ಸಿಟಿ ರವಿ ನೆನಪಾದವರನ್ನು, ಅಡ್ಡ ಸಿಕ್ಕವರನ್ನು ಕಚ್ತಾ ಕಚ್ತಾ ಬರ್ತಾರೆ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಟಾಂಗ್

ನಾವಿಬ್ಬರೂ ಒಂದೇ ಊರಿನವರು, ಕುಳಿತು ಮಾತಾಡಬೇಕು. ಇಬ್ಬರೂ ಕುಳಿತು ಮಾತನಾಡಿಕೊಳ್ಳುವುದು ಒಳ್ಳೆಯದು ಎಂದು ಬೆಂಗಳೂರಿನಲ್ಲಿ ಎಂ.ಪಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸಿಟಿ ರವಿ ನೆನಪಾದವರನ್ನು, ಅಡ್ಡ ಸಿಕ್ಕವರನ್ನು ಕಚ್ತಾ ಕಚ್ತಾ ಬರ್ತಾರೆ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಟಾಂಗ್
ಎಂ.ಪಿ ಕುಮಾರಸ್ವಾಮಿ ಹಾಗೂ ಸಿ.ಟಿ ರವಿ
Updated By: ganapathi bhat

Updated on: Aug 17, 2021 | 5:49 PM

ಬೆಂಗಳೂರು: ಒಂದೇ ಜಿಲ್ಲೆಯ ಬಿಜೆಪಿ ಶಾಸಕರ ನಡುವೆ ಭಿನ್ನಾಭಿಪ್ರಾಯ ಜೋರಾಗಿದೆ. ಬಿಜೆಪಿ ಕೇಂದ್ರ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಟಿ. ರವಿ ವಿರುದ್ಧ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಇಂದು (ಆಗಸ್ಟ್ 17) ಹೇಳಿಕೆ ನೀಡಿದ್ದಾರೆ. ಸಿ.ಟಿ. ರವಿ, ದೆಹಲಿಯಲ್ಲಿ ಆರಂಭ ಮಾಡಿ ನೆನಪಾದವರನ್ನು, ಅಡ್ಡ ಸಿಕ್ಕಿದವರನ್ನು ಎಲ್ಲರನ್ನೂ ಕಚ್ತಾ ಕಚ್ತಾ ಬರುತ್ತಾರೆ. ಇದೀಗ ನನ್ನನ್ನು ಕಚ್ಚಿದ್ದಾರೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ. ಎಂ.ಪಿ. ಕುಮಾರಸ್ವಾಮಿ ವಿರುದ್ಧ ಸಿ.ಟಿ. ರವಿ ಟೀಕೆ ವಿಚಾರವಾಗಿ ಬಿಜೆಪಿ ಶಾಸಕ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ನಾವಿಬ್ಬರೂ ಒಂದೇ ಊರಿನವರು, ಕುಳಿತು ಮಾತಾಡಬೇಕು. ಇಬ್ಬರೂ ಕುಳಿತು ಮಾತನಾಡಿಕೊಳ್ಳುವುದು ಒಳ್ಳೆಯದು ಎಂದು ಬೆಂಗಳೂರಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸಚಿವ ಸ್ಥಾನ ಕೇಳುವ ಬಗ್ಗೆ ಎಂ.ಪಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಈಗ ನಾನು ಸಚಿವ ಸ್ಥಾನವನ್ನು ಕೇಳುವ ಸಮಯ ಬಂದಿಲ್ಲ. ಸಮಯ ಬಂದಾಗ ಎಲ್ಲರಿಗಿಂತ ಮೊದಲೇ ನಾನು ಕೇಳುತ್ತೇನೆ ಎಂದು ತಿಳಿಸಿದ್ದಾರೆ.

ಮೂಡಿಗೆರೆಯನ್ನ ತಡವಾಗಿ ಪ್ರವಾಹಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿರುವ ವಿಚಾರವಾಗಿಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಸಮಸ್ಯೆ ಅರಿತು ಅದನ್ನು ಬಗೆಹರಿಸಿದ್ದಾರೆ ಎಂದು ಹೇಳಿದ್ದಾರೆ. ತಡವಾಗಿಯಾದ್ರೂ ಕ್ಷೇತ್ರವನ್ನ ಅತಿವೃಷ್ಠಿ ಪೀಡಿತ ತಾಲೂಕಿಗೆ ಸೇರಿಸಿದ್ದಾರೆ. ರೈನ್ ಗೇಜ್ ಎಲ್ಲಿಡಬೇಕಿತ್ತು ಅಲ್ಲಿ ಇಟ್ಟಿಲ್ಲ. ಯಾವಾಗಲೂ ಅತಿವೃಷ್ಠಿ ಜಾಗವದು. ಆದರೆ, ಈಗ ಕಂದಾಯ ಸಚಿವರು ಸಮಸ್ಯೆ ಅರಿತು ಅದನ್ನು ಪರಿಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

ನೆರೆಪೀಡಿತ ಪ್ರದೇಶದ ಪಟ್ಟಿಗೆ ಮೂಡಿಗೆರೆ ಸೇರ್ಪಡೆ
ನೆರೆಪೀಡಿತ ಪ್ರದೇಶದ ಪಟ್ಟಿಗೆ ಮೂಡಿಗೆರೆ ಸೇರ್ಪಡೆಗೆ ಎಂ.ಪಿ. ಕುಮಾರಸ್ವಾಮಿ ಮಾಡಿದ ಪ್ರತಿಭಟನೆಗೆ ಫಲ ಸಿಕ್ಕಿದೆ. ವಿಧಾನಸೌಧದ ಬಳಿ ಏಕಾಂಗಿಯಾಗಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾಡಿದ ಪ್ರತಿಭಟನೆಗೆ ಮಣಿದ ಸರ್ಕಾರ ಮೂಡಿಗೆರೆ ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಿದೆ.

ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೆರೆ ಪರಿಹಾರದಲ್ಲಿ ತಾರತಮ್ಯ ಎಂದು ಆರೋಪ ಮಾಡಿದ್ದರು. ಈ ವೇಳೆ ರಾಜ್ಯ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿತ್ತು. ಸದ್ಯ ಕಡೆಗೂ‌ ಮೂಡಿಗೆರೆಯನ್ನ ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ: ಸಿಟಿ ರವಿ ಕೊಲೆಗಡುಕ; ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ: ಎಂ ಲಕ್ಷ್ಮಣ್ ವಾಗ್ದಾಳಿ

MP Kumaraswamy: ಶಾಸಕ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆ ಫಲ: ಕಡೆಗೂ‌ ಮೂಡಿಗೆರೆ ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ

(Mudigere BJP MLA MP Kumaraswamy comments on BJP Leader CT Ravi Karnataka BJP)