೊಡಲಿ. ಯಾವ ಸಿಎಂಗೂ ಆಹ್ವಾನ ಕೊಟ್ಟಿಲ್ಲ. ಉತ್ತರ ಪ್ರದೇಶ ಸಿಎಂಗೆ ಮಾತ್ರ ಆಹ್ವಾನ ಇದೆ. ನನಗೆ ಆಹ್ವಾನ ಬಂದ್ರೆ ಹೋಗಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಇದೆ, ಅಲ್ಲೇ ಪೂಜೆ ಮಾಡುತ್ತೇನೆ. ಸದ್ಯ ರಶ್ ಇರುತ್ತೆ, ಮುಂದೆ ಯಾವಾಗಾದರೂ ಹೋಗುತ್ತೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ